ತಾರಾ ಜೋಡಿ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಅದ್ಧೂರಿ ವಿವಾಹ ಡಿಸೆಂಬರ್ 4ರ ರಾತ್ರಿ ಹೈದರಾಬಾದ್‌ನ ಐಕಾನಿಕ್ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯಿತು. ಇದೊಂದು ಸಾಂಪ್ರದಾಯಿಕ ತೆಲುಗು ವಿವಾಹ ಸಮಾರಂಭವಾಗಿದ್ದು, ಫೋಟೋ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿರುವ ಜೋಡಿ, ಮದುವೆ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿರುವ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆಂಧ್ರ ಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಶೈಲಂಗೆ ನವದಂತಿ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದಿದ್ದಾರೆ. ನವದಂಪತಿ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಹಾಗೂ ನವ ಪಯಣಕ್ಕೆ ಶುಭ ಕೋರುತ್ತಿದ್ದಾರೆ.
ಬಹುದಿನಗಳ ಪ್ರೀತಿಗೆ ಡಿಸೆಂಬರ್ 4 ರಂದು ನಡೆದ ಖಾಸಗಿ ಸಮಾರಂಭದಲ್ಲಿ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಸಮಾರಂಭ ಆತ್ಮೀಯರಿಗಷ್ಟೇ ಸೀಮಿತವಾಗಿತ್ತು. ವಿವಾಹಿತರಾಗಿ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನ ಎಂದೂ ಕರೆಯಲ್ಪಡುವ ಶ್ರೀ ಭ್ರಮರಾಂಬಿಕಾ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ನವ ದಂಪತಿ ಭೇಟಿ ನೀಡಿದ್ದಾರೆ. ನವದಂಪತಿಗೆ ನಾಗ ಚೈತನ್ಯ ಅವರ ತಂದೆ, ನಟ ನಾಗಾರ್ಜುನ ಸಾಥ್ ನೀಡಿದ್ದಾರೆ.
ನಾಗಾರ್ಜುನ ಅವರ ಜೊತೆ ದೇವಾಲಯದಿಂದ ಹೊರಬಂದ ದಂಪತಿಯ ನೋಟ ಪಾಪರಾಜಿಗಳ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಅವರ ಮೊಗದಲ್ಲಿ ಸಂತೋಷ ಎದ್ದು ಕಾಣುತ್ತಿತ್ತು. ವೈಟ್ ಶರ್ಟ್, ಲುಂಗಿ ತೊಟ್ಟು ಸಾಂಪ್ರದಾಯಿಕವಾಗಿ ಸೂಪರ್ ಸ್ಟಾರ್ ನಾಗ ಚೈತನ್ಯ ಕಾಣಿಸಿಕೊಂಡರೆ, ನಟಿ ಶೋಭಿತಾ ಧೂಳಿಪಾಲ ಹಳದಿ ಸೀರೆಯಲ್ಲಿ ಬೆರಗುಗೊಳಿಸುವ ನೋಟ ಬೀರಿದರು. ಫ್ರೀ ಹೇರ್ಸ್ಟೈಲ್ ವಧುವಿನ ಆಕರ್ಷಣೆ ಹೆಚ್ಚಿಸಿತ್ತು.
ಇದನ್ನೂ ಓದಿ: ವದಂತಿ.. ಅದು ವದಂತಿಯಷ್ಟೇ! ಡಿವೋರ್ಸ್ ರೂಮರ್ಸ್ ನಡುವೆ ಜೊತೆಯಾಗಿ ಕಾಣಿಸಿಕೊಂಡ ಐಶ್ವರ್ಯಾ ಅಭಿಷೇಕ್
ದೇವಸ್ಥಾನದಲ್ಲಿ ದಂಪತಿ ನೋಟವು ಒಂದು ಸುಮಧುರ ಕ್ಷಣವಾಗಿತ್ತು. ಇದು ಅವರ ಹೊಸ ಪ್ರಯಾಣದ ಆರಂಭವನ್ನು ಸೂಚಿಸಿದೆ. ನವವಿವಾಹಿತ ತಾರಾ ಜೋಡಿಯನ್ನು ಅಭಿಮಾನಿಗಳು ಮತ್ತು ಪಾಪರಾಜಿಗಳು ಸುತ್ತುವರೆದರು. ನಂತರ ಕ್ಯಾಮರಾಗಳಿಗೆ ಪೋಸ್ ನೀಡಿದರು.
ಇದನ್ನೂ ಓದಿ: ಅಬ್ಬಬ್ಬಾ, ಆರ್ಆರ್ಆರ್ ದಾಖಲೆ ಪುಡಿಗಟ್ಟಿದ 'ಪುಷ್ಪ 2': ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಿದು
My heart is overflowing with gratitude. 🙏
— Nagarjuna Akkineni (@iamnagarjuna) December 5, 2024
To the media, thank you for your understanding and for giving us the space to cherish this beautiful moment. Your thoughtful respect and kind wishes have added to our joy.
To our dear friends, family, and fans, your love and blessings… pic.twitter.com/1rntU4tDQP
ಇದಕ್ಕೂ ಮೊದಲು, ಹಿರಿಯ ನಟ ನಾಗಾರ್ಜುನ ಅವರು ಮದುವೆಯ ಕೆಲ ಅನ್ಸೀನ್ ಫೋಟೋಗಳನ್ನು ಹಂಚಿಕೊಂಡಿದ್ದರು. ಸಮಾರಂಭದ ಸಂದರ್ಭ ಅವರ ಕುಟುಂಬ ಪಡೆದ ಅಗಾಧ ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಞತೆ ಅರ್ಪಿಸಿದರು. ಅವರ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ ಎಕ್ಸ್‌ನಲ್ಲಿ (ಟ್ವಿಟರ್) ಎರಡು ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ. ಒಂದು, ನಾಗಚೈತನ್ಯ ಅವರ ಅಜ್ಜ ಎಎನ್‌ಆರ್ ಅವರ ಪ್ರತಿಮೆಯೆದುರು ನವವಿವಾಹಿತರು ನಿಂತು ನಗು ಹಂಚಿಕೊಳ್ಳುತ್ತಿರುವ ಕ್ಷಣ. ಇನ್ನೊಂದು ಅವರ ಕ್ಲೋಸ್ ಫ್ಯಾಮಿಲಿ ಮೆಂಬರ್ಗಳನ್ನು ಸೆರೆ ಹಿಡಿದಿದೆ. "ನನ್ನ ಹೃದಯ ಕೃತಜ್ಞತಾ ಭಾವದಿಂದ ತುಂಬಿ ತುಳುಕುತ್ತಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳು ನಿಜವಾಗಿಯೂ ಈ ಸಂದರ್ಭವನ್ನು ಮರೆಯಲಾಗದಂತೆ ಮಾಡಿದೆ" ಎಂದು ಬರೆದುಕೊಂಡಿದ್ದರು.