ETV Bharat / entertainment

ಬಿಗ್‌ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರು ಅಪಘಾತ: ಆಟೋ ಚಾಲಕನಿಗೆ ಗಾಯ - Tukali Santhosh car accident

ತುಕಾಲಿ ಸಂತೋಷ್ ಅವರ ಕಾರು ಅಪಘಾತಕ್ಕೊಳಗಾಗಿದ್ದು, ಆಟೋ ಚಾಲಕ ಜಗದೀಶ್ ಗಾಯಗೊಂಡಿದ್ದಾರೆ.

Tukali Santhosh car accident
ತುಕಾಲಿ ಸಂತೋಷ್ ಕಾರು ಅಪಘಾತ
author img

By ETV Bharat Karnataka Team

Published : Mar 14, 2024, 6:54 AM IST

Updated : Mar 14, 2024, 7:02 AM IST

ತುಮಕೂರು: ನಟ-ನಿರೂಪಕ ಸುದೀಪ್​ ನಡೆಸಿಕೊಡುವ ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ ಸೀಸನ್​ 10ರಲ್ಲಿ ಗಮನ ಸೆಳೆದಿದ್ದ ಹಾಸ್ಯನಟ ತುಕಾಲಿ ಸಂತೋಷ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ. ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಬುಧವಾರ ರಾತ್ರಿ ನಡೆದಿದೆ. ಆಟೋ ಚಾಲಕ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಹೊಸ ಕಿಯಾ ಸೆಲ್ಟೋಸ್​ ಕಾರನ್ನು ಗಿಚ್ಚಿ ಗಿಲಿಗಿಲಿ ಖ್ಯಾತಿಯ ತುಕಾಲಿ ಸಂತೋಷ್ ಖರೀದಿಸಿದ್ದರು. ಹೊಸ ಕಾರು ಮನೆಗೆ ಬಂದು ಎರಡು ವಾರ ಕಳೆಯುವಷ್ಟರಲ್ಲೇ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯವಾಗಿಲ್ಲ.

ಕುಣಿಗಲ್ ಮಾರ್ಗವಾಗಿ ತುಕಾಲಿ ಸಂತೋಷ್ ದಂಪತಿ ಹಾಸನ ಜಿಲ್ಲೆಯ ಹೊಳೆನರಸೀಪುರದತ್ತ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಕುಣಿಗಲ್ ಕಡೆಯಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ಸಂತೋಷ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಆಟೋ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಗಾಯಗೊಂಡಿದ್ದು, ಆತನನ್ನು ಜಗದೀಶ್ ಎಂದು ಗುರುತಿಸಲಾಗಿದೆ. ಪ್ರಸ್ತುತ ಗಾಯಾಳುವನ್ನು ಕುಣಿಗಲ್ ತಾಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಣಿಗಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tukali Santhosh car accident
ತುಕಾಲಿ ಸಂತೋಷ್ ಕಾರು ಅಪಘಾತ

ಕನ್ನಡ ಕಿರುತೆರೆ ಕಾರ್ಯಕ್ರಮಗಳಲ್ಲಿ ತುಕಾಲಿ ಸಂತೋಷ್ ಗುರುತಿಸಿಕೊಂಡಿದ್ದಾರೆ. ಹಾಸ್ಯನಟನಾಗಿ ಜನಮನ ಸೆಳೆದಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್ ನಡೆಸಿಕೊಡುವ ಬಿಗ್​ ಬಾಸ್​ ಸೀಸನ್​ 10ರಲ್ಲಿ ಭಾಗಿಯಾಗೋ ಮುಖೇನ ಜನಪ್ರಿಯತೆ ಹೆಚ್ಚಿಸಿಕೊಂಡರು. ಜನವರಿ ಕೊನೆ ವಾರದಲ್ಲಿ ನಡೆದಿದ್ದ ಫಿನಾಲೆಯಲ್ಲಿ, ತುಕಾಲಿ ಸಂತೋಷ್ ಫೈನಲಿಸ್ಟ್ ಆಗಿ ಕಾಣಿಸಿಕೊಂಡರು. ಕಾರ್ತಿಕ್​​ ಮಹೇಶ್​​, ವಿನಯ್ ಗೌಡ, ವರ್ತೂರ್ ಸಂತೋಷ್, ಡ್ರೋಣ್ ಪ್ರತಾಪ್​​, ಸಂಗೀತಾ ಶೃಂಗೇರಿ ಜೊತೆ ಫೈನಲಿಸ್ಟ್​​ ಆಗಿದ್ದ ತುಕಾಲಿ ಸಂತೋಷ್​ ಐದನೇ ರನ್ನರ್​ ಅಪ್​​ ಆಗಿ ಹೊರಹೊಮ್ಮಿದರು. ಇದಾದ ಬಳಿಕ ಕಿರುತೆರೆ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ: 2023ರಲ್ಲಿ ಸಖತ್ ಸದ್ದು ಮಾಡಿದ ಸಿನಿಮಾ ಯಾವುದು ಗೊತ್ತಾ?

ಬಿಗ್​ ಬಾಸ್​ ಮನೆಯೊಳಗೆ ನಗುನಗಿಸುತ್ತಲೇ ಚಾಣಾಕ್ಷ ತಂತ್ರವನ್ನೂ ಹೆಣೆಯುವ ವ್ಯಕ್ತಿತ್ವ ಸಂತೋಷ್​​ ಅವರದ್ದು. ಇತರರಂತೆ ಇವರೂ ಕೂಡ ತಮ್ಮದೇ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಬಿಗ್​​ ಬಾಸ್​ನಲ್ಲಿ ಹೆಚ್ಚು ಮನರಂಜಿಸಿದವರ ಪೈಕಿ ತುಕಾಲಿ ಸಂತೋಷ್ ಕೂಡ ಓರ್ವರು. ಆದ್ರೀಗ ಅವರ ಕಾರು ಅಪಘಾತಕ್ಕೊಳಗಾಗಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ತಮ್ಮ ನೆಚ್ಚಿನ ನಟನಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಸಿಧು ಮೂಸೆವಾಲಾ ತಾಯಿ ಗರ್ಭಿಣಿ ವದಂತಿ: ಗಾಯಕನ ತಂದೆ ಕೊಟ್ಟ ಸ್ಪಷ್ಟನೆಯಿದು

Last Updated : Mar 14, 2024, 7:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.