ETV Bharat / entertainment

ದರ್ಶನ್​ಗೆ ಸುಮಲತಾ ಅಂಬರೀಶ್ ಕೊಟ್ರು ಕೋಟಿ ಬೆಲೆ ಬಾಳುವ ಗಿಫ್ಟ್! - Actor Darshan - ACTOR DARSHAN

ನಟ ದರ್ಶನ್​ಗೆ ಸುಮಲತಾ ಅಂಬರೀಶ್ ಅವರು ಕೋಟಿ ಬೆಲೆಯ ಡೈಮಂಡ್ ವಾಚ್ ಗಿಫ್ಟ್ ಆಗಿ ನೀಡಿದ್ದಾರೆ.

ದರ್ಶನ್
ದರ್ಶನ್ (ETV Bharat)
author img

By ETV Bharat Karnataka Team

Published : May 4, 2024, 9:53 AM IST

ಜೀವನದಲ್ಲಿ ಚಾಲೆಂಜ್​ಗಳನ್ನ ಎದುರಿಸುತ್ತಾ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರುವ ನಟ ದರ್ಶನ್. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಹೀರೋ. ಅಷ್ಟೇ ಏಕೆ ದರ್ಶನ್ ಅಭಿಮಾನಿಗಳ‌ ಅಚ್ಚುಮೆಚ್ಚಿನ ನಟನೂ ಹೌದು. ಸದ್ಯ ಕಾಟೇರ ಸಕ್ಸಸ್ ಜೊತೆಗೆ ಡೇವಿಲ್ ಅವತಾರ ತಾಳಿರೋ ದರ್ಶನ್​ಗೆ ದುಬಾರಿ ಬೆಲೆಯ ಡೈಮಂಡ್ ವಾಚ್​​ವೊಂದು ಗಿಫ್ಟ್ ಸಿಕ್ಕಿದೆ. ಅದು ಎಷ್ಟು ಕೋಟಿ ಬೆಲೆ ಬಾಳುತ್ತೆ.? ಆ ಡೈಮಂಡ್ ವಾಚ್ ಯಾರು ಕೊಟ್ರು ಅನ್ನೋ ಮಾಹಿತಿ ಇಲ್ಲಿದೆ.

ದರ್ಶನ್​, ಮಾಸ್ತಿ, ರಾಕ್​​ಲೈನ್ ವೆಂಕಟೇಶ್ (ETVB Bharat)

ಲೂನಾ ಬೈಕ್​​ನಿಂದ ಲ್ಯಾಂಬೋರ್ಗಿನಿ ಕಾರು ಹೊಂದಿರುವ ದರ್ಶನ್ ಬೆಳೆದ ದಾರಿ ಮಾತ್ರ ಇಂಟ್ರಸ್ಟಿಂಗ್. ಲೈಟ್ ಬಾಯ್ ಆಗಿದ್ದ ದರ್ಶನ್, ಇಂದು ಸೂಪರ್ ಸ್ಟಾರ್. ಹಣ, ಆಸ್ತಿ, ಅಂತಸ್ತು ಎಲ್ಲವೂ ಸಿಕ್ಕಾಯ್ತು. ಎಲ್ಲಕ್ಕಿಂತ ಮಿಗಿಲಾಗಿ ಕೋಟ್ಯಂತರ ಅಭಿಮಾನಿಗಳ ಒಡೆಯನಾಗಿರುವ ದರ್ಶನ್ ತನ್ನನ್ನ‌ ನಂಬಿದವರ ಪಾಲಿಗೆ ನಿಜಕ್ಕೂ ಯಜಮಾನ.

ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಪಾಲಿಗೆ ದರ್ಶನ್ ಹಿರಿಮಗ. ಬುಲ್ ಬುಲ್ ಚಿತ್ರದಲ್ಲಿ ಜೂನಿಯರ್ ಸೀನಿಯರ್ ಆಗಿ ಕೂಡ ಅಂಬಿ ಹಾಗೂ ದಚ್ಚು ಜೋಡಿ ಮೋಡಿ ಮಾಡಿತ್ತು. ರೆಬೆಲ್ ಸ್ಟಾರ್ ಇಂದು ನಮ್ಮೊಂದಿಗೆ ಇಲ್ಲವಾದ್ರೂ ಅಂಬಿ ಕುಟುಂಬದ ಪಾಲಿಗೆ ದರ್ಶನ್ ಫ್ಯಾಮಿಲಿ ಮೆಂಬರ್. ಅಂಬರೀಶ್ ನಿಧನದ ನಂತರ ಸುಮಲತಾ ಅಂಬರೀಶ್ ಸಂಸದೆ ಆಗೋಕೆ ದರ್ಶನ್ ಬೆನ್ನೆಲುಬಾಗಿ ನಿಂತಿದ್ದು ಗೊತ್ತಿರುವ ವಿಚಾರ. ಸುಮಲತಾ ಅವರನ್ನ ಸದಾ ಮದರ್ ಇಂಡಿಯಾ ಅಂತ ಕರೆಯುವ ನಟ‌ ದರ್ಶನ್. ಇನ್ನು ಸಮಲತಾ ಕೂಡ ಅಭಿ ನನ್ನ ಎರಡನೇ ಮಗ, ದರ್ಶನ್ ನನ್ನ ದೊಡ್ಡ ಮಗ ಅಂತ ಸಾಕಷ್ಟು ಸಲ ಬಹಿರಂಗವಾಗಿಯೇ ಹೇಳಿದ್ದಾರೆ.

ಇದನ್ನೆಲ್ಲಾ ಈಗ್ಯಾಕೆ ಹೇಳ್ತಿದ್ದೀವಿ ಅಂದ್ರೆ, ಗುರುವಾರ ದರ್ಶನ್ ಒಂದು ದುಬಾರಿ ವಾಚ್​​ನಿಂದ ಗಮನ ಸೆಳೆದರು. ಪೆಟ್ಟಾಗಿರೋ ಎಡಗೈಯಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು ಅವ್ರು ಕಟ್ಟಿದ್ದ ಡೈಮಂಡ್ ವಾಚ್. ಗೋಲ್ಡ್ ಹಾಗೂ ಡೈಮಂಡ್ ಮಿಶ್ರಿತ ವಾಚ್​​ನ ಸ್ವತಃ ದರ್ಶನ್ ಅವರೇ ಬಿಚ್ಚಿ, ಪಕ್ಕದಲ್ಲೇ ಕೂತಿದ್ದ ರಾಕ್​ಲೈನ್ ವೆಂಕಟೇಶ್ ಅವರಿಗೆ ಹಾಗೂ ಮಾಸ್ತಿ ಅವ್ರ ಕೈಗಿಟ್ಟರು. ಅಲ್ಲದೇ, ಅದ್ರ ಬಗ್ಗೆ ಒಂದು ಸಣ್ಣ ಮಾಹಿತಿ ಕೂಡ ನೀಡಿದ್ರು.

ಒಂದು ಕೋಟಿಗೂ ಅಧಿಕ ಬೆಲೆ ಬಾಳುವ ಈ ಡೈಮಂಡ್ ವಾಚ್​ನ ಸ್ವತಃ ಮದರ್ ಇಂಡಿಯಾ ಸುಮಲತಾ ಅವರೇ ದರ್ಶನ್​ಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ ಅಂತಾ ಸ್ವತಃ ದರ್ಶನ್ ಬಹಿರಂಗ ಪಡಿಸಿದರು. ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ ಈ ವಾಚ್​​ ರೆಬೆಲ್​ಸ್ಟಾರ್ ಅಂಬರೀಶ್​​ರ ಅಚ್ಚುಮೆಚ್ಚಿನ ವಾಚ್ ಅಂತೆ. ಫಾರಿನ್​​ನಲ್ಲಿ ಖರೀದಿಸಿರೋ ಈ ವಾಚ್, ಇದೀಗ ದರ್ಶನ್ ಕೈಯಲ್ಲಿರೋದು ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ.

ಇದನ್ನೂ ಓದಿ: 'ಆ ನಿರ್ದೇಶಕನಿಗೆ ಮುಸುಕು ಹಾಕಿ ಹೊಡೆದರೆ ₹10 ಸಾವಿರ ಕೊಡುತ್ತೇನೆ': ಅಚ್ಚರಿ ಹುಟ್ಟಿಸಿದ ರಾಜಮೌಳಿ ಆಫರ್ - S S Rajamouli

ETV Bharat Logo

Copyright © 2024 Ushodaya Enterprises Pvt. Ltd., All Rights Reserved.