ಹೈದರಾಬಾದ್: 'ಆಡುಜೀವಿತಂ' ಎಂದೇ ಪರಿಚಿತವಾಗಿರುವ 'ದಿ ಗೋಟ್ ಲೈಫ್' ಚಿತ್ರದ ಅಡಿಯೋ ಬಿಡುಗಡೆ ಸಮಾರಂಭದ ವೇಳೆ ಚಿತ್ರ ತಂಡದ ಕುರಿತು ಸೂಪರ್ಸ್ಟಾರ್ ಮೋಹನ್ಲಾಲ್ ಮೆಚ್ಚುಗೆ ಸೂಚಿಸಿದ್ದು, ಚಿತ್ರ ಯಶಸ್ಸು ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ಪ್ರತಿಯೊಂದು ಉಸಿರಾಟವೂ ಹೋರಾಟವೇ' ಎಂಬ ಚಿತ್ರದ ಟ್ಯಾಗ್ಲೈನ್ ಚಿತ್ರದ ಜೀವಾಳವಾಗಿದೆ ಎಂದು ಪ್ರಶಂಸಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕತೆ ಸಮಯದಲ್ಲಿ ಚಿತ್ರದ ನಿರ್ಮಾಣ ಸಂಸ್ಥೆ ಅನುಭವಿಸಿದ ಸವಾಲುಗಳನ್ನೂ ಮೀರಿ ಚಿತ್ರದ ಪಾತ್ರಧಾರಿಗಳು ಮತ್ತು ಸಿಬ್ಬಂದಿಗಳ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಹೊಗಳಿದ, ಅವರು ಈ ಚಿತ್ರದ ಕುರಿತು ಹೊಸ ಭರವಸೆ ಮತ್ತು ಪ್ರಾರ್ಥನೆ ಸೇರಿದ್ದು, ಶುಭವಾಗಲಿ ಎಂದು ಹಾರೈಸಿದರು.
- " class="align-text-top noRightClick twitterSection" data="">
ಇದೇ ವೇಳೆ ಚಿತ್ರ ನಿರ್ದೇಶಕ ಬ್ಲೆಸ್ಸೆ ಅವರನ್ನು ಹೊಗಳಿದ ಮೋಹನ್ ಲಾಲ್, ಅವರು ಚಿತ್ರ ನಿರ್ಮಾಣದಲ್ಲಿ ಅಸಾಧ್ಯವಾದುದನ್ನು ಮಾಡಿ ತೋರಿಸುವ ಸಾಮರ್ಥ್ಯವಿರುವ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರ ನಿರ್ದೇಶನ ಮತ್ತು ತಮ್ಮ ಕಲ್ಪನೆಗಳನ್ನು ಸಿನಿಮಾದ ಮೂಲಕ ವಾಸ್ತವಕ್ಕೆ ತಂದ ಕುರಿತು ಮಾತನಾಡಿದ ನಿರ್ದೇಶಕ ಬ್ಲೆಸ್ಸೆ, ಸತ್ಯ ಕಲ್ಪನೆಗಳಿಗಿಂತ ಬೇರೆಯಾಗಿರುವುದಿಲ್ಲ. ಈ ಚಿತ್ರದ ಟ್ಯಾಗ್ಲೈನ್ ಅನ್ನು ತಾವು ಸಿನಿಮಾವಾಗಿ ಅಳವಡಿಸಿಕೊಂಡಿರುವ ಕಾದಂಬರಿಯಿಂದಲೇ ತೆಗೆದುಕೊಂಡಿರುವುದಾಗಿ ಎಂದು ತಿಳಿಸಿದರು.
ಈ ಚಿತ್ರವೂ ಬೆನ್ಯಮಿನ್ ಲೇಖನದ ಪ್ರಸಿದ್ಧ ಕಾದಂಬರಿ 'ಆಡುಜೀವಿತಂ' ಕಥೆ ಆಧಾರಿಸಿದೆ. ಮಲಯಾಳಂನಲ್ಲಿ ಅತಿ ಹೆಚ್ಚು ಮಾರಾಟ ಕಂಡ ಈ ಪುಸ್ತಕ 12 ಭಾಷೆಗಳಿಗೆ ಭಾಷಾಂತರವಾಗಿದೆ. ಈ ಕಾದಂಬರಿಯೂ 'ದಿ ಗೋಟ್ ಲೈಫ್' ಎಂಬ ಹೆಸರಿನಲ್ಲಿ ಇಂಗ್ಲಿಷ್ನಲ್ಲಿಯೂ ಬಿಡುಗಡೆಯಾಗಿದೆ.
- " class="align-text-top noRightClick twitterSection" data="">
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದು, ನಟಿ ಅಮಲಾ ಪೌಲ್ ಕೂಡ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಿನಿಮಾಗೆ ಎಆರ್ ರೆಹಮಾನ್ ಸಂಗೀತವಿದೆ. ಇದೇ ಮಾರ್ಚ್ 28ರಂದು ಚಿತ್ರ ಥಿಯೇಟರ್ನಲ್ಲಿ ಬಿಡುಗಡೆಯಾಗಲಿದೆ. ಮಲಯಾಳಂ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆ ಕಾಣಲಿದೆ. ಜೀವನೋಪಾಯಕ್ಕೆ ಕೇರಳ ತೊರೆದು ವಿದೇಶದಲ್ಲಿ ಅದೃಷ್ಟ ಅರಸುತ್ತ ವಲಸೆ ಹೋದ ನಜೀಬ್ ಎಂಬ ಯುವಕನ ಕಥೆ ಆಧಾರಿತ 'ಆಡುಜೀವಿತಂ' ಕಾದಂಬರಿಯನ್ನು ಸಿನಿಮಾವಾಗಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ಇತ್ತೀಚಿಗೆ ಚಿತ್ರ ತಂಡ ಟ್ರೈಲರ್ ಮತ್ತು ಟೈಟಲ್ ಸಾಂಗ್ ಬಿಡುಗಡೆ ಮಾಡಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು.
ಇದನ್ನೂ ಓದಿ: ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ದಿ ಗೋಟ್ ಲೈಫ್'ಗೆ ರಣ್ವೀರ್ ಸಿಂಗ್ ಸಾಥ್; ಪೋಸ್ಟರ್ ರಿಲೀಸ್