ETV Bharat / entertainment

WATCH: ನ್ಯೂಯಾರ್ಕ್​ನಲ್ಲಿ ಮಗಳ ಕೈ ಹಿಡಿದು ಸಾಗಿದ ವಿರಾಟ್​- ಅನುಷ್ಕಾ - Anushka Sharma and Virat Kohli - ANUSHKA SHARMA AND VIRAT KOHLI

ಕ್ರಿಕೆಟ್​ ಟೂರ್ನಿಗೆ ನ್ಯೂಯಾರ್ಕ್ ಸಿಟಿಗೆ ತೆರಳಿರುವ ವಿರಾಟ್​ ಕೊಹ್ಲಿ ಈ ನಡುವೆ ಕುಟುಂಬದೊಂದಿಗೆ ಕೆಲವು ಅದ್ಭುತ ಕ್ಷಣಗಳನ್ನು ಕಳೆದಿದ್ದಾರೆ.

watch-anushka-sharma-and-virat-kohlis-sweet-family-moment-with-daughter-vamika-in-new-york
ಮಗಳೊಂದಿಗೆ ವಿರಾಟ್​ ದಂಪತಿ (ಎಎನ್​ಐ)
author img

By ETV Bharat Karnataka Team

Published : Jun 8, 2024, 4:03 PM IST

ಹೈದರಾಬಾದ್: ಸೆಲೆಬ್ರಿಟಿ ದಂಪತಿಗಳಾಗಿರುವ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್​ ಕೊಹ್ಲಿ ತಮ್ಮ ಮುದ್ದು ಮಗಳು ವಮಿಕಾ ಕೊಹ್ಲಿಯೊಂದಿಗೆ ನ್ಯೂಯಾರ್ಕ್​ ಸಿಟಿಯಲ್ಲಿ ಕಂಡಿದ್ದಾರೆ. ಮುದ್ದಿನ ಮಗಳೊಂದಿಗೆ ಜೋಡಿ ಸಮಯ ಕಳೆದಿದ್ದು, ಮೂವರು ರುಚಿಯಾದ ಟ್ರಿಟ್​ ಅನ್ನು ರೆಸ್ಟೊರೆಂಟ್​ನಲ್ಲಿ ಸವಿದಿದ್ದಾರೆ. ಅನುಷ್ಕಾ ಮತ್ತು ವಿರಾಟ್​ ವಮಿಕಾ ಕೈಹಿಡಿದು ಹೋಟೆಲ್​ ಲಾಬಿಯಲ್ಲಿ ಸಾಗುತ್ತಿರುವ ದೃಶ್ಯಗಳು ಇದೀಗ ವೈರಲ್​ ಆಗಿದೆ. ಸೆರೆಯಯಾಗಿರುವ ವಿಡಿಯೋದಲ್ಲಿ ಅಮ್ಮ- ಮಗಳು ಒಂದೇ ರೀತಿಯ ಉಡುಗೆ ತೊಟ್ಟಿರುವುದನ್ನು ಕಾಣಬಹುದಾಗಿದೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳು ಸೆಲೆಬ್ರಿಟಿಗಳ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಡಿಯೋ ಕ್ಯೂಟ್​ ಆಗಿದೆ. ಆದರೆ, ಈ ಸ್ವೀಟ್​ ಕುಟುಂಬದ ಈ ಖಾಸಗಿತನವನ್ನು ಧಕ್ಕೆ ತರಬಾರದು ಎಂದು ತಿಳಿಸಿದ್ದಾರೆ. ಜೊತೆಗೆ ಅನೇಕ ಅಭಿಮಾನಿಗಳು ಕೂಡ ದಂಪತಿಯ ಖಾಸಗಿ ಕ್ಷಣಗಳನ್ನು ಗೌರವಿಸಬೇಕು ಎಂದಿದ್ದಾರೆ. ಅವರು ನಮ್ಮಂತೆ ಮನುಷ್ಯರು. ಅವರ ಖಾಸಗಿತನವನ್ನು ಅಡ್ಡಿಪಡಿಸಬೇಡಿ ಎಂದು ಅಭಿಮಾನಿಯೊಬ್ಬರು ಮನವಿ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನ ಅವರಿಗೆ ಕನಿಷ್ಠ ಖಾಸಗಿತನವನ್ನಾದರೂ ನೀಡಿ ಎಮದು ಮನವಿ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಕುರಿತು ಸಾಕಷ್ಟ ಚರ್ಚೆಗಳು ಹುಟ್ಟುಹಾಕಿದ್ದಾರೆ. ಸೆಲೆಬ್ರಿಟಿಗಳ ಖಾಸಗಿತನದ ಮಹತ್ವವನ್ನು ಸಾರಿದ್ದಾರೆ. ಅದರಲ್ಲೂ ಮಕ್ಕಳೊಂದಿಗೆ ಇದ್ದಾಗ ಅವರ ಖಾಸಗಿತನ ಕಾಪಾಡುವಂತೆ ಕೋರಿದ್ದಾರೆ. ಈಗಾಗಲೇ ವಿರಾಟ್​ ಮತ್ತು ಅನುಷ್ಕಾ ತಮ್ಮ ಮಕ್ಕಳ ಖಾಸಗಿತನ ಪ್ರಮುಖವಾಗಿದ್ದು, ಅವರ ಕುರಿತ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಖಾಸಗಿ ಹಕ್ಕು ಕಾಪಾಡುವಂತೆ ಉಡುಗೊರೆಗಳ ಮೂಲಕ ಪ್ಯಾಪಾರಾಜಿಗಳಿಗೆ ಕಳೆದ ತಿಂಗಳು ಮನವಿ ಮಾಡಿದ್ದರು. ಈ ಮೂಲಕ ವಮಿಕಾ ತಮ್ಮ ಆಕೆಯ ಸಹೋದರ ಅಕಾಯ್​ ಅನಧಿಕೃತ ಫೋಟೋಗಳನ್ನು ಪ್ರಕಟಿಸದಂತೆ ಕೋರಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋದಲ್ಲಿ, ಜೋಡಿ ತಮ್ಮ ಬಾಡಿಗಾರ್ಡ್​​ಗಳ ಜೊತೆಗೆ ವಿಹಾರ ನಡೆಸುತ್ತಿರುವುದು ವೈರಲ್​ ಆಗಿತ್ತು. ವಿರಾಟ್​ ಅನುಷ್ಕಾ ಮಗಳೊಂದಿಗಿನ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಖುದ್ದು ಹಂಚಿಕೊಂಡಿದ್ದರೂ, ಇದುವರೆಗೂ ವಮಿಕಾ ಮುಖದ ಪರಿಚಯ ಮಾಡಿಸಿಲ್ಲ. ಜೊತೆಗೆ ಮಗ ಅಕಾಯ್​ ವಿಚಾರದಲ್ಲೂ ಸೆಲೆಬ್ರಿಟಿ ದಂಪತಿಗಳು ಇದೇ ನಿಲುವು ತಾಳಿದ್ದು, ಮಕ್ಕಳನ್ನು ಲೈಮ್​ ಲೈಟ್​ನಿಂದ ದೂರ ಇಡುವ ಪ್ರಯತ್ನವನ್ನು ನಡೆಸಿದ್ದಾರೆ.

ಇದನ್ನೂ ಓದಿ: ಐಸಿಸಿ ವರ್ಷದ ಏಕದಿನ ಆಟಗಾರ 2023 ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.