ETV Bharat / entertainment

ಶಾಹಿದ್ ಕಪೂರ್, ಕೃತಿ ಸನೋನ್ ಅಭಿನಯದ 'ಟಿಬಿಎಂಎಯುಜೆ' ಬಿಡುಗಡೆ - ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ

ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರ ಅಭಿನಯದ 'ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ' ಸಿನಿಮಾ ಪ್ರೇಮಿಗಳ ದಿನಾಚರಣೆಗೂ ಮುನ್ನವೇ, ಇಂದು (ಶುಕ್ರವಾರ) ಥಿಯೇಟರ್‌ಗಳಿಗೆ ಬಿಡುಗಡೆಯಾಗಿದೆ. ಚಿತ್ರಕ್ಕೆ ಮುಂಗಡ ಬುಕಿಂಗ್‌ನ ಕೊನೆಯ ದಿನವಾದ ನಿನ್ನೆ (ಗುರುವಾರ) ಭಾರಿ ಏರಿಕೆ ಕಂಡಿದೆ.

Teri Baaton Mein Aisa Uljha Jiya  Shahid Kapoor and Kriti Sanon  TBMAUJ advance booking  ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ  ಶಾಹಿದ್ ಕಪೂರ್ ಕೃತಿ ಸನೋನ್
ಶಾಹಿದ್ ಕಪೂರ್, ಕೃತಿ ಸನೋನ್ ಅಭಿನಯದ 'ಟಿಬಿಎಂಎಯುಜೆ' ಬಿಡುಗಡೆಗೆ ಸಿದ್ಧ: ಮುಂಗಡ ಟಿಕೆಟ್​ ಬುಕಿಂಗ್​ ಜೋರು
author img

By ETV Bharat Karnataka Team

Published : Feb 9, 2024, 11:45 AM IST

Updated : Feb 9, 2024, 12:26 PM IST

ಹೈದರಾಬಾದ್: ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿರುವ ಅಭಿನಯದ ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ ಇಂದು ಫೆಬ್ರವರಿ 9, 2024 ರಂದು ಥಿಯೇಟರ್‌ಗಳಲ್ಲಿ ತೆರೆ ಕಂಡಿದೆ. ಬಿಎಂಎಯುಜೆ (TBMAUJ) ಚಿತ್ರವು ಎಫೆಕ್ಟಿವ್ ಟ್ರೇಲರ್‌ನಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಜೊತೆಗೆ ಸಿನಿಮಾದ ಹಾಡುಗಳು ಆಕರ್ಷಕವಾಗಿವೆ.

  • " class="align-text-top noRightClick twitterSection" data="">

ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುವ ನಿರೀಕ್ಷೆ: ಚಿತ್ರದ ಮುಂಗಡ ಬುಕ್ಕಿಂಗ್​​ನಲ್ಲಿ ಇದು ಗಮನಾರ್ಹವಾದಂತೆ ಕಂಡು ಬರದಿದ್ದರೂ, ಚಲನಚಿತ್ರವು ಆಕರ್ಷಕವಾಗಿದ್ದರೆ ದೀರ್ಘಾವಧಿಯಲ್ಲಿ ಇದು ನಿಸ್ಸಂದೇಹವಾಗಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಟೈಟಲ್​ ಹಾಗೂ ಅಖಿಯಾನ್ ಗುಲಾಬ್ ಸಾಂಗ್​ ಯುವಜನರಲ್ಲಿ ಹೊಸ ಟ್ರೆಂಡ್​ ಹುಟ್ಟುಹಾಕಿರುವುದರ ಜೊತೆಗೆ ಜನಪ್ರಿಯತೆ ಗಳಿಸಿದೆ. ಆದರೆ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುವ ನಿರೀಕ್ಷೆಯನ್ನು ಹೊಂದಿದೆ.

ಅಮಿತ್ ಜೋಶಿ ಮತ್ತು ಆರಾಧನಾ ಸಾಹ್ ನಿರ್ದೇಶನದ 'ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ' ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಸೇರಿದಂತೆ ಇತರರು ನಟಿಸಿದ್ದಾರೆ. ಮೊದಲ ಎರಡು ದಿನಗಳ ನೀರಸದ ನಂತರ, ಅಂತಿಮ ದಿನವಾದ ನಿನ್ನೆ (ಗುರುವಾರ) ಮುಂಗಡ ಟಿಕೆಟ್ ಮಾರಾಟದಲ್ಲಿ ಭಾರಿ ಹೆಚ್ಚಳ ಕಂಡು ಬಂದಿತ್ತು. 2,500 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗಿದೆ. ಈದ್ ತನಕ ಇದು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಲಿದೆ.

ಮೊದಲ ದಿನ 96,571 ಟಿಕೆಟ್‌ಗಳು ಬುಕ್ಕಿಂಗ್​: TBMAUJ ಚಲನಚಿತ್ರದ ಮುಂಗಡ ಬುಕಿಂಗ್ ಸಾಕಷ್ಟು ಉತ್ತಮವಾಗಿ ಆಗಿದೆ. 96,571 ಟಿಕೆಟ್‌ಗಳು ಮೊದಲ ದಿನದಂದು PVRInox ಮತ್ತು Cinepolis ನಲ್ಲಿ ಮಾರಾಟವಾಗಿವೆ. ಮುಂಗಡ ಟಿಕೆಟ್ ಮಾರಾಟದಿಂದ 2.11 ಕೋಟಿ ರೂ. ಕಲೆಕ್ಷನ್​ ಆಗಿದೆ. ಶಾಹಿದ್ ಅವರ ಇತ್ತೀಚಿನ ಬಿಡುಗಡೆಗಳಾದ 'ಜರ್ಸಿ' ಮತ್ತು 'ಬತ್ತಿ ಗುಲ್ ಮೀಟರ್ ಚಾಲು'ಗಿಂತ ನೂತನ ಚಿತ್ರ TBMAUJ ಉತ್ತಮವಾಗಿ ಕಾಣುವ ಸೂಚನೆಯನ್ನು ನೀಡಿದೆ. ಈ ಚಿತ್ರವು ಮೊದಲ ದಿನ 6.5 ಮತ್ತು 7 ಕೋಟಿ ರೂಪಾಯಿವರೆಗೆ ಕಲೆಕ್ಷನ್ ಮಾಡುವ ಸುಳಿವನ್ನು ನೀಡಿದೆ. ಇದು ಶಾಹಿದ್​ ಅವರ 2011ರ ಪ್ರೇಮ ಕಥೆ ಆಧರಿಸಿದ ಮೌಸಂ ಚಿತ್ರದ ಕಲೆಕ್ಷನ್​ನ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

ಚಿತ್ರಕ್ಕೆ ಯು/ಎ ಪ್ರಮಾಣಪತ್ರ: ಸಿಬಿಎಫ್‌ಸಿ (CBFC)'ತೇರಿ ಬ್ಯಾಟನ್ ಮೇ ಐಸಾ ಉಲ್ಜಾ ಜಿಯಾ' ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ. ಸೆನ್ಸಾರ್ ಪ್ರಮಾಣಪತ್ರದ ಪ್ರಕಾರ, ಚಿತ್ರವು 143.15 ನಿಮಿಷಗಳು (2 ಗಂಟೆ, 23 ನಿಮಿಷಗಳು ಮತ್ತು 15 ಸೆಕೆಂಡುಗಳು) ರನ್​ ಟೈಮ್​ ಅನ್ನು ಹೊಂದಿದೆ. ಸಿಬಿಎಫ್‌ಸಿಯು ಈ ಚಿತ್ರದಲ್ಲಿ 36 ರಿಂದ 27 ಸೆಕೆಂಡುಗಳವರೆಗೆ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದೆ. ಇದರ ಜೊತೆಗೆ, ಚಿತ್ರದ ಅಂತಿಮ ದೃಶ್ಯಗಳಲ್ಲಿ ದರು (ಮದ್ಯ) ಎಂಬ ಪದವನ್ನು ಡ್ರಿಂಕ್​ (ಕುಡಿ) ಅಂತ ಬದಲಾಯಿಸಲಾಗಿದೆ.

ಇದನ್ನೂ ಓದಿ: ಯಾಮಿ ಗೌತಮ್ ನಟನೆಯ 'ಆರ್ಟಿಕಲ್ 370' ಸಿನಿಮಾ ಟ್ರೇಲರ್ ಔಟ್

Last Updated : Feb 9, 2024, 12:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.