ETV Bharat / entertainment

ಸಿನಿಮಾಗಳಲ್ಲಿ ರಾಮ್​​ ಚರಣ್​​​​ ರೊಮ್ಯಾನ್ಸ್: ಪತ್ನಿ ಉಪಾಸನಾ ಹೇಳಿದ್ದೇನು? - Ram Charan

ರಾಮ್​​ ಚರಣ್ ಅವರ​​ ಆನ್​ಸ್ಕ್ರೀನ್​​ ರೊಮ್ಯಾನ್ಸ್ ಬಗ್ಗೆ ಪತ್ನಿ ಉಪಾಸನಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Ram Charan Upasana Konidela
ರಾಮ್ ​​ಚರಣ್ ಉಪಾಸನಾ
author img

By ETV Bharat Karnataka Team

Published : Feb 8, 2024, 5:28 PM IST

ಮೆಗಾಸ್ಟಾರ್​ ಚಿರಂಜೀವಿ ಅವರ ಪುತ್ರ ರಾಮ್​​ಚರಣ್​​ ಸೌತ್​​ ಸೂಪರ್​​ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. 'ಆರ್‌ಆರ್​ಆರ್' ಸಿನಿಮಾ​ ಮೂಲಕ ಗ್ಲೋಬಲ್​ ಸ್ಟಾರ್ ಆಗಿ ಹೊರಹೊಮ್ಮಿದವರು. ಇವರ​ ಪತ್ನಿ ಉಪಾಸನಾ ಕೊನಿಡೇಲಾ ಉದ್ಯಮಿ. ಇಬ್ಬರೂ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಸದ್ಯ ಮಾದರಿ ದಂಪತಿಯಾಗಿಯೂ ಜನಪ್ರಿಯರು. ಆಗಾಗ್ಗೆ ಸಂದರ್ಶನಗಳನ್ನು ನೀಡುವ ಉಪಾಸನಾ, ರಾಮ್​​ಚರಣ್​​ ಆನ್​ಸ್ಕ್ರೀನ್​​ ರೊಮ್ಯಾನ್ಸ್ ಬಗೆಗೂ ಮಾತನಾಡಿದ್ದಾರೆ.

ರಾಮ್ ಚರಣ್ ಸಿನಿಮಾಗಳಲ್ಲಿ ನಟಿಯರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಳ್ಳುವುದನ್ನು ನೋಡಲು ಮೊದಮೊದಲು ಕಷ್ಟವಾಗುತ್ತಿತ್ತು ಎಂಬುದನ್ನು ಉಪಾಸನಾ ಒಪ್ಪಿಕೊಂಡಿದ್ದಾರೆ. ಅಂದಹಾಗೆ ಇಬ್ಬರೂ ಇಬ್ಬರೂ ವೈವಿಧ್ಯಮಯ ಹಿನ್ನೆಲೆಯಿಂದ ಬಂದವರು. ಉಪಾಸನಾ ವೈದ್ಯರು ಮತ್ತು ಉದ್ಯಮಿಗಳೇ ಹೆಚ್ಚಿರುವ ಕುಟುಂಬದವರು. ರಾಮ್ ಚರಣ್ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ರಾಮ್​ಚರಣ್​​ ವೃತ್ತಿಯ ಜಟಿಲತೆಗಳನ್ನು ಅರ್ಥಮಾಡಿಕೊಳ್ಳುವುದು ಉಪಾಸನಾರಿಗೆ ಮೊದಮೊದಲು ಸವಾಲಿನ ಸಂಗತಿಯಾಗಿತ್ತಂತೆ.

"ನಾಯಕಿಯರೊಂದಿಗೆ ಅಂತಹ ದೃಶ್ಯಗಳನ್ನು ಮಾಡಬೇಕೇ? ಎಂದು ನಾನು ರಾಮ್​ ಅವರಲ್ಲಿ ಕೆಲವೊಮ್ಮೆ ಪ್ರಶ್ನಿಸಿದ್ದುಂಟು. ಕಮಾನ್​​, ಏನಿದು? ಎಂದು ಹೇಳುತ್ತಿದ್ದೆ'' ಎಂದು ಉಪಾಸನಾ ತಿಳಿಸಿದರು. 34ರ ಹರೆಯದ ಉಪಾಸನಾ, ಇಬ್ಬರೂ ವಿಭಿನ್ನ ವಾತಾವರಣದಲ್ಲಿ ಬೆಳೆದವರು ಎಂಬುದನ್ನು ಒತ್ತಿ ಹೇಳುತ್ತಾ, "ಆರಂಭದಲ್ಲಿ, ನನಗೆ ಅರ್ಥವಾಗುತ್ತಿರಲಿಲ್ಲ. ನಾವು ವಿಭಿನ್ನ ವಾತಾವರಣದಲ್ಲಿ ಬೆಳೆದವರು. ನನ್ನೊಂದಿಗೆ ಅವರ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ'' ಎಂದು ತಿಳಿಸಿದರು.

"ರಾಮ್ ಚರಣ್​ ವೃತ್ತಿಜೀವನದ ಕೆಲವು ಅಂಶಗಳೊಂದಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದೆ. ಅಂತಹ ದೃಶ್ಯಗಳ ಅಗತ್ಯತೆಯ ಬಗ್ಗೆ ಪ್ರಶ್ನಿಸುತ್ತಿದ್ದೆ. ಹೀಗೆ ರಾಮ್​ ಅವರಲ್ಲಿ ನನ್ನ ಕಳವಳ ವ್ಯಕ್ತಪಡಿಸುತ್ತಿದ್ದೆ. ಆಗ ಅವರು ತಾಳ್ಮೆಯಿಂದ ಚಿತ್ರರಂಗದ ವಿಚಾರಗಳನ್ನು ನನಗೆ ವಿವರಿಸುತ್ತಿದ್ದರು. ಈ ಮೂಲಕ ನನ್ನ ಕಳವಳಗಳನ್ನು ದೂರ ಮಾಡಿದರು" ಎಂದರು.

ಇದನ್ನೂ ಓದಿ: ಚಿತ್ರೀಕರಣ ವೇಳೆ ಗಾಯಗೊಂಡ ನಟ ವಿಕ್ಕಿ ಕೌಶಲ್​​: ವಿಡಿಯೋ ನೋಡಿದ ಅಭಿಮಾನಿಗಳಲ್ಲಿ ಆತಂಕ

'ಕ್ಲಿನ್ ಕಾರಾ ಡ್ಯಾಡಿಸ್​​ ಗರ್ಲ್': ರಾಮ್​ಚರಣ್​ ಮತ್ತು ಉಪಾಸನಾ 2012ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದಾರೆ. 2023ರ ಜೂನ್​​ನಲ್ಲಿ ಪೋಷಕರಾಗಿ ಭಡ್ತಿ ಪಡೆದರು. ಮಗಳು ಕ್ಲಿನ್ ಕಾರಾ ಜೊತೆಗಿನ ಪ್ರತಿ ಕ್ಷಣಗಳನ್ನೂ ಆನಂದಿಸುತ್ತಿದ್ದಾರೆ. ಕ್ಲಿನ್ ಕಾರಾ ಡ್ಯಾಡಿಸ್​​ ಗರ್ಲ್ ಎಂದು ಉಪಾಸನಾ ಹೇಳುತ್ತಾರೆ. ಮಗಳು ರಾಮ್​​ (ತಂದೆ) ಜೊತೆ ವಿಶೇಷ ಬಾಂಧವ್ಯ ಹೊಂದಿದ್ದಾಳೆ. ಇದನ್ನು ನೋಡುತ್ತಾ ಕೆಲವೊಮ್ಮೆ ನನಗೆ ಅಸೂಯೆಯಾಗುತ್ತದೆ ಎಂದು ಉಪಾಸನಾ ತಿಳಿಸಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಸಹೋದರಿ ಹೇಗಿದ್ದಾರೆ? ಮುಂಬೈ ಏರ್ಪೋರ್ಟ್‌ನಲ್ಲಿ ಸೆರೆಯಾದ ದೃಶ್ಯ

ರಾಮ್ ಚರಣ್ ಅವರು ನಿರ್ದೇಶಕ ಶಂಕರ್ ಅವರ ಬಹುನಿರೀಕ್ಷಿತ 'ಗೇಮ್ ಚೇಂಜರ್' ಸಿನಿಮಾ ಸೇರಿದಂತೆ ಮುಂಬರುವ ಪ್ರಾಜೆಕ್ಟ್​ಗಳಿಗೆ ಸಜ್ಜಾಗುತ್ತಿದ್ದಾರೆ. ಗೇಮ್​ ಚೇಂಜರ್‌ನಲ್ಲಿ ಕಿಯಾರಾ ಅಡ್ವಾಣಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಉಪ್ಪೇನಾ ಚಿತ್ರಕ್ಕೆ ಜನಪ್ರಿಯರಾದ ಬುಚ್ಚಿ ಬಾಬು ಸನಾ ನಿರ್ದೇಶನದ ಹೆಸರಿಡದ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಆರ್​ಸಿ 16 ಎಂದು ಹೆಸರಿಸಲಾಗಿರುವ ಸಿನಿಮಾವೊಂದಕ್ಕೆ ಮೈತ್ರಿ ಮೂವಿ ಮೇಕರ್ಸ್​​ ಬಂಡವಾಳ ಹೂಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.