ETV Bharat / entertainment

'ಕಿರಿಯ ನಾಯಕಿಯರೊಂದಿಗೆ ನಟನೆ'- ಪ್ರತಿಕ್ರಿಯೆಗೆ ನಿರಾಕರಿಸಿದ ವಿಜಯ್; ಪವನ್​ ಕಲ್ಯಾಣ್​​​ ಬಗ್ಗೆ ಮೆಚ್ಚುಗೆ - Vijay Sethupathi

ಇತ್ತೀಚಿನ ಸಂದರ್ಶನವೊಂದರಲ್ಲಿ ವಿಜಯ್ ಸೇತುಪತಿ ಕಿರಿಯ ನಾಯಕಿಯರೊಂದಿಗೆ ಕೆಲಸ ಮಾಡುವ ಬಗ್ಗೆ ಪ್ರಶ್ನೆಯೊಂದನ್ನು ಎದುರಿಸಿದರು.

author img

By ETV Bharat Karnataka Team

Published : Jun 11, 2024, 5:37 PM IST

Vijay Sethupathi, Krithi Shetty, Pawan Kalyan
ವಿಜಯ್ ಸೇತುಪತಿ, ಕೃತಿ ಶೆಟ್ಟಿ, ಪವನ್​ ಕಲ್ಯಾಣ್​​ (ANI/ETV Bharat)

ತಮಿಳು ನಟ ವಿಜಯ್ ಸೇತುಪತಿ ತಮ್ಮ ಮುಂದಿನ 'ಮಹಾರಾಜ' ಸಿನಿಮಾವನ್ನು ಪ್ರಚಾರ ಮಾಡುವುದರಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಮೋಶನ್​ ವೇಳೆ, ಕಿರಿಯ ನಾಯಕಿಯರೊಂದಿಗೆ ಕೆಲಸ ಮಾಡುವ ನಾಯಕರ ದೃಷ್ಟಿಕೋನದ ಬಗ್ಗೆ ಸೇತುಪತಿಗೆ ಪ್ರಶ್ನೆ ಎದುರಾಯಿತು. ಈ ವಿಷಯವನ್ನು ಮುಂದುವರಿಸೋದನ್ನು ನಟ ನಯವಾಗಿ ನಿರಾಕರಿಸಿದರು. ನಾನು ಈ ಹಿಂದೆಯೇ ಈ ಬಗ್ಗೆ ಮಾತನಾಡಿದ್ದೇನೆ. 'ದಯವಿಟ್ಟು ಈ ವಿಷಯವನ್ನು ಬಿಡಿ' ಎಂದು ಮಾಧ್ಯಮದವರಿಗೆ ವಿನಂತಿ ಮಾಡಿದರು.

ಕೆಲ ದಿನಗಳ ಹಿಂದಿನ ಸಂದರ್ಶನವೊಂದರಲ್ಲಿ ವಿಜಯ್ ಸೇತುಪತಿ, 2021ರ ಉಪ್ಪೆನ್ನಾ ಚಿತ್ರದಲ್ಲಿ ಕೃತಿ ಶೆಟ್ಟಿ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಉಲ್ಲೇಖಿಸಿ, ಈ ಮೇಲಿನ ವಿಷಯದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದರು. ಮತ್ತೊಂದು ಪ್ರಾಜೆಕ್ಟ್​ನಲ್ಲಿ ಕೃತಿ ಶೆಟ್ಟಿಯನ್ನು ನಾಯಕಿಯಾಗಿ ಪರಿಗಣಿಸಲು ನಿರ್ದೇಶಕರೊಬ್ಬರು ನನ್ನನ್ನು ಸಂಪರ್ಕಿಸಿದ್ದರು. ಆದರೆ, ಆ ಆಫರ್ ಅನ್ನು ನಿರಾಕರಿಸಿದ್ದೆ ಎಂದು ತಿಳಿಸಿದರು.

ಆ ಚಿತ್ರದಲ್ಲಿ ಇವರು ತಂದೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕ್ಲೈಮ್ಯಾಕ್ಸ್​ ಸೀನ್​​ನಲ್ಲಿ ಗೊಂದಲಕ್ಕೊಳಗಾಗಿದ್ದ ಕೃತಿಗೆ ಪ್ರೋತ್ಸಾಹ ನೀಡಿದ್ದ ವಿಜಯ್​​, ನನ್ನನ್ನು ನಿನ್ನ ತಂದೆಯೆಂದು ಭಾವಿಸಿ, ಮುಕ್ತವಾಗಿ ಅಭಿನಯಿಸು ಎಂದು ಧೈರ್ಯ ತುಂಬಿದ್ದರು. ಉಪ್ಪೇನ್ನಾ ಚಿತ್ರೀಕರಣದ ವೇಳೆ ತಂದೆ ಮಗಳ ಪಾತ್ರವೆಂಬುದನ್ನು ತಿಳಿಯದ ಮತ್ತೋರ್ವ ನಿರ್ದೇಶಕರು ಈ ಆಫರ್​​ ಕೊಟ್ಟಿದ್ದರೆಂಬುದನ್ನೂ ಹಿಂದಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.

ಯಾವ ನಾಯಕನೊಂದಿಗೆ ನಟಿಸಬೇಕು ಎಂಬ ನಿರ್ಧಾರವನ್ನು ನಟಿಮಣಿಯರೂ ತೆಗೆದುಕೊಳ್ಳುತ್ತಾರೆ. "ಅವರು (ಕೃತಿ) ನನ್ನೊಂದಿಗೆ ನಟಿಸಲು ಬಯಸುವುದಿಲ್ಲ ಎಂದು ಹೇಳಿದರೆ?, ಅವರು ಕೂಡ ಇಲ್ಲ ಎಂದು ಹೇಳಬಹುದು. ಒಮ್ಮೆ ಮಗಳಾಗಿ ನಟಿಸಿದ ಅವರು ಈ ಆಫರ್​​ ತಿರಸ್ಕರಿಸುತ್ತಿದ್ದರೇನೋ" ಎಂದು ವಿಜಯ್​​ ತಿಳಿಸಿದರು. ತಮ್ಮ ಪ್ರಮೋಶನಲ್​ ಈವೆಂಟ್​ನಲ್ಲಿ ಈ ವಿಷಯದ ಬಗ್ಗೆ ಈಗಾಗಲೇ ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಹಾಗಾಗಿ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯೆಗೆ ನಯವಾಗಿ ತಿರಸ್ಕರಿಸಿದರು.

ಇದನ್ನೂ ಓದಿ: 'ದೊಡ್ಡ ತಪ್ಪು': ಯಾತ್ರಾರ್ಥಿಗಳ ಮೇಲಿನ ಉಗ್ರರ ದಾಳಿಗೆ ಆಲಿಯಾ, ಅಟ್ಲೀ ಸೇರಿ ತಾರೆಯರ ಆಕ್ರೋಶ - Reasi Terror Attack

ಇನ್ನು ವಿಜಯ್, ಟಾಲಿವುಡ್​​ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರನ್ನು ಆನ್​ ಸ್ಕ್ರೀನ್​​, ಆಫ್​ ಸ್ಕ್ರೀನ್​ ಎರಡರಲ್ಲೂ 'ಮಾಸ್ ಹೀರೋ' ಎಂದು ಬಣ್ಣಿಸಿದರು. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಸಾಧನೆ ಬಗ್ಗೆಯೂ ಶ್ಲಾಘಿಸಿದರು.

ಇದನ್ನೂ ಓದಿ: 'ಕಲ್ಕಿ 2898 ಎಡಿ' ಟ್ರೇಲರ್: 24 ಗಂಟೆಯೊಳಗೆ 13 ಮಿಲಿಯನ್​ ವೀಕ್ಷಣೆ; ಹೊಸ ಪೋಸ್ಟರ್ ರಿಲೀಸ್ - Klaki 2898 AD

ವಿಜಯ್ ಸೇತುಪತಿ ತಮ್ಮ 50ನೇ ಚಿತ್ರ 'ಮಹಾರಾಜ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ನಿಥಿಲನ್ ಸಾಮಿನಾಥನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಜೊತೆಗೆ ಅನುರಾಗ್ ಕಶ್ಯಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೂನ್ 14 ರಂದು ಬಿಡುಗಡೆ ಆಗಲಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.