ETV Bharat / entertainment

'ಪೆಪೆ' ಔಟ್ ಅಂಡ್ ಔಟ್ ಮಾಸ್ ಸಿನಿಮಾ: ಸೂಕ್ಷ್ಮ ನಟನೆ ಜೊತೆ ಆ್ಯಕ್ಷನ್ ಸಿಕ್ವೇನ್ಸ್​​​ನಲ್ಲೂ ವಿನಯ್ ಸ್ಕೋರ್! - Vinay Rajkumar PEPE - VINAY RAJKUMAR PEPE

ವಿನಯ್ ರಾಜ್​​​ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪೆಪೆ' ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್​ ಅವರಿಂದು ಸಂಜೆ 6:35ಕ್ಕೆ "ಪೆಪೆ" ಚಿತ್ರವನ್ನು ಒರಿಯನ್​ ಮಾಲ್​​​ನಲ್ಲಿ ನೋಡಲಿದ್ದಾರೆ ಎಂಬ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಾಯಕ ನಟ ಗಮನ ಸೆಳೆದಿದ್ದಾರೆ.

Vinay Rajkumar PEPE release
ವಿನಯ್ ರಾಜ್​​​ಕುಮಾರ್ ಪೆಪೆ ರಿಲೀಸ್​ (ETV Bharat)
author img

By ETV Bharat Karnataka Team

Published : Aug 30, 2024, 7:10 PM IST

ವಿನಯ್ ರಾಜ್​​​ಕುಮಾರ್ ಪೆಪೆ ರಿಲೀಸ್​ (ETV Bharat)

ಟೈಟಲ್​, ಟೀಸರ್​​, ಟ್ರೇಲರ್​, ಪೋಸ್ಟರ್​​ಗಳಿಂದ​ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ದೊಡ್ಮನೆ ಕುಡಿ ವಿನಯ್ ರಾಜ್​​​ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪೆಪೆ' ಇಂದು ರಾಜ್ಯಾದ್ಯಂತೆ ಬಿಡುಗಡೆ ಆಗಿದ್ದು, ಸಿನಿಪ್ರೇಮಿಗಳಿಂದ ಬಹುತೇಕ ಮೆಚ್ಚುಗೆ ಗಳಿಸಿದೆ. 'ಪೆಪೆ' ವಿನಯ್ ರಾಜ್​​ಕುಮಾರ್ ಸಿನಿ ಕೆರಿಯರ್​ನಲ್ಲಿ ಔಟ್ ಅಂಡ್ ಔಟ್ ಮಾಸ್ ಲುಕ್​​​ನಲ್ಲಿ ಕಾಣಿಸಿಕೊಂಡಿರುವ ಕಲ್ಟ್ ಕ್ಲಾಸಿಕ್ ಸಿನಿಮಾ.

ಚಿತ್ರದಲ್ಲಿ ಸರಸ್ವತಿಗೆ ಪೂಜೆ ಮಾಡುತ್ತೇವೆ, ಆದ್ರೆ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಓದುವುದಕ್ಕೆ ಕಳಿಸೋದಿಲ್ಲ. ಚಾಮುಂಡೇಶ್ವರಿ ದೇವರಿಗೆ ರಕ್ತ ಕೊಡುತ್ತೇವೆ. ಆದ್ರೆ ಸಂಪ್ರದಾಯ ಕುಟುಂಬದಲ್ಲಿ ರಕ್ತ ಮುಟ್ಟೋಲ್ಲ ಎಂಬ ಸೂಕ್ಷ್ಮ ವಿಷಯಗಳ ಬಗ್ಗೆ ಹೇಳಲಾಗಿದೆ. ಜೊತೆಗೆ ಜಾತಿ ವ್ಯವಸ್ಥೆ, ನೀರಿನ ತೊರೆ ವಿಚಾರಕ್ಕಾಗಿ ಎರಡು ಊರುಗಳ ಮಧ್ಯೆ ತಲತಲಾಂತರದಿಂದ ನಡುವೆ ನಡೆಯುವ ಗಲಾಟೆ, ಊರಿನ ಜನ ಹಾಗೂ ತಂದೆಯ ಸಾವಿಗೆ ಕಾರಣವಾದ ಹಣವಂತರ ವಿರುದ್ಧ ಹೋರಾಡುವ ಕಥೆಯನ್ನು ಈ 'ಪೆಪೆ' ಒಳಗೊಂಡಿದೆ.

ಈವರೆಗೆ ಲವರ್ ಬಾಯ್ ಇಮೇಜ್​​ನಿಂದಲೇ ಕನ್ನಡಿಗರ ಮನಗೆದ್ದಿದ್ದ ವಿನಯ್ ರಾಜ್​​ಕುಮಾರ್ ಇದೇ ಮೊದಲ ಬಾರಿಗೆ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸೂಕ್ಷ್ಮ ನಟನೆ ಹಾಗೂ ಆ್ಯಕ್ಷನ್ ಸಿಕ್ವೇನ್ಸ್​​​ನಲ್ಲಿ ಕಾಣಿಸಿಕೊಳ್ಳುವ ಮೂಲಕ ವಿನಯ್ ರಾಜ್​​ಕುಮಾರ್ ಕ್ಲಾಸ್​​ಗೂ ಸೈ ಮಾಸ್​​​ಗೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ.

ವಿನಯ್ ರಾಜ್​​ಕುಮಾರ್ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಟೀಚರ್ ಪಾತ್ರದಲ್ಲಿ ಇಷ್ಟ ಆಗುತ್ತಾರೆ. ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿ ಪೋಷಕ ನಟ ಕಿಟ್ಟಿ ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವಿನಯ್ ತಾಯಿಯಾಗಿ ಅರುಣಾ ಬಾಲರಾಜ್ ಹಾಗೂ ಮಯೂರ್ ಪಟೇಲ್ ಮಾವನ ಪಾತ್ರದಲ್ಲಿ ಮಿಂಚಿದ್ದಾರೆ. ಉಳಿದಂತೆ ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ ಕೆಳಮನೆ ನಟರು ತಮ್ಮ ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಭೈರತಿ ರಣಗಲ್ ಸಂದರ್ಶನ ಮಾಡಿದ ಸೂರ್ಯ: ನಾನಿ ಜೊತೆ ಸಿನಿ ಅನುಭವ ಹಂಚಿಕೊಂಡ ಶಿವಣ್ಣ - Shivanna with Nani

ಇನ್ನೂ ಚಿತ್ರದಲ್ಲಿ ರಕ್ತಸಿಕ್ತ ಸೀನ್ಸ್​​ ಹೆಚ್ಚಾಗಿವೆ. ಚಿತ್ರದಲ್ಲಿ ಹೆಚ್ಚಾಗಿ ಆಕ್ಷನ್ ಸನ್ನಿವೇಶಗಳಿಂದ ಕೂಡಿದೆ. ಡಾ. ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ 'ಪೆಪೆ' ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರದ ಕ್ಲೈಮಾಕ್ಸ್​​​ನಲ್ಲಿ ಬರುವ ಆ್ಯಕ್ಷನ್ ಸನ್ನಿವೇಶದಲ್ಲಿ ವಿನಯ್ ಅವರು ಥೇಟ್ ತಮ್ಮ ದೊಡ್ಡಪ್ಪ ಶಿವಣ್ಣ ಹಾಗೂ ಚಿಕ್ಕಪ್ಪ ಪುನೀತ್ ಅವರಂತೆಯೇ ಕಾಣ್ತಾರೆ.

ಇದನ್ನೂ ಓದಿ: ಕರಿಯಾ ರೀ ರಿಲೀಸ್: ಉದ್ಧಟತನ ತೋರಿದ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ - Darshan Fans On Media

ಪೆಪೆ ಚಿತ್ರಕ್ಕೆ ಮತ್ತಷ್ಟು ರಂಗು ತುಂಬಿರೋದು ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಹಿನ್ನಲೆ ಸಂಗೀತ. ಹಾಗೇ ಸಮರ್ಥ ಉಪಾದ್ಯ, ಅಭಿಷೇಕ್ ಜಿ ಕಾಸರ್‌ಗೋಡ್ ಅವರ ಕ್ಯಾಮರಾ ವರ್ಕ್ ಪೆಪೆ ಚಿತ್ರದ ಹೈಲೆಟ್ಸ್. ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನಕ್ಕೆ ಒತ್ತು ಕೊಟ್ಟಿದ್ದಾರೆ. ಉದಯ್ ಸಿನಿ ವೆಂಚರ್, ದೀಪ ಫಿಲ್ಮ್ಸ್ ಬ್ಯಾನರ್ ಅಡಿ ಉದಯ್ ಮತ್ತು ಶ್ರೀರಾಮ್ ಸಂದೇಶ ಆಧರಿಸಿದ ಸಿನಿಮಾ ಮಾಡಿರುವ ತೃಪ್ತಿ ಇದೆ. ಒಟ್ಟಾರೆ 'ಪೆಪೆ' ಸಿನಿಮಾದಲ್ಲಿ ವಿನಯ್ ರಾಜ್​​ಕುಮಾರ್ ರಗಡ್ ಲುಕ್ ಮಾಸ್​ ಸಿನಿಮಾ ಇಷ್ಟಪಡುವ ಪ್ರೇಕ್ಷಕರಿಗೆ ಸಖತ್ ಎಂಟರ್​​​ಟೈನ್​ ಮಾಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.