ETV Bharat / entertainment

ಕರ್ನಾಟಕದಲ್ಲೇ ಯಶ್ 'ಟಾಕ್ಸಿಕ್​' ಚಿತ್ರೀಕರಣ: ಕಾರಣಗಳಿಲ್ಲಿವೆ - Toxic Shooting

author img

By ETV Bharat Karnataka Team

Published : Apr 3, 2024, 4:04 PM IST

ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ 'ಟಾಕ್ಸಿಕ್' ಚಿತ್ರವನ್ನು ಕರ್ನಾಟಕದಲ್ಲೇ ಚಿತ್ರೀಕರಿಸಲು ಯಶ್​ ತಂಡ ನಿರ್ಧರಿಸಿದೆ.

Yash starrer Toxic
ಯಶ್ 'ಟಾಕ್ಸಿಕ್​'

''ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್'' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಸಿನಿಪ್ರಿಯರು, ಅಭಿಮಾನಿಗಳು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನಿಟ್ಟುಕೊಂಡಿದ್ದಾರೆ. ನಟನಾಗಿ ಗುರುತಿಸಿಕೊಂಡಿರುವ ರಾಕಿಂಗ್​ ಸ್ಟಾರ್ ಯಶ್​​​ ಈ ಚಿತ್ರದ ಮೂಲಕ ನಿರ್ಮಾಪಕನಾಗಿಯೂ ಹೊರಹೊಮ್ಮಲಿದ್ದಾರೆ. ಯಶ್​ ನಿರ್ಮಾಣದ ಚೊಚ್ಚಲ ಚಿತ್ರವನ್ನು ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸಲಿದ್ದಾರೆ. ಈ ಮೂಲಕ ಕೆಜಿಎಫ್​ ಸ್ಟಾರ್ ಹೊಸ ಪ್ರಯಾಣವನ್ನು ಆರಂಭಿಸಿದ್ದಾರೆ.

ಬ್ಲಾಕ್​ಬಸ್ಟರ್ ಚಿತ್ರ 'ಕೆಜಿಎಫ್‌'ನಲ್ಲಿ ರಾಕಿ ಭಾಯ್ ಪಾತ್ರಕ್ಕೆ ಹೆಸರುವಾಸಿಯಾಗಿರುವ ಯಶ್ ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರನ್ನು ಆಕರ್ಷಿಸಿದ್ದು ಮಾತ್ರವಲ್ಲದೇ, ಕನ್ನಡ ಚಿತ್ರರಂಗದ ಶಕ್ತಿಯಾಗಿದ್ದಾರೆ. ವೆಂಕಟ್ ಕೆ. ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಯಶ್​ (ನಿರ್ಮಾಪಕನಾಗಿ) ಕೈಜೋಡಿಸಿದ್ದು, ಈ ಬಹುನಿರೀಕ್ಷಿತ ಪ್ರಾಜೆಕ್ಟ್ ಮೂಲಕ ಕರ್ನಾಟಕ ಚಿತ್ರೋದ್ಯಮದ ಸಾಮರ್ಥ್ಯ ಪ್ರದರ್ಶಿಸಲು ಯಶ್ ಮುಂದಾಗಿದ್ದಾರೆ.

'ಟಾಕ್ಸಿಕ್' ಅನ್ನು ಕರ್ನಾಟಕದಲ್ಲೇ ಚಿತ್ರೀಕರಿಸುವ ನಿರ್ಧಾರ ಚಿತ್ರತಂಡದ್ದು. ಕೆಲ ಸೌಲಭ್ಯಗಳ ಕೊರತೆ ಕಾರಣ, ಕೆಲ ಸಿನಿಮಾಗಳ ಪ್ರಮುಖ ದೃಶ್ಯಗಳ ಶೂಟಿಂಗ್ ರಾಜ್ಯದ ಹೊರಗೆ ನಡೆಯುತ್ತವೆ. ಈ ಸವಾಲನ್ನು ಗಮನದಲ್ಲಿಟ್ಟುಕೊಂಡ ಯಶ್ ಮತ್ತು ನಿರ್ಮಾಣ ತಂಡ ತಮ್ಮ ಈ ಕಥೆಯ ನಿರೂಪಣಾ ಶೈಲಿಯಲ್ಲಿ ಕೆಲ ಬದಲಾವಣೆ ತರಲು ನಿರ್ಧರಿಸಿದೆ. ಶೂಟಿಂಗ್​ ಪ್ರಕ್ರಿಯೆ ಎದುರಿಸುವ ಸವಾಲುಗನ್ನು ಜಯಿಸುವುದು ಮಾತ್ರವಲ್ಲದೇ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಚಿತ್ರತಂಡದವರು ಹೊಂದಿದ್ದಾರೆ.

"ನಾವು ಈಗಾಗಲೇ ಬೃಹತ್ ಸೆಟ್‌ಗಳನ್ನು ನಿರ್ಮಿಸಿದ್ದೇವೆ. ಗ್ರೌಂಡ್​ ಲೆವೆಲ್​ನಲ್ಲಿರುವ ಜನಸಾಮಾನ್ಯರು, ತಂತ್ರಜ್ಞರು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಅನೇಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದ್ದೇವೆ. ನಾವು ಜಾಗತಿಕ ಮಟ್ಟದ ಚಿತ್ರವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ನಿರ್ಮಾಪಕರು ದೃಢಪಡಿಸಿದ್ದಾರೆ.

  • " class="align-text-top noRightClick twitterSection" data="">

ಕರ್ನಾಟಕದಲ್ಲಿ ಟಾಕ್ಸಿಕ್ ಅನ್ನು ನಿರ್ಮಾಣ ಮಾಡುವ ನಿರ್ಧಾರ ಒಂದು ಸ್ಟ್ರ್ಯಾಟಜಿಯಾಗಿದೆ. ಈ ಪ್ರೊಜೆಕ್ಟ್​​ ಅನ್ನು ಎಲ್ಲಿ ಬೇಕಾದರೂ ಮಾಡಬಹುದಾಗಿದ್ದರು, ಚಿತ್ರತಂಡದ ಆಯ್ಕೆ ಸ್ಥಳೀಯ ಚಲನಚಿತ್ರೋದ್ಯಮವನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಯಶ್ 'ಟಾಕ್ಸಿಕ್​' ಚಿತ್ರದಲ್ಲಿ ಕರೀನಾ ನಾಯಕಿಯಲ್ಲ; ವಿಶೇಷ ಪಾತ್ರ? ಬೆಂಗಳೂರಿನಲ್ಲೇ ಶೂಟಿಂಗ್​ - Kareena In Toxic

"ನಿರ್ಮಾಪಕರಾಗಿ, ನಾವು ಭಾರತ ಮತ್ತು ವಿದೇಶಗಳ ವಿವಿಧ ಲೊಕೇಶನ್​ಗಳನ್ನು ಹೊಂದಿದ್ದೆವು. ಸಿನಿಮಾ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರೂ ಸೆರಿದಂತೆ ವಿವಿಧ ಭಾಷೆಗಳ ನಟರು ಮತ್ತು ತಂತ್ರಜ್ಞರ ಆಯ್ಕೆ ಹೊಂದಿತ್ತು. ಆದ್ರೆ ಅಲ್ಲಿ ಸೆಟ್ ಸ್ಥಾಪಿಸುವುದು ಆರ್ಥಿಕ ಹೊರೆಯಾಗುತ್ತಿತ್ತು. ಅದಾಗ್ಯೂ, ಯಶ್ ಮತ್ತು ಕೆವಿಎನ್​, ಈ ಚಿತ್ರವನ್ನು ಬೇರೆಡೆ ಚಿತ್ರೀಕರಿಸುವ ಬದಲು ಕರ್ನಾಟಕದಲ್ಲಿ ನಿರ್ಮಾಣ ಮಾಡಲು, ನಮ್ಮ ಜನರ ಸಾಮರ್ಥ್ಯವನ್ನು ಪ್ರದರ್ಶಿಸಲು ಮುಂದಾಗಿದ್ದಾರೆ" ಎಂದು ಚಿತ್ರತಯಾರಕರು ತಿಳಿಸಿದ್ದಾರೆ.

ಇದನ್ನೂ ಓದಿ: ಸೆಟ್ಟೇರಿತು 'ರಾಮಾಯಣ': ಯಶ್, ರಣ್​ಬೀರ್, ಸಾಯಿಪಲ್ಲವಿ ಸಿನಿಮಾ ಮೇಲೆ ಭಾರಿ ನಿರೀಕ್ಷೆ - Ramayana

ಕಳೆದ ಡಿಸೆಂಬರ್‌ನಲ್ಲಿ 'ಟಾಕ್ಸಿಕ್‌' ಲಾಂಚ್​​ ಆಗಿದೆ. ಚಿತ್ರದ ಕಥಾವಸ್ತುವಿನ ಬಗ್ಗೆ ಹಲವು ಊಹಾಪೋಹಗಳಿವೆ. ಭಾರತದ ಕರಾವಳಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಮಾದಕವಸ್ತು ಸಂಘಟನೆಯ ಸುತ್ತ ಕಥೆ ಕೇಂದ್ರೀಕೃತವಾಗಿರಬಹುದು ಎಂದು ಹೇಳಲಾಗಿದೆ. ನಾಯಕಿ ಸ್ಥಾನಕ್ಕೆ ಕರೀನಾ ಕಪೂರ್ ಖಾನ್, ಕಿಯಾರಾ ಅಡ್ವಾಣಿ ಮತ್ತು ಶ್ರುತಿ ಹಾಸನ್ ಹೆಸರುಗಳು ಕೇಳಿಬರುತ್ತಿದ್ದು, ಅಭಿಮಾನಿಗಳಲ್ಲಿ ಅಪಾರ ಉತ್ಸಾಹವಿದೆ. ಹಲವು ಊಹಾಪೋಹಗಳಿದ್ದರೂ, ಚಿತ್ರತಂಡ ಮಾತ್ರ ಮೌನ ಮುಂದುವರಿಸಿದೆ. ಮುಂದಿನ ವರ್ಷ ಏಪ್ರಿಲ್ 10ರಂದು ಟಾಕ್ಸಿಕ್ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.