ETV Bharat / entertainment

ಕ್ರಿಶ್ಚಿಯನ್​ ಪದ್ಧತಿಯಲ್ಲಿ ತರುಣ್ ಸುಧೀರ್-ಸೋನಾಲ್ ಮೊಂತೆರೋ ಮದುವೆ:​​ ವಿಡಿಯೋ - Tharun Sonal Wedding - THARUN SONAL WEDDING

ಇತ್ತೀಚೆಗೆ ತರುಣ್ ಸುಧೀರ್-ಸೋನಾಲ್ ಮೊಂತೆರೋ ಮಂಗಳೂರಿನಲ್ಲಿ ಕ್ರಿಶ್ಚಿಯನ್​ ಶೈಲಿಯಲ್ಲಿ ಮದುವೆಯಾಗಿದ್ದಾರೆ. ಆಗಸ್ಟ್​​ 10, 11, 12ರಂದು ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹಪೂರ್ವ ಶಾಸ್ತ್ರಗಳು, ಆರತಕ್ಷತೆ, ಮದುವೆ ಶಾಸ್ತ್ರಗಳು ನಡೆದಿದ್ದವು.

Tharun Sonal Christian Wedding
ತರುಣ್ ಸುಧೀರ್-ಸೋನಾಲ್ ಮೊಂತೆರೋ ವಿವಾಹ (ETV Bharat)
author img

By ETV Bharat Entertainment Team

Published : Sep 3, 2024, 1:16 PM IST

ತರುಣ್ ಸುಧೀರ್-ಸೋನಾಲ್ ಮೊಂತೆರೋ ಕ್ರಿಶ್ಚಿಯನ್​ ಶೈಲಿಯ ವೆಡ್ಡಿಂಗ್​​ ಪ್ರೋಗ್ರಾಮ್​​ (ETV Bharat)

ಕನ್ನಡ ಚಿತ್ರರಂಗದ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮೊಂತೆರೋ ಕಳೆದ ತಿಂಗಳು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಇದೀಗ ಮಂಗಳೂರಿನಲ್ಲಿ ಕ್ರಿಶ್ಚಿಯನ್​ ಶೈಲಿಯ ವೆಡ್ಡಿಂಗ್​​ ಪ್ರೋಗ್ರಾಮ್ ನಡೆದಿದ್ದು, ಫೋಟೋ, ವಿಡಿಯೋಗಳು ಆನ್​​ಲೈನ್​​​ನಲ್ಲಿ ಸದ್ದು ಮಾಡುತ್ತಿವೆ. ​​

ಒಂದೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅಥವಾ ಒಂದೆಡೆ ಕೆಲಸ ಮಾಡುವ ಅನೇಕರು ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನ ಆರಂಭಿಸುತ್ತಾರೆ. ಸಿನಿಮಾರಂಗವೂ ಇದರಿಂದ ಹೊರತೇನಲ್ಲ. ನಟ-ನಟಿಯರು ಅಥವಾ ನಿರ್ದೇಶಕ-ನಟಿಯರು ಪ್ರೀತಿಸಿ ಮದುವೆಯಾದ ಅನೇಕ ಉದಾಹರಣೆಗಳಿವೆ. ಈ ಪಟ್ಟಿಗೆ ತರುಣ್ ಸುಧೀರ್-ಸೋನಾಲ್ ಮೊಂತೆರೋ ಹೊಸ ಸೇರ್ಪಡೆ.

ಆಗಸ್ಟ್​​ 10, 11, 12ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್​ನಲ್ಲಿ ಆರತಕ್ಷತೆ, ಮದುವೆ ಶಾಸ್ತ್ರಗಳು ನಡೆದಿದ್ದವು. ಸಮಾರಂಭಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು. ಇದೀಗ ಮಂಗಳೂರಿನಲ್ಲಿ ಕ್ರಿಶ್ಚಿಯನ್​ ಶೈಲಿಯಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದು, ಕನ್ನಡ ಚಿತ್ರರಂಗದ ಹಲವರು ಕಾಣಿಸಿಕೊಂಡಿದ್ದಾರೆ. ತರುಣ್ ಸುಧೀರ್ ಬ್ಲ್ಯಾಕ್​​ ಆ್ಯಂಡ್​ ವೈಟ್​​ ಸೂಟ್‌ನಲ್ಲಿ ಕಾಣಿಸಿಕೊಂಡರೆ, ಸೋನಾಲ್ ಮೊಂತೆರೋ ವೈಟ್​​​ ಶೈನಿಂಗ್​​ ಗೌನ್​​ನಲ್ಲಿ ಗೊಂಬೆಯಂತೆ ಕಂಗೊಳಿಸಿದ್ದಾರೆ. ಸೆಲೆಬ್ರಿಟಿಗಳೂ ಸಹ ಕ್ರಿಶ್ಚಿಯನ್​ ಶೈಲಿಯ ವೆಡ್ಡಿಂಗ್ ಔಟ್​ಫಿಟ್​​​ನಲ್ಲಿ ಮಿಂಚಿದ್ದಾರೆ. ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ತಮ್ಮ ಅಧಿಕೃತ ಸೋಷಿಯಲ್​​ ಮೀಡಿಯಾ ಪ್ಲ್ಯಾಟ್​​ಫಾರ್ಮ್​​​​ಗಳಲ್ಲಿ ಮದುವೆ ವಿಡಿಯೋ ಹಂಚಿಕೊಂಡ ಜೋಡಿ, ''ಟೇಕ್​​ 2, ನಮ್ಮ ಪ್ರೇಮ್​ಕಹಾನಿಯ ಸೀಕ್ವೆಲ್​​, ಮಂಗಳೂರು ಎಡಿಶನ್​​​'' ಎಂದು ಬರೆದುಕೊಂಡಿದ್ದಾರೆ.

ಮದುವೆ ಆಮಂತ್ರಣ ಪತ್ರಿಕೆ ಬಹಳ ಅರ್ಥಪೂರ್ಣವಾಗಿ, ಪರಿಸರಸ್ನೇಹಿಯಾಗಿ ಜನರ ಗಮನ ಸೆಳೆದಿತ್ತು. ನಂತರ ಥಿಯೇಟರ್ ಬ್ಯಾಕ್ ಗ್ರೌಂಡ್ ಹಾಗೂ ಸಿನಿಮಾ ಶೂಟಿಂಗ್ ಬ್ಯಾಕ್ ಟ್ರಾಪ್​ನಲ್ಲಿ ಮಾಡಿಸಿದ್ದ ಪ್ರೀ ವೆಡ್ಡಿಂಗ್​​ ಫೋಟೋಶೂಟ್​ ಕೂಡಾ ಗಮನ ಸೆಳೆದಿತ್ತು.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಬೋಲ್ಡ್​​ ಬೇಬಿಬಂಪ್​ ಫೋಟೋಶೂಟ್​: ಹುಬ್ಬೇರಿಸಿದ ನೆಟ್ಟಿಗರು - Deepika Padukone Baby Bump

ಸೂಪರ್​ ಹಿಟ್​ 'ರಾಬರ್ಟ್' ಸಿನಿಮಾ ಮೂಲಕ ಈ ಜೋಡಿಯ ಸ್ನೇಹ ಶುರುವಾಯಿತು. 2021ರ ಮಾರ್ಚ್​ 11ರಂದು ರಾಬರ್ಟ್ ಬಿಡುಗಡೆ ಆಗಿ ಯಶ ಕಂಡಿತ್ತು.​​ ಈ ಸಿನಿಮಾ ತರುಣ್​ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಪ್ರಮುಖ ಪಾತ್ರ ವಹಿಸಿದ್ದರು. ಚಿತ್ರದಲ್ಲಿ ಸೋನಾಲ್ ಮೊಂತೆರೋ ಅವರು ವಿನೋದ್ ಪ್ರಭಾಕರ್ ಅವರ ಜೊತೆ ಕಾಣಿಸಿಕೊಂಡಿದ್ದರು. ಇದೇ ರಾಬರ್ಟ್​​​ ಸಿನಿಮಾ ಮೂಲಕ ತರುಣ್ ಹಾಗೂ ಸೋನಾಲ್ ಸ್ನೇಹ ಶುರುವಾಯಿತು. ನಂತರ ಈ ಸ್ನೇಹ ಪ್ರೇಮಕ್ಕೆ ತಿರುಗಿತು.

ಇದನ್ನೂ ಓದಿ: 'ಮೆಜೆಸ್ಟಿಕ್ 2' ಚಿತ್ರದಲ್ಲಿ ಮಾಲಾಶ್ರೀ: ಸ್ಯಾಂಡಲ್​ವುಡ್​​ ಆ್ಯಕ್ಷನ್ ಕ್ವೀನ್ ಹೇಳಿದ್ದಿಷ್ಟು - Malashree in Majestic 2

ಈ ಜೋಡಿ ವಿಭಿನ್ನ ಧರ್ಮಕ್ಕೆ ಸೇರಿದವರು. ಹಾಗಾಗಿ ತರುಣ್ ಹಾಗೂ ಸೋನಾಲ್ ಮದುವೆಗೆ ಕುಟುಂಬಸ್ಥರನ್ನು ಒಪ್ಪಿಸಿದರು. ಕುಟುಂಬಸ್ಥರು ಕೂಡಾ ಸಂಪೂರ್ಣ ಒಪ್ಪಿಗೆ ಕೊಟ್ಟರು. ಈ ಎಲ್ಲಾ ವಿಚಾರಗಳನ್ನು ಪ್ರೆಸ್​​ಮೀಟ್​ ಸಂದರ್ಭ ಹೇಳಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.