ETV Bharat / entertainment

ಮಲಯಾಳಂ ಸಿನಿಮಾ ಶೂಟಿಂಗ್​​ ಸೆಟ್​ನಲ್ಲಿ ಸನ್ನಿ ಲಿಯೋನ್​: ಫೋಟೋ ವೈರಲ್​ - Sunny Leone Malayalam Film

author img

By ETV Bharat Karnataka Team

Published : Apr 24, 2024, 5:24 PM IST

ಇನ್ನೂ ಹೆಸರಿಡದ ಮಲಯಾಳಂ ಸಿನಿಮಾವೊಂದರಲ್ಲಿ ನಟಿ ಸನ್ನಿ ಲಿಯೋನ್​ ನಟಿಸುತ್ತಿದ್ದಾರೆ.

Sunny Leone currently shooting for her Malayalam project in Kerala

ಕೊಚ್ಚಿ: ಚಿತ್ರಗಳ ಆಯ್ಕೆಯಲ್ಲಿ ವಿಶೇಷ ಮುತುವರ್ಜಿ ವಹಿಸುವ ಮೂಲಕ ತಮ್ಮ ಅಭಿಮಾನಿ ಸಮುದಾಯಕ್ಕೆ ಸದಾ ಅಚ್ಚರಿ ಉಂಟುಮಾಡುತ್ತಾ ಬಂದವರು ನಟಿ ಸನ್ನಿ ಲಿಯೋನ್. ಅದರಂತೆ ಇದೀಗ ಅವರು ಮಲಯಾಳಂ ಚಿತ್ರವೊಂದರಲ್ಲಿ ಮಿಂಚಲು ಸಜ್ಜಾಗಿದ್ದಾರೆ. ನಿರ್ದೇಶಕ ಅನುರಾಗ್​ ಕಶ್ಯಪ್​ ಅವರ 'ಕೆನಾಡಿ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸನ್ನಿ ಈ ನಡುವೆ ಮಲಯಾಳಂ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಫೋಟೋಗಳು ವೈರಲ್ ಆಗಿವೆ.

ಸನ್ನಿ ಲಿಯೋನ್​ ನಟಿಸುತ್ತಿರುವ ಮಲಯಾಳಂ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಶೂಟಿಂಗ್​ ಕೇರಳದಲ್ಲಿ ಸಾಗುತ್ತಿದೆ. ನಟಿಗೆ ದೃಶ್ಯಗಳ ಕುರಿತು ಸಿಬ್ಬಂದಿ ವಿವರಿಸುತ್ತಿರುವುದನ್ನು ಫೋಟೋದಲ್ಲಿ ನೋಡಬಹುದು. ನಟಿ ಗುಲಾಬಿ ಬಣ್ಣದ ಶರ್ಟ್ ಹಾಗು ಡೆನಿಮ್​ ಶಾರ್ಟ್ಸ್​ನಲ್ಲಿ ಕಂಡುಬಂದಿದ್ದಾರೆ. 'ಮಲಯಾಳಂನ ಅದ್ಭುತ ಸಿನಿಮಾದಲ್ಲಿ ಭಾಗಿಯಾಗಿರುವುದಕ್ಕೆ ಸಂತಸವಿದೆ' ಎಂದು ಅವರು ತಿಳಿಸಿದ್ದಾರೆ

ಇತ್ತೀಚಿಗಷ್ಟೆ ಚಿತ್ರದ ಮುಹೂರ್ತದಲ್ಲಿ ಅವರು ಭಾಗಿಯಾಗಿದ್ದರು. ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪಂಪಲ್ಲಿ ನಿರ್ದೇಶಿಸುತ್ತಿದ್ದಾರೆ. ತಮ್ಮ ಪಾತ್ರ ಸೇರಿದಂತೆ ಪ್ರಮುಖ ಅಂಶಗಳ ಕುರಿತು ಚಿತ್ರತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಸನ್ನಿ ಲಿಯೋನ್​ ಈ ಹಿಂದೆ ಮಮ್ಮುಟ್ಟಿ ಅಭಿನಯದ 'ಮಧುರರಾಜಾ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮಲಯಾಳಂ ಪ್ರೇಕ್ಷಕರನ್ನು ಸೆಳೆದಿದ್ದರು. ಇದರ ಹೊರತಾಗಿ 'ರಂಗೀಲಾ' ಮತ್ತು 'ಶೆರೊ' ಎಂಬೆರಡು ಮಲಯಾಳಂ ಸಿನಿಮಾಗಳಲ್ಲೂ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾಗಳ ಶೂಟಿಂಗ್​ಗಳ ನಡುವೆ ಸನ್ನಿ ಲಿಯೋನ್​ ಸ್ಪ್ಲಿಟ್ಸ್ವಿಲ್ಲಾ ಎಕ್ಸ್​5ನ ನಿರೂಪಣೆ ಕೂಡ ಮಾಡುತ್ತಿದ್ದಾರೆ.

ಸನ್ನಿ ಲಿಯೋನ್​ ಅಭಿನಯದ 'ಕೆನಾಡಿ' ಚಿತ್ರಕ್ಕೆ ಕೇನ್ಸ್​​​ ಫಿಲ್ಮ್​ ಫೆಸ್ಟಿವಲ್‌ನಲ್ಲೂ ಕೂಡ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಹೊರತಾಗಿ ಅನೇಕ ಜಾಗತಿಕ ಫಿಲ್ಮ್​ ಫೆಸ್ಟಿವಲ್ಸ್​ನಲ್ಲಿ ಚಿತ್ರ ಪ್ರದರ್ಶನಗೊಂಡಿದೆ. ಆದರೆ, ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿಲ್ಲ. ಇದರ ಹೊರತಾಗಿ ಕೋಟೇಶನ್​ ಗ್ಯಾಂಗ್​ ಚಿತ್ರದಲ್ಲೂ ಇವರು ನಟಿಸಲಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ: ಅವಾರ್ಡ್ ಪ್ರೋಗ್ರಾಮ್​ಗೆ ಅಮೀರ್​ ಖಾನ್ ಏಕೆ ಹೋಗಲ್ಲ?: ಕಪಿಲ್​​ ಶೋನಲ್ಲಿ ನಟ ಕೊಟ್ಟ ಉತ್ತರವಿದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.