ETV Bharat / entertainment

ಯಶ್​​ 'ಟಾಕ್ಸಿಕ್'​ನಲ್ಲಿ ಕರೀನಾ, ಸಾಯಿ ಪಲ್ಲವಿ, ಶ್ರುತಿ ಹಾಸನ್​?: 'ಊಹಾಪೋಹದಿಂದ ದೂರವಿರಿ' - Toxic - TOXIC

ಯಶ್​​ ಅವರ ಮುಂದಿನ ಪ್ರಾಜೆಕ್ಟ್​ ಸುತ್ತ ಹಲವು ಊಹಾಪೋಹಗಳೆದ್ದಿದ್ದು, 'ಊಹಾಪೋಹದಿಂದ ದೂರವಿರಿ' ಎಂದು ಚಿತ್ರತಂಡ ಮನವಿ ಮಾಡಿದೆ.

Toxic
ಟಾಕ್ಸಿಕ್
author img

By ETV Bharat Karnataka Team

Published : Mar 24, 2024, 1:11 PM IST

ಕೆಜಿಎಫ್​​ ಎಂಬ ಬ್ಲಾಕ್​ಬಸ್ಟರ್ ಸಿನಿಮಾದಲ್ಲಿನ ಅಮೋಘ ಅಭಿನಯದ ಮೂಲಕ ದಕ್ಷಿಣ ಚಿತ್ರರಂಗದ ಕೀರ್ತಿ ಹೆಚ್ಚಿಸಿರುವ ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್ ಖ್ಯಾತಿಯ ಯಶ್​​ ಅವರ ಮುಂದಿನ ಪ್ರಾಜೆಕ್ಟ್​ ಸುತ್ತ ಹಲವು ಅಂತೆಕಂತೆಗಳಿವೆ. 2023ರ ಕೊನೆಗೆ ಚಿತ್ರತಂಡ ನಾಯಕ ನಟ, ನಿರ್ಮಾಪಕರು, ನಿರ್ದೇಶಕರ ಘೋಷಣೆ ಜೊತೆ ಸಿನಿಮಾ ಅನೌನ್ಸ್​​ಮೆಂಟ್​ ವಿಡಿಯೋ ಅನಾವರಣಗೊಳಿಸಿದ್ದು ಬಿಟ್ಟರೆ ಪ್ರೊಜೆಕ್ಟ್​ ಕುರಿತು ಹೆಚ್ಚಿನ ವಿಷಯ ಬಿಟ್ಟುಕೊಟ್ಟಿಲ್ಲ.

ಆದರೆ ಸಿನಿಮಾ ಸುತ್ತ ಹಲವು ರೀತಿಯ ಗುಲ್ಲೆದ್ದಿರುವುದು ನಿಮಗೆ ತಿಳಿದಿರುವ ವಿಚಾರವೇ. 'ಟಾಕ್ಸಿಕ್'​ ಜೊತೆ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ತಾರೆಯರಾದ ಕರೀನಾ ಕಪೂರ್ ಖಾನ್, ಸಾಯಿ ಪಲ್ಲವಿ ಮತ್ತು ಶ್ರುತಿ ಹಾಸನ್ ಅವರುಗಳ ಹೆಸರು ಕೇಳಿಬರುತ್ತಿದೆ. ಈ ವಿಚಾರಗಳ ನಡುವೆಯೇ ಚಿತ್ರದ ನಿರ್ಮಾಪಕರು ಪ್ರೇಕ್ಷಕರಲ್ಲಿ ಊಹೆಗಳಿಂದ ದೂರವಿರುವಂತೆ ಕೇಳಿಕೊಂಡಿದ್ದಾರೆ.

"ಟಾಕ್ಸಿಕ್ ಕಾಸ್ಟ್ ಬಗ್ಗೆ ಅನೇಕ ಆಧಾರರಹಿತ ಮಾಹಿತಿಗಳು ಹರಿದಾಡುತ್ತಿವೆ. ಟಾಕ್ಸಿಕ್ ಸುತ್ತಲಿರುವ ಉತ್ಸಾಹವನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ. ಆದರೆ ಪ್ರಸ್ತುತ ಊಹಾಪೋಹಗಳಿಂದ ದೂರವಿರಲು ನಾವು ನಿಮ್ಮೆಲ್ಲರಲ್ಲಿಯೂ ವಿನಂತಿಸುತ್ತೇವೆ. ಸಿನಿಮಾದ ಕಾಸ್ಟಿಂಗ್​​ ಪ್ರೊಸೆಸ್​ ಪೂರ್ಣಗೊಳ್ಳುವ ಹಂತದಲ್ಲಿದೆ. ನಾವು ಹೊಂದಿರುವ ತಂಡದಿಂದ ಸಖತ್​ ಥ್ರಿಲ್​ ಆಗಿದ್ದೇವೆ. ಕಥೆಯನ್ನು ಜೀವಂತಗೊಳಿಸಲು ಸಜ್ಜಾಗುತ್ತಿದ್ದು, ಅಧಿಕೃತ ಮಾಹಿತಿಗಾಗಿ ಕಾಯಲು ನಾವು ನಿಮ್ಮೆಲ್ಲರಲ್ಲೂ ವಿನಂತಿಸುತ್ತೇವೆ" ಎಂದು ಚಿತ್ರತಯಾರಕರು ತಿಳಿಸಿದ್ದಾರೆ.

ಇದನ್ನೂ ಓದಿ: ಲೋಕಸಮರದಲ್ಲಿ ಕಣಕ್ಕಿಳಿಯಲಿದ್ದಾರಾ ಬಾಲಿವುಡ್​ ನಟ ಗೋವಿಂದ? - Bollywood Actor Govinda

ಈ ಹಿಂದೆ ದಕ್ಷಿಣ ಚಿತ್ರರಂಗದ ಚೆಲುವೆಯರಾದ ಶೃತಿ ಹಾಸನ್ ಮತ್ತು ಸಾಯಿ ಪಲ್ಲವಿ ಯಶ್​ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ ಬೆಡಗಿ ಕರೀನಾ ಕಪೂರ್ ಖಾನ್ ಅವರ ಪಾತ್ರದ ಬಗ್ಗೆ ವರದಿಗಳು ವ್ಯಾಪಕವಾಗಿ ಹರಡಿವೆ. ಕರೀನಾ ಕೂಡ ಪ್ಯಾನ್-ಇಂಡಿಯಾ ಸಿನಿಮಾದೊಂದಿಗೆ ದಕ್ಷಿಣ ಚಿತ್ರರಂಗ ಪ್ರವೇಶಿಸುವ ಬಗ್ಗೆ ಮಾತನಾಡಿ ವದಂತಿಗಳಿಗೆ ತುಪ್ಪ ಸುರಿದರು. ನೆಟ್ಟಿಗರ ಊಹಾಪೋಹಗಳನ್ನು ಹೆಚ್ಚಿಸಿದರು. ಸಂದರ್ಶನವೊಂದರಲ್ಲಿ, ಕರೀನಾ ತಮ್ಮ 'ಕ್ರ್ಯೂ' ಹಿಂದಿ ಚಿತ್ರದ ಬಗ್ಗೆ ಮಾತನಾಡುವ ವೇಳೆ, "ವೆರಿ ಬಿಗ್ ಸೌತ್ ಫಿಲ್ಮ್"ನಲ್ಲಿ ಭಾಗಿಯಾಗುವ ಬಗ್ಗೆ ಮಾತನಾಡಿ ಎಲ್ಲರ ಕುತೂಹಲ ಹೆಚ್ಚಿಸಿದ್ದರು.

ಇದನ್ನೂ ಓದಿ: ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಟ ವಿಜಯ್​: ಶೂಟಿಂಗ್​ ಲೊಕೇಶನ್​ನಿಂದ ವಿಡಿಯೋ ಶೇರ್ - Thalapathy Vijay

"ವೆರಿ ಬಿಗ್ ಸೌತ್ ಫಿಲ್ಮ್" ಎಂದು ಹೇಳಿದರಾದರೂ ಚಿತ್ರದ ಹೆಸರನ್ನು ಉಲ್ಲೇಖಿಸಲಿಲ್ಲ. ಆದಾಗ್ಯೂ ಟಾಕ್ಸಿಕ್ ಸಿನಿಮಾನೇ ಎಂದು ತಮಗೆ ತಾವೇ ಊಹಿಸಿಕೊಂಡರು. ಟಾಕ್ಸಿಕ್ ಚಿತ್ರಕ್ಕೆ ಗೀತು ಮೋಹನ್‌ದಾಸ್ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸೇರಿ ಸಿನಿಮಾ ನಿರ್ಮಾಣ ಮಾಡಲಿದೆ. 2025ರ ಏಪ್ರಿಲ್ 10ರಂದು ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.