ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಮುಖ್ಯಭೂಮಿಕೆಯಲ್ಲಿರೋ ಬಹುನಿರೀಕ್ಷಿತ ಚಿತ್ರ ''ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ''. ಬಿಡುಗಡೆಗೂ ಮುನ್ನ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಅಮಿತ್ ಜೋಶಿ ಮತ್ತು ಆರಾಧನಾ ಸಾಹ್ ನಿರ್ದೇಶನದ ಈ ಸಿನಿಮಾ ಮಾನವ ಮತ್ತು ರೋಬೋಟ್ ನಡುವಿನ ವಿಭಿನ್ನ ಪ್ರೇಮಕಥೆಯನ್ನು ಹೇಳಲಿದೆ.
ಪ್ರೇಮಿಗಳ ದಿನದ ಕೆಲವೇ ದಿನಗಳ ಮೊದಲು ಬಿಡುಗಡೆಯಾಗಲಿರುವ ಈ ಚಿತ್ರವು ಎಐ ಯುಗದಲ್ಲಿ ನಡೆಯುವ ಒಂದು ವಿಭಿನ್ನ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ರವಾನಿಸೋ ಭರವಸೆ ನೀಡಿದೆ. ಚಿತ್ರದ ಅಡ್ವಾನ್ಸ್ ವ್ಯವಹಾರ ಕೂಡ ಉತ್ತಮವಾಗಿದ್ದು, ತೆರೆಕಾಣುವ ಮೊದಲ ದಿನಕ್ಕೆ 45 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಸಿದೆ.
''ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ'' ಸಿನಿಮಾ 23,079 ಟಿಕೆಟ್‌ಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಿದ್ದು, ಸರಿಸುಮಾರು 46.22 ಲಕ್ಷ ರೂಪಾಯಿ ಸಂಪಾದಿಸಿದೆ. 3,755 ಶೆಡ್ಯೂಲ್ಡ್ ಸ್ಕ್ರೀನಿಂಗ್ ಮೂಲಕ ಯಶಸ್ವಿ ಪ್ರದರ್ಶನಕ್ಕೆ ಸಿದ್ಧವಾಗಿದೆ. ಪ್ರಾದೇಶಿಕವಾಗಿ, 19.17 ಲಕ್ಷ ರೂಪಾಯಿಯ ವ್ಯವಹಾರದೊಂದಿಗೆ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. 17.2 ಲಕ್ಷ ರೂಪಾಯಿಗಳೊಂದಿಗೆ ದೆಹಲಿ ಎರಡನೇ ಸ್ಥಾನದಲ್ಲಿದೆ. ಸಿನಿಮಾದ ಆದಾಯಕ್ಕೆ 11.98 ಲಕ್ಷ ರೂಪಾಯಿ ಕೊಡುಗೆ ನೀಡುವ ಮೂಲಕ ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ.
''ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ'' ಸಿನಿಮಾ ಕಂಪ್ಯೂಟರ್ ಇಂಜಿನಿಯರ್ (ಶಾಹಿದ್) ಓರ್ವ ರೋಬೋಟ್ (humanoid robot - ಕೃತಿ ಸನೋನ್) ಪ್ರೀತಿಯಲ್ಲಿ ಬೀಳುತ್ತಾನೆ. ಫೈನಲಿ ಆಕೆಯನ್ನು ಮದುವೆಯಾಗುತ್ತಾನೆ. ಫೆಬ್ರವರಿ 9, ಶುಕ್ರವಾರದಂದು ಈ ಚಿತ್ರ ತೆರೆಗಪ್ಪಳಿಸಲಿದೆ. ಆ ದಿನ ಯಾವುದೇ ಹೊಸ ಹಿಂದಿ ಚಿತ್ರ ಬಿಡುಗಡೆಯಾಗದ ಕಾರಣ, ಅತಿ ಹೆಚ್ಚು ಲಾಭ ಪಡೆಯೋ ಸಾಧ್ಯತೆಗಳಿವೆ. ಪ್ರೇಮಿಗಳ ದಿನ ಹತ್ತಿರದಲ್ಲಿದ್ದು, ಇದೇ ಸಂದರ್ಭ ಒಂದು ವಿಭಿನ್ನ ಪ್ರೇಮಕಥೆ ಚಿತ್ರಮಂದಿರ ಪ್ರವೇಶಿಸಲಿದೆ. ಹಾಗಾಗಿ ಬಾಕ್ಸ್ ಆಫೀಸ್ ಅಂಕಿ - ಅಂಶ ಉತ್ತಮವಾಗಿರಲಿದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಪಾರ್ಟ್ 2ಗೆ ಪೂರ್ಣಗೊಳ್ಳಲ್ಲ 'ಪುಷ್ಪ': 'ದಿ ರೂಲ್' ಬಳಿಕ ಬರಲಿದೆ 'ದಿ ರೋರ್' - ಪುಷ್ಪ 3 ಲೋಡಿಂಗ್?
ಚಿತ್ರದ ಟ್ರೇಲರ್ ಮತ್ತು ಹಾಡುಗಳು, ವಿಶೇಷವಾಗಿ ಟೈಟಲ್ ಟ್ರ್ಯಾಕ್ ಹಾಗೂ ಲಾಲ್ ಪೀಲಿ ಆಂಖಿಯಾನ್, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಆಕರ್ಷಕ ಗ್ರಾಫಿಕ್ಸ್, ಸೌಂಡ್ಟ್ರ್ಯಾಕ್ ಮತ್ತು ಕುತೂಹಲಕಾರಿ ಕಥೆ ಸಿನಿಮಾ ನೋಡುವ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಟ್ರೇಲರ್ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ವರ್ಷದ ಮೊದಲ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರೀತಿಪಾತ್ರರೊಂದಿಗೆ ಸಿನಿಮಾ ನೋಡುವ ಮನಸ್ಸು ಮಾಡಿದ್ದರೆ, ಇದು ಅತ್ಯುತ್ತಮ ಆಯ್ಕೆ. ಚಿತ್ರದ ಕ್ಲೈಮ್ಯಾಕ್ಸ್ ಹೈಲೈಟ್ ಎಂದು ನಂಬಲಾಗಿದೆ. ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸೋ ಕಥೆ ಇದೇ ಶುಕ್ರವಾರ ತೆರೆಗಪ್ಪಳಿಸಲಿದೆ.
ಇದನ್ನೂ ಓದಿ: ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಿದ್ ಕಿಯಾರಾ: ಲವ್ ಬರ್ಡ್ಸ್ಗೆ ಶುಭಾಶಯಗಳ ಮಹಾಪೂರ