SWARA BHASKER TWEET: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚಿನ ದಿನಗಳಲ್ಲಿ ಚಿತ್ರಗಳಿಂದ ದೂರ ಉಳಿದಿದ್ದಾರೆ. ಆದರೆ ಆಗಾಗ ಅವರು ಸುದ್ದಿಯಲ್ಲಿರುತ್ತಾರೆ. ಇಂದು, ಬಕ್ರೀದ್ ಸಂದರ್ಭದಲ್ಲಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಸಸ್ಯಾಹಾರಿಗಳ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ. ಅದಕ್ಕೆ ಕಾರಣ ಫುಡ್ ವ್ಲಾಗರ್. ಅವರು ಸಾಮಾಜಿಕ ಜಾಲತಾಣದಲ್ಲಿ ನಾನು ಸಸ್ಯಾಹಾರಿ ಎಂದು ಹೆಮ್ಮೆಪಡುತ್ತೇನೆ ಎಂದು ಹೇಳಿಕೊಳ್ಳುವ ಮೂಲಕ ಚರ್ಚೆ ಶುರುವಾಗಿದೆ.
ಜನಪ್ರಿಯ ಫುಡ್ ಬ್ಲಾಗರ್ ನಳಿನಿ ಉದಾಗರ್, ನಾನು ಸಸ್ಯಾಹಾರಿ ಎಂದು ಹೇಳಲು ಹೆಮ್ಮೆಪಡುತ್ತೇನೆ. ನನ್ನ ತಟ್ಟೆಯು ಕಣ್ಣೀರು, ಕ್ರೌರ್ಯ ಮತ್ತು ಅಪರಾಧದಿಂದ ಮುಕ್ತವಾಗಿದೆ" ಎಂದು ಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಜತೆಗೆ, ಸಸ್ಯಾಹಾರ ಇರುವ ಫೋಟೋ ಹಂಚಿಕೊಂಡಿದ್ದರು.
ನಳಿನಿ ಉದಾಗರ್ ಪೋಸ್ಟ್ ಅನ್ನು ಹಂಚಿಕೊಂಡಿರುವ ನಟಿ ಸ್ವರ ಭಾಸ್ಕರ್ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕಾದರೆ ನನಗೆ ಸಸ್ಯಾಹಾರಿಗಳ ಈ ಸ್ವಯಂ ನೀತಿ ಅರ್ಥವಾಗುತ್ತಿಲ್ಲ. ನಿಮ್ಮ ಸಂಪೂರ್ಣ ಆಹಾರ ಕ್ರಮ ಹೇಗಿದೆ ನೋಡಿ. ಕರುವಿಗೆ ಅದರ ತಾಯಿಯ ಹಾಲು ದೊರಕದಂತೆ ಮಾಡುವಿರಿ. ಬಲವಂತವಾಗಿ ಹಸು ಗರ್ಭಧರಿಸುವಂತೆ ಮಾಡುವಿರಿ. ನಂತರ ಕರುಗಳಿಂದ ತಾಯಿಯನ್ನು ಬೇರ್ಪಡಿಸುವಿರಿ. ಅವುಗಳ ಹಾಲನ್ನು ಕದಿಯುವಿರಿ. ನೀವು ಬೇರು ತರಕಾರಿ, ಗೆಡ್ಡೆಗಳನ್ನು ತಿನ್ನುವಿರಿ. ಅದು ಇಡೀ ಸಸ್ಯವನ್ನೇ ಕೊಲ್ಲುತ್ತದೆ. ಸುಮ್ಮನೆ ಇರಿ, ಈಗ ಬಕ್ರೀದ್ ಬಂದಿರುವುದರಿಂದ ಇಂತಹ ಕೆಲಸಗಳನ್ನು ಮಾಡಬೇಡಿ ಎಂದು ನಟಿ ಸ್ವರ ಭಾಸ್ಕರ್ ಹೇಳಿದ್ದಾರೆ.
ಇನ್ನು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸ್ವರ ಭಾಸ್ಕರ್ ಪೋಸ್ಟ್‌ಗೆ ಪರ ಮತ್ತು ವಿರೋಧ ಕಾಮೆಂಟ್‌ಗಳು ಬಂದಿವೆ. ತಾಯಿ ಹಸುವಿನಿಂದ ಕರುವನ್ನು ದೂರ ಮಾಡಿ ಹಾಲು ಪಡೆಯವುದು ಕ್ರೌರ್ಯ ಎಂದು ನಾನು ಒಪ್ಪುವೆ. ಆದರೆ, ಜಗತ್ತಿನಲ್ಲಿ ಹಲವು ದಶಲಕ್ಷ ಹಸುಗಳನ್ನು ಕ್ರೂರವಾಗಿ ಸಾಯಿಸಿ ಮಾಂಸ ಪಡೆಯುವುದನ್ನು ನೀವು ಸಮ್ಮತಿಸುವಿರಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಜಗತ್ತಿನ ಪ್ರಮುಖ ನ್ಯೂಟ್ರಿಷಿಯನ್‌ಗಳು ಸಸ್ಯಾಹಾರ ಡಯೆಟ್‌ಗೆ ಏಕೆ ಪ್ರೋತ್ಸಾಹ ನೀಡುತ್ತಿದ್ದಾರೆ?. ಆರೋಗ್ಯ, ನಮ್ಮ ಗ್ರಹ, ನಮ್ಮ ಪರಿಸರ, ಜಾಗತಿಕ ತಾಪಮಾನಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಗೊತ್ತೆ?. ಹೀಗಿದ್ದರೂ ನೀವು ಈ ರೀತಿ ಪೋಸ್ಟ್ ಮಾಡುತ್ತಿದ್ದೀರಿ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಓದಿ: ಆಗ ದರ್ಶನ್ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ: ಮಾಜಿ ಸಚಿವ ಬಿ.ಸಿ.ಪಾಟೀಲ್ - Renukaswamy murder case