ETV Bharat / entertainment

ಚಿರಂಜೀವಿ ಮುಖ್ಯಭೂಮಿಕೆಯ ''ವಿಶ್ವಂಭರ'' ಟೀಸರ್​​: ಹನುಮಂತನ ಗದೆ ಹಿಡಿದ ಮೆಗಾಸ್ಟಾರ್ - VISHWAMBHARA TEASER

ಚಿರಂಜೀವಿ ಮುಖ್ಯಭೂಮಿಕೆಯ 'ವಿಶ್ವಂಭರ' ಚಿತ್ರದ ಟೀಸರ್ ಅನಾವರಣಗೊಂಡಿದೆ.

Vishwambhara Teaser
ವಿಶ್ವಂಭರ ಟೀಸರ್ ರಿಲೀಸ್​ (Photo source: Film poster)
author img

By ETV Bharat Entertainment Team

Published : Oct 12, 2024, 2:12 PM IST

ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ''ವಿಶ್ವಂಭರ''. ಚಿತ್ರ ನಿರ್ಮಾಪಕರು ಇಂದು ಟೀಸರ್ ಅನಾವರಣಗೊಳಿಸುವ ಮೂಲಕ ಪ್ರೇಕ್ಷಕರ ಕುತೂಹಲ ಕೆರಳಿಸಿದ್ದಾರೆ. ಮಲ್ಲಿಡಿ ವಸಿಷ್ಟ ನಿರ್ದೇಶನದ ಈ ಚಿತ್ರದ ಟೀಸರ್ ಪ್ರೇಕ್ಷಕರಿಗೆ ಪುರಾಣ, ಸಾಹಸ ಅಂಶಗಳನ್ನೊಳಗೊಂಡ ಒಂದು ಅದ್ಭುತ ಸಿನಿಮೀಯ ಅನುಭವವನ್ನು ಒದಗಿಸುವ ಭರವಸೆ ನೀಡಿದೆ.

ಬ್ರಹ್ಮಾಂಡದ ಸಮತೋಲನವನ್ನು ಹದಗೆಡಿಸಲು ಬೆದರಿಕೆ ಹಾಕುವ ಪ್ರಬಲ ಮತ್ತು ನಿಗೂಢ ದುಷ್ಟಶಕ್ತಿಯನ್ನು ಎದುರಿಸುವ ವ್ಯಕ್ತಿಯ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ. ದುಷ್ಟಶಕ್ತಿ ಅಥವಾ ಖಳನಾಯಕನ ಗುರುತು ಬಹಿರಂಗವಾಗದಿದ್ದರೂ, ಟೀಸರ್ ಒಂದು ಸಂಘರ್ಷದ ಚಿತ್ರನವನ್ನು ಒದಗಿಸಿದೆ. ಚಿರಂಜೀವಿ ಅವರ ಪಾತ್ರ ವೀರನಂತೆ ತೋರಿದ್ದು, ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದಾರೆ.

ಈ ಸಿನಿಮಾಗಾಗೇ ರಚಿಸಲ್ಪಟ್ಟ ವಿಸ್ಮಯ ಲೋಕದ ದೃಶ್ಯಗಳೊಂದಿಗೆ ಟೀಸರ್ ಆರಂಭಗೊಂಡಿದೆ. ವಿಸ್ಮಯ ಲೋಕದ ಸೌಂದರ್ಯದ ಜೊತೆ ಜೊತೆಗೆ, ಖಳನಾಯಕರು ಸೃಷ್ಟಿಸುವ ನಕಾರಾತ್ಮಕ ಅನುಭವನ್ನೂ ಪ್ರದರ್ಶಿಸಿದೆ. ಈ ದೃಶ್ಯಗಳು ಶೀಘ್ರದಲ್ಲೇ ಉದ್ವಿಗ್ನ ವಾತಾವರಣಕ್ಕೆ ತಿರುಗುತ್ತವೆ. ನಂತರ, ಚಿರಂಜೀವಿಯ ಪಾತ್ರ ನೋಡುಗರಿಗೆ ಪ್ರಮುಖ ಆಕರ್ಷಣೆಯಾಗಿ ತೋರುತ್ತದೆ. ಕೊನೆಯ ಸೀನ್​​ ಟೀಸರ್‌ನ ಹೈಲೆಟ್​ ಅಂತಲೇ ಹೇಳಬಹುದು. ಹೋರಾಟದಲ್ಲಿ ಚಿರಂಜೀವಿ ಗದೆಯನ್ನು ಹಿಡಿದಿದ್ದು, ಭಗವಾನ್ ಹನುಮಂತನ ಶಕ್ತಿ ಮತ್ತು ಶೌರ್ಯದ ಚಿತ್ರಣವನ್ನು ಒದಗಿಸಿದೆ.

ಮಲ್ಲಿಡಿ ವಸಿಷ್ಟ ಅವರ ನಿರ್ದೇಶನಾ ಶೈಲಿ ಟೀಸರ್​ನ ಉದ್ದಕ್ಕೂ ಸಾಬೀತಾಗಿದೆ. ಪೌರಾಣಿಕ ಮತ್ತು ಆ್ಯಕ್ಷನ್​​ ಪ್ಯಾಕ್ಡ್ ಅಂಶಗಳನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತರುವ ಪ್ರಯತ್ನ ನಡೆದಿದೆ. ಚೋಟಾ ಕೆ ನಾಯ್ಡು ಅವರ ಕ್ಯಾಮರಾ ಕೈಚಳಕದಿಂದ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ. ಈ ಚಿತ್ರಕ್ಕಾಗಿ ರಚಿಸಲ್ಪಟ್ಟಿರುವ ಪ್ರಪಂಚದ ಸೌಂದರ್ಯ ಹೆಚ್ಚಿಸಿದೆ. ಎಂ.ಎಂ ಕೀರವಾಣಿ ಅವರ ಪವರ್​​ಫುಲ್​ ಸಂಗೀತವು ದೃಶ್ಯಗಳ ತೂಕ ಹೆಚ್ಚಿಸಿದೆ.

ಇದನ್ನೂ ಓದಿ: ನಟರಾಕ್ಷಸ ಡಾಲಿ ಧನಂಜಯ್ ನಿರ್ಮಾಣದ 'JC' ಮೇಕಿಂಗ್ ವಿಡಿಯೋ ರಿಲೀಸ್

ಯುವಿ ಕ್ರಿಯೇಷನ್ಸ್ ನಿರ್ಮಾಣದ 'ವಿಶ್ವಂಭರ' ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಮಾನವಾಗಿ ದೃಶ್ಯ ಮತ್ತು ಭಾವನಾತ್ಮಕ ಕಂಟೆಂಟ್​ಗಳನ್ನು ಪೂರೈಸುವ ಭರವಸೆ ನೀಡಿದೆ. ಚಿರಂಜೀವಿ ಅವರ ಅಭಿನಯ ಮತ್ತು ಅದ್ಭುತ ದೃಶ್ಯಗಳು ಸಿನಿಮಾ ನೋಡುವ ನಿನಿಪ್ರಿಯರ ಮತ್ತು ಅಭಿಮಾನಿಗಹಳ ಕಾತರ ಹೆಚ್ಚಿಸಿದೆ.

ಇದನ್ನೂ ಓದಿ: 2ನೇ ಮಗು ಹೊಂದುವ ಆಸೆ ವ್ಯಕ್ತಪಡಿಸಿದ ಆಲಿಯಾ ಭಟ್​: ಮಗಳು ರಾಹಾಗೆ 'ರಾಲಿಯಾ' ದಂಪತಿ ತೋರಿಸಲಿರುವ ಮೊದಲ ಸಿನಿಮಾಗಳಿವು

ಚಿರಂಜೀವಿ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರಖ್ಯಾತ ನಟ. ತಮ್ಮ ಅಮೋಘ ಅಭಿನಯದಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈವರೆಗೆ ತೆರೆಕಂಡ ಬಹುತೇಕ ಚಿತ್ರಗಳು ಸೂಪರ್ ಹಿಟ್​ ಆಗಿವೆ. ಅದರಂತೆ ವಿಶ್ವಂಭರ ಸಿನಿಮಾ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ. ಟೀಸರ್ ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟುಗೊಳಿಸಿದ್ದು, ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷಿತ ಚಿತ್ರ ಮುಂದಿನ ವರ್ಷಾರಂಭ ಚಿತ್ರಮಂದಿರ ಪ್ರವೇಶಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.