ETV Bharat / entertainment

ಡಾಲಿ ಧನಂಜಯ್,​ ಸತ್ಯದೇವ್ ನಟನೆಯ 'ಜೀಬ್ರಾ' ಕಲೆಕ್ಷನ್​ ಎಷ್ಟು? ಸ್ಕ್ರೀನ್​ ಸಂಖ್ಯೆ ಹೆಚ್ಚಳ - ZEBRA COLLECTION

ಕಳೆದ ದಿನ ಅದ್ಧೂರಿಯಾಗಿ ತೆರೆಕಂಡಿರುವ 'ಜೀಬ್ರಾ' ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಸಿನಿಮಾ ಸ್ಕ್ರೀನ್​​ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಕಲೆಕ್ಷನ್ ಕೂಡಾ ಉತ್ತಮವಾಗಿದೆ.

Zebra poster
'ಜೀಬ್ರಾ' ಪೋಸ್ಟರ್ (Photo: Film Poster)
author img

By ETV Bharat Entertainment Team

Published : Nov 23, 2024, 4:14 PM IST

ಸ್ಯಾಂಡಲ್​ವುಡ್​ನ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಮತ್ತು ಟಾಲಿವುಡ್​ ಸೂಪರ್​ ಸ್ಟಾರ್​ ಸತ್ಯದೇವ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ ''ಜೀಬ್ರಾ'' ಕಳೆದ ದಿನ ಅದ್ಧೂರಿಯಾಗಿ ತೆರೆಕಂಡಿದೆ. ಟೈಟಲ್​, ಫಸ್ಟ್ ಲುಕ್, ಮೋಷನ್ ಪೋಸ್ಟರ್ , ಟ್ರೇಲರ್​ ಹೀಗೆ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡ ಕಳೆದ ದಿನ ಅದ್ಧೂರಿಯಾಗಿ ತೆರೆಕಂಡಿದೆ. ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈ ಬಗ್ಗೆ ಚಿತ್ರತಂಡ ಪೋಸ್ಟ್​ ಶೇರ್ ಮಾಡಿಕೊಂಡಿದೆ.

ಡಾಲಿ ಧನಂಜಯ್​ ಪೋಸ್ಟ್​: ತಮ್ಮ ಸಿನಿಮಾ ಯಶಸ್ಸಿನ ಬಗ್ಗೆ ಪೋಸ್ಟ್​ ಶೇರ್ ಮಾಡುವ ಮೂಲಕ ನಟ ಡಾಲಿ ಧನಂಜಯ್​ ಖುಷಿ ಹಂಚಿಕೊಂಡಿದ್ದಾರೆ. ಬಹುಭಾಷೆಗಳಲ್ಲಿ ತೆರೆಕಂಡಿರುವ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಸ್ಜ್ರೀನ್​​ (ಶೋಗಳ) ಸಂಖ್ಯೆ ಹೆಚ್ಚಿಸಲಾಗುತ್ತಿದೆ ಎಂದು ಸಹ ಬರೆದುಕೊಂಡಿದ್ದಾರೆ. ಅಲ್ಲಿಗೆ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂಬುದು ಸ್ಪಷ್ಟವಾಗಿದೆ.

'ಜೀಬ್ರಾ' ಕಲೆಕ್ಷನ್​ ಎಷ್ಟು? ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಧನಂಜಯ್ ಮತ್ತು​ ಸತ್ಯದೇವ್ ನಟನೆಯ ಜೀಬ್ರಾ 0.40 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಸಂಗ್ರಹದ ಬಗ್ಗೆ ಚಿತ್ರತಂಡದಿಂದ ಘೋಷಣೆ ನಿರೀಕ್ಷಿಸಿದ್ದಾರೆ ಸಿನಿಪ್ರಿಯರು.

ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಶ್ರೀಲೀಲಾ: 'ಕಿಸ್ಸಿಕ್' ಪ್ರೋಮೋ ನೋಡಿದ್ರಾ?

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ 'ಜೀಬ್ರಾ' ಇಂದು ತೆರೆಕಂಡಿದೆ. ತೆಲುಗು ನಟ ಸತ್ಯದೇವ್ ಜೊತೆ ಧನಂಜಯ್‌ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈಶ್ವರ್ ಕಾರ್ತಿಕ್ ಆ್ಯಕ್ಷನ್​​ ಕಟ್​​ ಹೇಳಿರುವ ಈ ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಕಥೆಯ ಸಿನಿಮಾವನ್ನು ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಿಸಿದ್ದಾರೆ. ಸತ್ಯ ಪೊನ್ಮಾರ್ ಅವರ ಕ್ಯಾಮರಾ ಕೈಚಳಕವಿದ್ದು, ರವಿ ಬಸ್ರೂರ್ ಸಮಗೀತ ನೀಡಿದ್ದಾರೆ. ಉಳಿದಂತೆ ಅನಿಲ್ ಕ್ರಿಶ್ ಎಡಿಟಿಂಗ್​, ಮೀರಾಖ್ ಸಂಭಾಷಣೆ ಇದೆ. ಕಾಸ್ಟ್ಯೂಮ್ ಡಿಸೈನರ್ ಆಗಿ ಅಶ್ವಿನಿ ಮುಲ್ಪುರಿ, ಗಂಗಾಧರ ಬೊಮ್ಮರಾಜು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಅವಾಚ್ಯ ಶಬ್ದ ಬಳಸಿದ್ದ ರಜತ್​ಗೆ ಕಿಚ್ಚನ ಕ್ಲಾಸ್​: ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆಂದ ಸ್ಪರ್ಧಿಗೆ ಸುದೀಪ್ ಪಾಠ​​

ಸದ್ಯ ಬಹುಬೇಡಿಕೆ ನಟರಾದ ಡಾಲಿ ಧನಂಜಯ್ ಮತ್ತು​ ಸತ್ಯದೇವ್ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆರಂಭಿಕವಾಗಿ ಚಿತ್ರವು ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸುತ್ತಿದ್ದು, ಇಂದು ಮತ್ತು ನಾಳೆಯ ವೀಕೆಂಡ್ ಶೋಗಳಲ್ಲಿ ಸಿನಿಮಾ ಅತಿ ಹೆಚ್ಚು ಕಲೆಕ್ಷನ್​ ಮಾಡುವ ನಿರಿಕ್ಷೆಗಳಿವೆ.​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.