ETV Bharat / entertainment

'ಪ್ರೇಕ್ಷಕರಾಗಿ ನಾವು ನಕಾರಾತ್ಮಕವಾಗಿದ್ದೇವೆ': ಸೂಪರ್​ ಸ್ಟಾರ್ ಜೂ.ಎನ್​ಟಿಆರ್​ ಹೀಗಂದಿದ್ದೇಕೆ? - JR NTR

ದೇವರ ಸಿನಿಮಾ ಅದ್ಭುತ ಅಂಕಿ-ಅಂಶಳೊಂದಿಗೆ ಬಾಕ್ಸ್ ಆಫೀಸ್​ ಪ್ರಯಾಣ ಪ್ರಾರಂಭಿಸಿದರೂ ಕೂಡಾ ಆ ಕಲೆಕ್ಷನ್​ ಸ್ಪೀಡ್​ ಹಾಗೇ ಉಳಿದಿಲ್ಲ. ಸಿನಿಮಾ ಗಳಿಕೆಯಲ್ಲಿ ಇಳಿಕೆ ಕಂಡ ಬಗ್ಗೆ ನಟ ಜೂನಿಯರ್ ಎನ್​ಟಿಆರ್ ಪ್ರತಿಕ್ರಿಯಿಸಿದ್ದಾರೆ. ​​

Jr NTR Devara Poster
ಜೂನಿಯರ್ ಎನ್​ಟಿಆರ್​​ ದೇವರ ಪೋಸ್ಟರ್ (Photo source: Film Poster)
author img

By ETV Bharat Karnataka Team

Published : Oct 9, 2024, 2:26 PM IST

ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಜೂನಿಯರ್ ಎನ್​ಟಿಆರ್​​ ನಟನೆಯ ಬಹುನಿರೀಕ್ಷಿತ ಚಿತ್ರ 'ದೇವರ: ಭಾಗ 1' ತೆರೆಕಂಡು ಸೂಪರ್​ ಹಿಟ್​ ಆಗಿದೆ. ರಾಮ್ ಚರಣ್ ಜೊತೆಗೆ ತೆರೆಹಂಚಿಕೊಂಡಿದ್ದ ಆರ್​ಆರ್​ಅರ್​ ಬ್ಲಾಕ್​ಬಸ್ಟರ್ ಹಿಟ್ ಆಗಿ, ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಆಕರ್ಷಿಸಿದ ನಂತರ ಬಂದ ಜೂನಿಯರ್​ ಎನ್​ಟಿಆರ್​ ಅವರ ಬಹುನಿರೀಕ್ಷಿತ ಚಿತ್ರವಿದು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಆರಂಭ ಹೊಂದಿದರೂ ಕೂಡಾ ಆ ವೇಗವನ್ನು ಉಳಿಸಿಕೊಳ್ಳುವಲ್ಲಿ ಇದೀಗ ಸವಾಲುಗಳನ್ನು ಎದುರಿಸುತ್ತಿದೆ. ಚಲನಚಿತ್ರ ನಿರ್ಮಾಪಕರು ತಮ್ಮ ಸಿನಿಮಾದ ಆರಂಭಿಕ ಯಶಸ್ಸನ್ನು ಸಂಭ್ರಮಿಸಿದ್ದರೂ ಸಹ, ಜೂನಿಯರ್ ಎನ್​​​ಟಿಆರ್​ ಚಿತ್ರದ ಸದ್ಯ ಪರಿಸ್ಥಿತಿ, ಪ್ರದರ್ಶನದ ಬಗ್ಗೆ ಬಹಿರಂಗಪಡಿಸಿದ್ದಾರೆ.

ದೇವರ ಸಿನಿಮಾ ಬಿಡುಗಡೆ ನಂತರ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಇಂದಿನ ಪ್ರೇಕ್ಷಕರಲ್ಲಿ ಹೆಚ್ಚುತ್ತಿರುವ ವಿಮರ್ಶಾತ್ಮಕ ಸ್ವಭಾವದ ಬಗ್ಗೆ ನಾಯಕ ನಟ ಜೂನಿಯರ್ ಎನ್​ಟಿಆರ್​​ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಕೊರಟಾಲ ಶಿವ ಆ್ಯಕ್ಷನ್​ ಕಟ್​​ ಹೇಳಿರುವ ಈ ಚಿತ್ರ ಭಾರತದಲ್ಲಿ ತನ್ನ ಮೊದಲ 12 ದಿನಗಳಲ್ಲಿ 253.25 ಕೋಟಿ ರೂಪಾಯಿ (ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್ ವರದಿ ಪ್ರಕಾರ) ಗಳಿಸಿದೆ. ಅದಾಗ್ಯೂ, ಈ ಚಿತ್ರಕ್ಕೆ ವಿಮರ್ಶಕರು ಮತ್ತು ವೀಕ್ಷಕರಿಂದ ಮಿಶ್ರ ವಿಮರ್ಶೆ ಬಂದಿವೆ. "ಇತ್ತೀಚಿನ ದಿನಗಳಲ್ಲಿ ನಾವು ಪ್ರೇಕ್ಷಕರಾಗಿ ಬಹಳಾನೇ ನಕಾರಾತ್ಮಕವಾಗಿದ್ದೇವೆ. ಇನ್ನು ಮುಂದೆ ನಾವು ಮುಗ್ಧ ರೀತಿಯಲ್ಲಿ ಸಿನಿಮಾವನ್ನು ಎಂಜಾಯ್​ ಮಾಡಲು ಸಾಧ್ಯವಿಲ್ಲ" ಎಂದು ಜೂನಿಯರ್​ ಎನ್​ಟಿಆರ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೂನಿಯರ್ ಎನ್​​ಟಿಆರ್​​ ಬಾಲ್ಯದ ಮುಗ್ಧತೆ ಬಗ್ಗೆ ಮಾತನಾಡಿದರು. ಯಾವುದೇ ಪೂರ್ವಾಗ್ರಹವಿಲ್ಲದೇ ಚಲನಚಿತ್ರಗಳನ್ನು ವೀಕ್ಷಿಸುವ ತಮ್ಮ ಪುತ್ರರಾದ ಅಭಯ್ ಮತ್ತು ಭಾರ್ಗವ್ ಅವರೊಂದಿಗೆ ಹೋಲಿಕೆ ಮಾಡಿದರು. "ನಾನು ನನ್ನ ಮಕ್ಕಳನ್ನು ನೋಡುವಾಗ, ಅವರು ಯಾವ ನಟ ಅಥವಾ ಯಾವ ಸಿನಿಮಾವನ್ನು ನೋಡುತ್ತಿದ್ದೇವೆ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಕೇವಲ ಸಿನಿಮಾಗಳನ್ನು ನೋಡಿ ಆನಂದಿಸುತ್ತಾರೆ. ಆದ್ರೆ ನಾವೇಕೆ ಹಾಗೆ ಮುಗ್ಧರಾಗಿರಲು ಸಾಧ್ಯವಿಲ್ಲ ಎಂಬ ಬಗ್ಗೆ ನನಗೆ ಆಶ್ಚರ್ಯವಾಗುತ್ತದೆ'' ಎಂದು ತಿಳಿಸಿದ್ದಾರೆ.

ಇಂದಿನ ಪ್ರೇಕ್ಷಕರು ಸಿನಿಮಾಗಳನ್ನು ಅತಿಯಾಗಿ ವಿಶ್ಲೇಷಿಸುವ ಪ್ರವೃತ್ತಿಯ ಬಗ್ಗೆಯೂ ಮಾತನಾಡಿದರು. "ಇಂದು ನಾವು ಪ್ರತೀ ಸಿನಿಮಾಗಳನ್ನು ವಿಶ್ಲೇಷಿಸುವ ಸಲುವಾಗೇ ವೀಕ್ಷಿಸುತ್ತಿದ್ದೇವೆ. ನಾವೆಲ್ಲರೂ ಚಲನಚಿತ್ರಗಳನ್ನು ನಿರಂತರವಾಗಿ ಜಡ್ಜ್​ ಮಾಡುತ್ತೇವೆ, ವಿಶ್ಲೇಷಿಸುತ್ತೇವೆ ಮತ್ತು ಅತಿಯಾಗಿ ಯೋಚಿಸುತ್ತೇವೆ. ಬಹುಶಃ ನಾವು ಅತಿಯಾಗಿ ಸಿನಿಮಾಗೆ ಒಡ್ಡಿಕೊಂಡಿರುವುದೇ ನಮ್ಮನ್ನು ಹೀಗೆ ಮಾಡಿದೆ" ಎಂದು ನಟ ತಿಳಿಸಿದರು.

ಸಿನಿಮಾಗಳನ್ನು ನೋಡಿ ಆನಂದಿಸುವುದರಿಂದ ಹಿಡಿದು ಅವುಗಳನ್ನು ವಿಮರ್ಶಿಸುವವರೆಗಿನ ಈ ವಿಕಸನ ಪ್ರೇಕ್ಷಕರ ನಡವಳಿಕೆಯಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ. ಸಿನಿಮಾ ನೋಡುವ ಸಂತೋಷದ ವಾತಾವರಣ ನಮ್ಮ ಜಡ್ಜ್​​ಮೆಂಟಲ್​​ ಸ್ವಭಾವದಿಂದ ಮಂಕಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: ನಿನ್ನೆ ಪ್ರೀತಿ, ಇಂದು ಮುನಿಸು: ಬಿಗ್​​ ಬಾಸ್​​​ ಮನೆಯಲ್ಲಿ ಗೊಬ್ಬರ, ಮನಸ್ಸುಗಳೂ ಗೊಬ್ಬರ? ಎಲ್ಲರೂ ನಾಮಿನೇಟ್​​

ತಮ್ಮ ಈ ಅವಲೋಕನಗಳ ಹೊರತಾಗಿಯೂ, ಈ ಟ್ರೆಂಡ್​​ ಮತ್ತೆ ಅದೇ ಹಳೇ ದಾರಿ ಹಿಡಿಯಬಹುದೆಂಬ ಭರವಸೆ ನಟನದ್ದು. "ಬಹುಶಃ ಇವೆಲ್ಲವೂ ಒಂದು ಸರ್ಕಲ್​ನ ಭಾಗವಾಗಿರಬಹುದು. ಇವೆಲ್ಲವೂ ವಿಪರೀತಕ್ಕೆ ಹೋಗಬಹುದು ಅಥವಾ ಈಗಾಗಲೇ ನಡೆದಿರಬಹುದು. ಅದಾಗ್ಯೂ ಎಲ್ಲವೂ ಸರಿಯಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸರಳತೆಯ ಸಾಹುಕಾರ: ನೂಕುನುಗ್ಗಲಿನ ನಡುವೆ ತಾಳ್ಮೆಯಿಂದ ಸೆಲ್ಫಿಗೆ ಪೋಸ್ ಕೊಟ್ಟ ಸೂಪರ್​ ಸ್ಟಾರ್​

ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್‌ ಬ್ಯಾನರ್‌ಗಳ ಅಡಿಯಲ್ಲಿ ಕೊಸರಾಜು ಹರಿಕೃಷ್ಣ ಮತ್ತು ಸುಧಾಕರ್ ಮಿಕ್ಕಿಲಿನೇನಿ ಅವರು ಈ ದೇವರ ಚಿತ್ರವನ್ನು ನಿರ್ಮಿಸಿದ್ದಾರೆ ಜೂನಿಯರ್ ಎನ್‌ಟಿಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಪ್ರಸ್ತುತಪಡಿಸಿದ್ದಾರೆ. ಸೆಪ್ಟೆಂಬರ್ 27ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಚಿತ್ರಮಂದಿರ ಪ್ರವೇಶಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.