ETV Bharat / entertainment

ಯಶ್​​ ಕನ್ನಡ ಪ್ರೇಮ ಮತ್ತೊಮ್ಮೆ ಸಾಬೀತು: ಮಕ್ಕಳೊಂದಿಗೆ ಮಗುವಾದ ರಾಕಿ ಭಾಯ್​; ಮುದ್ದಾದ ವಿಡಿಯೋಗಳಿಲ್ಲಿವೆ​ - ROCKING STAR YASH

ರಾಕಿಂಗ್​ ಸ್ಟಾರ್​ ಯಶ್​​​ ಅವರಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದು, ಮತ್ತೊಮ್ಮೆ ನಟನ ಕನ್ನಡ ಪ್ರೇಮ ಸಾಬೀತಾಗಿದೆ.

Rocking star Yash
ರಾಕಿಂಗ್​ ಸ್ಟಾರ್​ ಯಶ್​​​ (Photo source: ANI)
author img

By ETV Bharat Entertainment Team

Published : Nov 1, 2024, 2:17 PM IST

69ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಭಾರತೀಯ ಚಿತ್ರರಂಗದಾದ್ಯಂತ ತನ್ನದೇ ವಿಭಿನ್ನ ಸ್ಟಾರ್​ಡಮ್​ ಹೊಂದಿರುವ ರಾಕಿಂಗ್​ ಸ್ಟಾರ್​ ಯಶ್​​​ ಕನ್ನಡಾಭಿಮಾನಿಗಳಿಗೆ ವಿಶೇಷವಾಗಿ ಶುಭ ಕೋರಿದ್ದಾರೆ. ಜೊತೆಗೆ, ಯಶ್​​ ಕನ್ನಡ ಪ್ರೇಮ ಸಾಬೀತುಪಡಿಸುವ ಹಲವು ಫೊಟೋ ವಿಡಿಯೋಗಳಿಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಯಶ್​​ ಪೋಸ್ಟ್​​: ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಧ್ವಜದ ಫೋಟೋ ಹಂಚಿಕೊಂಡ ನಟ ಯಶ್​​ ''ಕಲಿಯೋಕೆ ಕೋಟಿ ಭಾಷೆ , ಆಡೋಕೆ ಒಂದೇ ಭಾಷೆ, ಕನ್ನಡ.... ಕನ್ನಡ..... ಕಸ್ತೂರಿ ಕನ್ನಡ'' ಎಂದು ಬರೆದುಕೊಂಡಿದ್ದಾರೆ.

ಈ ಹೆಸರಾಂತ ನಟ ಪಕ್ಕಾ ಫ್ಯಾಮಿಲಿ ಮ್ಯಾನ್​ ಕೂಡಾ ಹೌದು. ಚಿತ್ರೀಕರಣ ಹೊರತುಪಡಿಸಿದರೆ, ಕುಟುಂಬಕ್ಕೆ ತಮ್ಮ ಹೆಚ್ಚಿನ ಸಮಯ ಕೊಡುತ್ತಾರೆ. ವಿಭಿನ್ನ ಸ್ಟಾರ್​ ಡಮ್​ ಹೊಂದಿರುವ ರಾಕಿಂಗ್​ ಸ್ಟಾರ್​ನ ವಿಡಿಯೋಗಳು ಕಳೆದ ಒಂದೆರಡು ದಿನಗಳಿಂದ ಸಖತ್​​ ಸದ್ದು ಮಾಡುತ್ತಿದೆ. ಇತ್ತಿಚೆಗಷ್ಟೇ ತಮ್ಮ ಪುತ್ರನ ಐದನೇ ವರ್ಷದ ಹುಟ್ಟುಹಬ್ಬವನ್ನು ತಮ್ಮವರ ಸಮ್ಮುಖದಲ್ಲಿ ಆಚರಿಸಿರುವ ನಟ, ಶಿವಣ್ಣನ ಸೂಪರ್​ ಹಿಟ್​ ಸಾಂಗ್​​​ಗೆ ಕುಣಿದು ಕುಪ್ಪಳಿಸಿದ್ದರು. ಇದೀಗ ಮಕ್ಕಳೊಂದಿಗೆ ಮಗುವಾಗಿ ಆಟ ಆಡುತ್ತಿರುವ ವಿಡಿಯೋಗಳು ವೈರಲ್​​ ಆಗುತ್ತಿವೆ.

ಬರ್ತ್​ಡೇ ಸೆಲೆಬ್ರೇಟ್​ ಮಾಡಿರುವ ಲೊಕೇಶನ್​ನಲ್ಲೇ ಐರಾ ಮತ್ತು ಯಥರ್ವ್​​ ಜೊತೆ ಆಟ ಆಡಿದ್ದಾರೆ. ಯಥರ್ವ್​ ಮತ್ತು ಯಶ್​ ಅವರ ಒಂದೊಂದು ಕಾಲನ್ನು ಜೋಡಿಸಿ ಹಗ್ಗ ಕಟ್ಟಲಾಗಿದೆ. ಮತ್ತೊಂದು ಕಾಲಿನ ಸಹಾಯದಿಂದ ಇಬ್ಬರೂ ಕುಟುಂತ್ತಾ ಮುಂದೆ ಸಾಗಿದ್ದಾರೆ. ಯಶ್​ ಪಕ್ಕದಲ್ಲಿ ಮಗಳು ಐರಾ ಕೂಡಾ ಇದ್ದಾಳೆ. ತಮ್ಮ ಮುದ್ದು ಮಕ್ಕಳೊಂದಿಗೆ ಖ್ಯಾತ ನಟ ಗುಣಮಟ್ಟದ ಸಮಯ ಕಳೆದಿರೋದು ಈ ವಿಡಿಯೋದಲ್ಲಿ ಗೊತ್ತಾಗುತ್ತದೆ. ಮುದ್ದಾದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಪ್ರೀತಿಯ ಧಾರೆ ಎರೆಯುತ್ತಿದ್ದಾರೆ.

ಇನ್ನೂ ಅಭಿಮಾನಿಯೋರ್ವರ ಕಾರಿನ ಮೇಲೆ ನಟ ಯಶ್​ ಅವರು ಕನ್ನಡದಲ್ಲೇ ಸಹಿ ಹಾಕಿದ್ದಾರೆ ಎನ್ನಲಾದ ವಿಡಿಯೋ ಸಹ ವೈರಲ್​ ಆಗಿದೆ.

ಕಳೆದ ದಿನ ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡ ನಟನ ವಿಡಿಯೋ ಅಭಿಮಾನಿಗಳ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಆ್ಯಕ್ಷನ್​​ ಸ್ಟಾರ್​ನ ಮಸ್ತ್​ ಡ್ಯಾನ್ಸ್ ಈ ವಿಡಿಯೋದಲ್ಲಿ ನೋಡಬಹುದಾಗಿದೆ. ನಟನ ಡ್ಯಾನ್ಸ್ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿತ್ತು. ಯಥರ್ವ್ ಬರ್ತ್​​ಡೇ ಸಂದರ್ಭ ಕುಣಿದು ಕುಪ್ಪಳಿಸಲು ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​​​ ಅವರ ಹಾಡನ್ನು ಆಯ್ಕೆ ಮಾಡಿಕೊಂಡಿದ್ದೇ ಈ ವಿಡಿಯೋದ ಹೈಲೆಟ್​ ಎನ್ನಬಹುದು.

ಇದನ್ನೂ ಓದಿ: 'ಬಘೀರಾ' ಕಲೆಕ್ಷನ್​​: ರೋರಿಂಗ್​ ಸ್ಟಾರ್ ಶ್ರೀಮುರುಳಿ​​, ರುಕ್ಷಿಣಿ ವಸಂತ್​​ ಸಿನಿಮಾ ಗಳಿಸಿದ್ದಿಷ್ಟು!

ಕುಣಿದು ಕುಪ್ಪಳಿಸಲು ಹೆಚ್ಚಾಗಿ ಬಳಸುವ ಹಿಟ್ ಸಾಂಗ್​​​ 'ಟಗರು' ಸಿನಿಮಾದ ಟೈಟಲ್​ ಟ್ರ್ಯಾಕ್​ ಟಗರು ಬಂತು ಟಗರುಗೆ ಸಖತ್​ ಸ್ಟೆಪ್​ ಹಾಕಿದ್ದರು. ತಮ್ಮದೇ ಶೈಲಿಯಲ್ಲಿ ಸ್ಟೈಲಿಶ್​ ಸ್ಟೆಪ್​ ಹಾಕಿ ನೋಡುಗರ ಗಮನ ಸೆಳೆದಿದ್ದರು.

ಇದನ್ನೂ ಓದಿ: ಶಿವಣ್ಣನ ಟಗರು ಸಾಂಗ್​ಗೆ ಯಶ್​ ಮಸ್ತ್​ ಡ್ಯಾನ್ಸ್​​: ಮಗನ ಬರ್ತ್​ಡೇ ಪಾರ್ಟಿ ವಿಡಿಯೋ ವೈರಲ್​

2019ರ ಅಕ್ಟೋಬರ್​ 30ರಂದು ಯಥರ್ವ್​ ಜನಿಸಿದ್ದು, ಬುಧವಾರದಂದು ತನ್ನ ಐದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಾಯಿ ರಾಧಿಕಾ ಪಂಡಿತ್​​ ಕುಟುಂಬದ ಸುಂದರ ಸಮಯವನ್ನು ಫೋಟೋ ವಿಡಿಯೋಗಳ ಮೂಲಕ ಹಂಚಿಕೊಂಡಿದ್ದರು. ಸದ್ಯ ಯಶ್​ ಅವರ ವಿಡಿಯೋಗಳು ವ್ಯಾಪಕವಾಗಿ ವೈರಲ್​ ಆಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.