ETV Bharat / entertainment

'ಖೇಲ್ ಶುರು ಪಾರ್ಟಿ ಚಾಲು ಹ್ಯಾಪಿ ಬರ್ತಡೇ ಗಬ್ರು ಸತ್ಯ': ಡಾಲಿ ಬರ್ತ್​​ಡೇಗೆ 'ಉತ್ತರಕಾಂಡ' ಗಿಫ್ಟ್ - Daali Dhananjay Birthday - DAALI DHANANJAY BIRTHDAY

ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ, ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​​ ಇಂದು 38ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಮುಂದಿನ ಬಹುನಿರೀಕ್ಷಿತ 'ಉತ್ತರಕಾಂಡ' ಚಿತ್ರದಿಂದ ಪೋಸ್ಟರ್​ ಅನಾವರಣಗೊಂಡಿದ್ದು, ಸಿನಿಮಾ ಮೇಲಿನ ಕುತೂಹಲ, ನಿರೀಕ್ಷೆಗಳು ಹೆಚ್ಚಾಗಿವೆ.

Uttarakaanda poster
ಡಾಲಿ ಧನಂಜಯ್​​ ಉತ್ತರಕಾಂಡ ಪೋಸ್ಟರ್ (Film Poster, Dhananjay Instagram)
author img

By ETV Bharat Karnataka Team

Published : Aug 23, 2024, 1:05 PM IST

ಸ್ಯಾಂಡಲ್​​​ವುಡ್​ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​​ ಇಂದು ಜನ್ಮದಿನ ಸಂಭ್ರಮದಲ್ಲಿದ್ದಾರೆ. 38ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಜೊತೆಗೆ ನಿರೀಕ್ಷೆಯಂತೆ ನಟನ ಮುಂದಿನ ಬಹುನಿರೀಕ್ಷಿತ ಚಿತ್ರಗಳ ತಂಡದಿಂದಲೂ ಸ್ಪೆಷಲ್​ ಗಿಫ್ಟ್​ ಸಿಕ್ಕಿದೆ. ಇದು ಸ್ಟಾರ್​ ಹೀರೋನ ಫ್ಯಾನ್ಸ್​ಗೆ ಟ್ರೀಟ್​​ ಅಂತಲೇ ಹೇಳಬಹುದು.

ಮೊನ್ನೆಯಷ್ಟೇ ಡಾಲಿ ಧನಂಜಯ್​ ಈ ಬಾರಿ ನಿಮ್ಮೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗುತ್ತಿಲ್ಲ, ಕ್ಷಮೆಯಿರಲಿ ಎಂದು ಅಭಿಮಾನಿಗಳಿಗೆ ಸೋಷಿಯಲ್​ ಮೀಡಿಯಾ ಮೂಲಕ ಪತ್ರ ಬರೆದಿದ್ದರು. ಆದ್ರೆ ನಟನ ಬಣ್ಣ ಹಚ್ಚುತ್ತಿರುವ ಸಿನಿಮಾಗಳಿಂದ ಪೋಸ್ಟರ್ಸ್ ಅಥವಾ ಅಪ್ಡೇಟ್ಸ್​​ ಹೊರಬೀಳಲಿದೆ ಎಂದು ಸಿನಿಪ್ರಿಯರು ನಿರೀಕ್ಷಿಸಿದ್ದರು. ಅಭಿಮಾನಿಗಳ ನಿರೀಕ್ಷೆಗಳು ನಿಜವಾಗಿವೆ. ಎರಡ್ಮೂರು ಸಿನಿಮಾಗಳ ಪೋಸ್ಟರ್ಸ್ ಅನಾವರಣಗೊಂಡಿವೆ. 'ಉತ್ತರಕಾಂಡ' ಡಾಲಿ ಧನಂಜಯ್​​ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

ಇಂದು ನಟನ ಹುಟ್ಟುಹಬ್ಬ ಹಿನ್ನೆಲೆ, 'ಉತ್ತರಕಾಂಡ' ಚಿತ್ರತಂಡ ಪೋಸ್ಟರ್ಸ್ ಅನಾವರಣಗೊಳಿಸಿದೆ. ಕುಡಿದು ಎಂಜಾಯ್​ ಮಾಡುತ್ತಿರುವ ಭಂಗಿಯಲ್ಲಿ ನಾಯಕ ನಟ ಧನಂಜಯ್​​ ಕಾಣಿಸಿಕೊಂಡಿದ್ದಾರೆ. ಪೋಸ್ಟರ್​ ಮೇಲೆ ಉತ್ತರಕಾಂಡ ಎಂಬ ದೊಡ್ಡ ಶೀರ್ಷಿಕೆ ಇದೆ. ಜೊತೆಗೆ ಖೇಲ್​ ಶುರು, ಪಾರ್ಟಿ ಚಾಲು'. ಹುಟ್ಟು ಹಬ್ಬದ ಶುಭಾಶಯಗಳು ಗಬ್ರು ಸತ್ಯ ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ಧನಂಜಯ್​ ಅವರು ಗಬ್ರು ಸತ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಪೋಸ್ಟರ್ ಬಹಿರಂಗಪಡಿಸಿದೆ. ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​ನಲ್ಲಿ ಈ ಪೋಸ್ಟರ್ ಹಂಚಿಕೊಂಡ ಧನಂಯ್​​, ಉತ್ತರಕಾಂಡ ಚಿತ್ರತಂಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ನಟನಲ್ಲದೇ ಪೋಸ್ಟರ್​ ಶೇರ್​ ಮಾಡಿರುವ ಕೆಆರ್​ಜಿ ಸಂಸ್ಥೆ, ''ಖೇಲ್ ಶುರು ಪಾರ್ಟಿ ಚಾಲು ಹ್ಯಾಪಿ ಬರ್ತಡೇ ಗಬ್ರು ಸತ್ಯ!'' ಎಂದು ಬರೆದುಕೊಂಡಿದೆ.

ಕನ್ನಡದ ಹೆಸರಾಂತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆಆರ್​ಜಿ ಸ್ಟುಡಿಯೋಸ್​​​​ನ ಕಾರ್ತಿಕ್​​ ಮತ್ತು ಯೋಗಿ ಜಿ ರಾಜ್​​​ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್​ ಅವರು ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ರೋಹಿತ್​​ ಪದಕಿ ಆ್ಯಕ್ಷನ್​​ ಕಟ್​ ಹೇಳುತ್ತಿದ್ದಾರೆ.

ಇದನ್ನೂ ಓದಿ: ರಕ್ಷಿತ್​​ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಟ್ರೇಲರ್ ರಿಲೀಸ್​ - Ibbani Tabbida lleyali Trailer

ಉತ್ತರಕಾಂಡ 2024ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿದ್ದು, ಖ್ಯಾತ ಗಾಯಕ, ಸಂಗೀತ ಸಂಯೋಜಕ ಅಮಿತ್‌ ತ್ರಿವೇದಿ ಅವರ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ಅಧ್ವೈತ ಗುರುಮೂರ್ತಿ ಅವರ ಕ್ಯಾಮರಾ ಕೈಚಳಕವಿರಲಿದೆ. ವಿಶ್ವಾಸ್‌ ಕಶ್ಯಪ್‌ ಪ್ರೊಡಕ್ಷನ್‌ ವಿನ್ಯಾಸ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿ ಚಿತ್ರತಂಡದ ಭಾಗವಾಗಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಡಾಲಿ ಧನಂಜಯ್​​​ - Daali Dhananjay Apology

ಬಹುನಿರೀಕ್ಷಿತ ಆ್ಯಕ್ಷನ್​​ ಡ್ರಾಮಾ 'ಉತ್ತರಕಾಂಡ'ದ ಮುಹೂರ್ತ ಸಮಾರಂಭ 2022ರಲ್ಲೇ ನಡೆದಿತ್ತು. ಆದ್ರೆ ಕಾರಣಾಂತರಗಳಿಂದ ಸಿನಿಮಾ ವಿಳಂಬವಾಗುತ್ತಾ ಬಂತು. ಅಂತಿಮವಾಗಿ ಈ ವರ್ಷದ ಏಪ್ರಿಲ್​​ನಲ್ಲಿ ಚಿತ್ರೀಕರಣ ಆರಂಭವಾಗಿದೆ. ಸಿನಿಮಾ ಶೀಘ್ರ ಬಿಡುಗಡೆಗೆ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.