ETV Bharat / entertainment

ಹಿರಿಯ ನಟ ದತ್ತಣ್ಣ ನಟನೆಯ ಕಿರುಚಿತ್ರ 'ಇರುವೆ' ಯೂಟ್ಯೂಬ್‌ನಲ್ಲಿ ಬಿಡುಗಡೆ - Kannada Short Film Iruve

ಹಿರಿಯ ನಟ ದತ್ತಣ್ಣ ಅಭಿನಯದ 'ಇರುವೆ' ಕನ್ನಡ ಕಿರುಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಜಾಹೀರಾತು ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ರಾಜೇಶ್ ರಾಮಸ್ವಾಮಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. 'ದಿ ಸ್ಕ್ರಿಪ್ಟ್ ರೂಮ್‌' ಯೂಟ್ಯೂಬ್​​ ಚಾನಲ್​​​ನಲ್ಲಿ 17 ನಿಮಿಷಗಳ ಶಾರ್ಟ್ ಫಿಲ್ಮ್ ಲಭ್ಯ.

IRUVE Poster
ಇರುವೆ ಪೋಸ್ಟರ್ (ETV Bharat)
author img

By ETV Bharat Entertainment Team

Published : Aug 22, 2024, 2:44 PM IST

ಜಾಹೀರಾತು ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ರಾಜೇಶ್ ರಾಮಸ್ವಾಮಿ ಅವರು ಕಿರುಚಿತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 17 ನಿಮಿಷದ 'ಇರುವೆ' ಕನ್ನಡ ಕಿರುಚಿತ್ರ ಬರೆದು ನಿರ್ದೇಶಿಸಿದ್ದಾರೆ. ಇದರಲ್ಲಿ ಹಿರಿಯ ನಟ ದತ್ತಣ್ಣ ನಟಿಸಿದ್ದಾರೆ.

ಬೆಂಗಳೂರಿನ ಬರಹಗಾರರ ಕೇಂದ್ರವಾದ 'ದಿ ಸ್ಕ್ರಿಪ್ಟ್ ರೂಮ್‌'ನ ಸಂಸ್ಥಾಪಕ ರಾಜೇಶ್ ರಾಮಸ್ವಾಮಿ ಅವರನ್ನು ರಾಮ್‌ಸಂ ಎಂದೂ ಕರೆಯಲಾಗುತ್ತಿದೆ. ಇವರು ಆ್ಯಕ್ಷನ್​​​ ಕಟ್​​ ಹೇಳಿರುವ 'ಇರುವೆ'ಯಲ್ಲಿ ದತ್ತಣ್ಣ ಮತ್ತು ಮಹಾಂತೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಕಾಶ್ ತುಮಿನಾಡ್, ರೋಹಿತ್ ಶ್ರೀನಾಥ್, ಸೋನು ವೇಣುಗೋಪಾಲ್ ಮತ್ತು ಅನಿರುದ್ಧ್ ಆಚಾರ್ಯ ತಾರಾಬಳಗದಲ್ಲಿದ್ದಾರೆ.

IRUVE Poster
ಇರುವೆ ಪೋಸ್ಟರ್ (ETV Bharat)

ಎರಡು ದಶಕಗಳ ಹಿಂದೆ ರಿಯಲ್​​ ಸ್ಟಾರ್​ ಉಪೇಂದ್ರ ಕಾಣಿಸಿಕೊಂಡಿದ್ದ 'ಎಲ್ಲಾ ಓಕೆ ಕೂಲ್ ಡ್ರಿಂಕ್ ಯಾಕೆ' ಎಂಬ ಜಾಹೀರಾತು ಹಿಂದಿನ ಮಾಸ್ಟರ್ ಮೈಂಡ್ ಇದೇ ರಾಜೇಶ್ ರಾಮಸ್ವಾಮಿ.

IRUVE Poster
ಇರುವೆ ಪೋಸ್ಟರ್ (ETV Bharat)

ಈ ಕುರಿತು ನಿರ್ದೇಶಕರು ಮಾತನಾಡಿ, "ನಾನು ಮಾಲ್ಗುಡಿ ಡೇಸ್‌ನ ದೊಡ್ಡ ಅಭಿಮಾನಿ. ಆರ್‌.ಕೆ.ನಾರಾಯಣ್ ಅವರ ಕಥೆಯನ್ನು ಇಷ್ಟಪಟ್ಟಿದ್ದೇನೆ. ಈ ಕಥೆಗಳನ್ನು ಶಂಕರ್ ನಾಗ್ ತೆರೆಗೆ ಅಳವಡಿಸಿದ ರೀತಿ ನನಗೂ ಮೆಚ್ಚುಗೆಯಾಯಿತು. ಸಾಮಾನ್ಯ ಜನರ ಸರಳ ನಿರೂಪಣಾ ಶೈಲಿ, ಸೂಕ್ಷ್ಮ ಅವಲೋಕನಗಳು ನಾನು ವೀಕ್ಷಕ ಅಥವಾ ಓದುಗನಾಗಿ ನಿಜವಾಗಿಯೂ ಆನಂದಿಸುವ ಸಂಗತಿ. ಅಂದಿನಿಂದ ನನಗೆ ಪ್ರತಿದಿನ ಭೇಟಿಯಾಗುವ ಸಾಮಾನ್ಯ ಜನರ ಬಗ್ಗೆ ಕುತೂಹಲವಿದೆ. ಆ ಕಥೆಗಳನ್ನು ಇಟ್ಟುಕೊಂಡು ಇರುವೆ ಕಿರುಚಿತ್ರ ತಯಾರಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಸಾಮಾನ್ಯ ಜನರ ಅಸಾಮಾನ್ಯ ಕಥೆಗಳು. 'ಇರುವೆ' ಚಿತ್ರವು ಜಯನಗರದಲ್ಲಿ ನಡೆಯುವ ಇಂತಹ ಕಥೆಗಳಲ್ಲಿ ಒಂದು" ಎಂದರು.

IRUVE Poster
ಇರುವೆ ಪೋಸ್ಟರ್ (ETV Bharat)

ಇದನ್ನೂ ಓದಿ: 69ನೇ ಜನ್ಮದಿನದ ಸಂಭ್ರಮದಲ್ಲಿ ಚಿರಂಜೀವಿ: ತಿರುಮಲ ತಿಮ್ಮಪ್ಪನ ದರ್ಶನ ಪಡೆದ ಸೂಪರ್​ಸ್ಟಾರ್ - ವಿಡಿಯೋ - Mega Star Birthday

ರಾಜೇಶ್ ರಾಮಸ್ವಾಮಿ ಮಾತನಾಡಿ, "ಇರುವೆ 70ರ ಹರೆಯದ ಗೋವಿಂದಯ್ಯನ ಬಗೆಗಿದೆ. ಅವರ ಮನೆಯಲ್ಲಿನ ಕೆಂಪಿರುವೆಗಳ ಸುತ್ತ ಸಾಗುವ ಕಥೆ. ಇದು ದಿ ಸ್ಕ್ರಿಪ್ಟ್ ರೂಮ್‌ನ ಚೊಚ್ಚಲ ನಿರ್ಮಾಣ. ನಾವು ಮೊದಲ ಬಾರಿಗೆ ಕಥೆಯೊಂದಿಗೆ ದತ್ತಣ್ಣ ಅವರನ್ನು ಸಂಪರ್ಕಿಸಿದಾಗ ಅವರು ನನಗೆ ಕಥೆ ಇಷ್ಟವಾಯಿತು. ಆದರೆ ಈ ಸಿನಿಮಾ ಮಾಡಲು ನಿಮ್ಮ ಮುಖ್ಯ ಉದ್ದೇಶವೇನು ಎಂದು ಕೇಳಿದರು. ಆ ಪ್ರಶ್ನೆ ನನ್ನನ್ನೂ ಕಾಡಲು ಶುರುವಾಯ್ತು. ಸರ್, ತಮಾಷೆಗಾಗಿ ಎಂದು ತಿಳಿಸಿದೆ. ಹೌದು, ನಾವು ಅದನ್ನು ಶೂಟ್ ಮಾಡುವಾಗ ಬಹಳಷ್ಟು ಆನಂದಿಸಿದ್ದೇವೆ. ಅದನ್ನು ನೋಡುವಾಗಲೂ ಪ್ರತಿಯೊಬ್ಬರಿಗೂ ಮನರಂಜನೆ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ. ಅದಕ್ಕಾಗಿಯೇ ನಾವು ಅದನ್ನು ಉಚಿತವಾಗಿ ವೀಕ್ಷಿಸಲು ಯೂಟ್ಯೂಬ್​​​​ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದೇವೆ" ಎಂದು ತಿಳಿಸಿದರು.

IRUVE Poster
ಇರುವೆ ಪೋಸ್ಟರ್ (ETV Bharat)

ಇದನ್ನೂ ಓದಿ: 'ಕಾಂತಾರ ಪ್ರೀಕ್ವೆಲ್'​ಗಾಗಿ ಕಳರಿಪಯಟ್ಟು ಕಲಿತ ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ - Rishab Shetty Kalaripayattu

ETV Bharat Logo

Copyright © 2024 Ushodaya Enterprises Pvt. Ltd., All Rights Reserved.