ETV Bharat / entertainment

24ನೇ ಜನ್ಮದಿನದ ಸಂಭ್ರಮದಲ್ಲಿ ನಟಿ ಸುಹಾನಾ; ಆತ್ಮೀಯ ಸ್ನೇಹಿತರಿಂದ ಶುಭಾಶಯ - Suhana Khan Rings in 24th Birthday - SUHANA KHAN RINGS IN 24TH BIRTHDAY

ಸುಹಾನಾಗೆ ಅಭಿಮಾನಿಗಳು,ಬಾಲಿವುಡ್​ ಸ್ನೇಹಿತರು ಸೇರಿದಂತೆ ಅವರಿಗೆ ಶುಭಕೋರಿದ್ದಾರೆ. ಅದರಲ್ಲೂ ಅವರ ಆತ್ಮೀಯ ಸ್ನೇಹ ವರ್ಗ ವಿಶೇಷವಾಗಿ ಶುಭಹಾರೈಸಿದ್ದಾರೆ.

suhana-khan-rings-in-24th-birthday-with-wishes-from-bffs-ananya-panday-shanaya-kapoor-and-navya-naveli-nanda
suhana-khan-rings-in-24th-birthday-with-wishes-from-bffs-ananya-panday-shanaya-kapoor-and-navya-naveli-nanda (Suhana Khan Rings in 24th Birthday with Wishes from Bffs Ananya, Shanaya (ANI images))
author img

By ETV Bharat Karnataka Team

Published : May 22, 2024, 3:43 PM IST

ಹೈದರಾಬಾದ್​: ಬಾಲಿವುಡ್ ಸೂಪರ್​ ಸ್ಟಾರ್​ ನಟ ಶಾರುಖ್​ ಖಾನ್​ ಅವರ ಮುದ್ದಿನ ಮಗಳು ಸುಹಾನಾಗೆ ಇಂದು ಜನ್ಮ ದಿನದ ಸಂಭ್ರಮ. ಈಗಾಗಲೇ ವೆಬ್​ ಸಿರೀಸ್​ ಮೂಲಕ ಸಿನಿ ಪ್ರಯಾಣ ಆರಂಭಿಸಿರುವ ಸುಹಾನಾ, 24ನೇ ವಸಂತಕ್ಕೆ ಕಾಲಿಟ್ಟಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಭಿಮಾನಿಗಳು, ಬಾಲಿವುಡ್​ ಸ್ನೇಹಿತರು ಸೇರಿದಂತೆ ಅವರಿಗೆ ಶುಭಕೋರಿದ್ದಾರೆ. ಅದರಲ್ಲೂ ಅವರ ಆತ್ಮೀಯ ಸ್ನೇಹ ವರ್ಗವಾಗಿರುವ ಅನನ್ಯಾ ಪಾಂಡೆ, ಶನಯಾ ಕಪೂರ್​ ಮತ್ತು ನವ್ಯ ನವೇಲಿ ನಂದ ಸೇರಿದಂತೆ ಅನೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಜನ್ಮದಿನಕ್ಕೆ ಹಾರೈಸಿದ್ದಾರೆ.

ನವ್ಯ ನವೇಲಿ ಶುಭಾಶಯ
ನವ್ಯ ನವೇಲಿ ಶುಭಾಶಯ (ನವ್ಯ ನವೇಲಿ ಇನ್ಸ್​ಟಾಗ್ರಾಂ)

ಸುಹಾನಾ, ಅನನ್ಯಾ, ಶನಯಾ ಬಾಲ್ಯದ ಸ್ನೇಹಿತರಾಗಿದ್ದು, ಇಂದಿಗೂ ಕೂಡ ಆತ್ಮೀಯ ಸ್ನೇಹಿತರಾಗಿದ್ದಾರೆ. ಅನನ್ಯ ಪಾಂಡೆ, ಇನ್​​ಸ್ಟಾಗ್ರಾಂನಲ್ಲಿ ಸುಹಾನಾ ಕೆಕೆಆರ್​ ಶರ್ಟ್​​ನಲ್ಲಿರುವ ಫೋಟೋ ಹಾಕಿ ಶುಭಾಶಯ ಕೋರಿದ್ದಾರೆ. ಹುಟ್ಟು ಹಬ್ಬದ ಶುಭಾಶಯಗಳು ನನ್ನ ಅತ್ಯುತ್ತಮ ಹುಡುಗಿ, ಈಡೀ ವಿಶ್ವದಲ್ಲೇ ನಿನ್ನಂತೆ ಬೇರೆ ಯಾರೂ ಇಲ್ಲ. ನಾನು ನಿನ್ನನ್ನು ಮೆಚ್ಚುತ್ತೇನೆ. ಈ ಎಂದು ಸುಹಾನಾಗೆ ಶುಭ ಹಾರೈಸಿದ್ದಾರೆ.

ಶನಯಾ ಕಪೂರ್​ ಶುಭಾಶಯ
ಶನಯಾ ಕಪೂರ್​ ಶುಭಾಶಯ (ಶನಯಾ ಕಪೂರ್​ ಇನ್ಸ್​ಟಾಗ್ರಾಂ)

ಸಂಜಯ್​ ಕಪೂರ್​ ಮತ್ತು ಮಹೀಪ್​ ಕಪೂರ್​ ದಂಪತಿ ಮಗಳಾಗಿರುವ ಶನಯ ಕಪೂರ್​ ಕೂಡ ಇದೀಗ ಬಾಲಿವುಡ್​​ನಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ದವಾಗಿದ್ದು, ಆಕೆ ಕೂಡ ಸುಹಾನಾಗೆ ಜನ್ಮದಿನದ ಹಾರೈಕೆ ತಿಳಿಸಿದ್ದಾರೆ. ಕೆಕೆಆರ್​ ಟಿ ಶರ್ಟ್​ನಲ್ಲಿ ವಿಐಪಿ ಸ್ಟಾಂಡ್​ನಲ್ಲಿ ಸುಹಾನ ಜೊತೆಗಿನ ಫೋಟೋ ಹಂಚಿಕೊಂಡಿರುವ ನಟಿ, ಹುಟ್ಟು ಹಬ್ಬದ ಶುಭಾಶಯಗಳು ಸಹೋದರಿ, ಲವ್​ ಯೂ ಎಂದು ಹಾರ್ಟ್​ ಎಮೋಜಿಯೊಂದಿಗೆ ಶುಭ ಕೋರಿದ್ದಾರೆ.

ಅನನ್ಯಾ ಪಾಂಡೆ ಶುಭಾಶಯ
ಅನನ್ಯಾ ಪಾಂಡೆ ಶುಭಾಶಯ (ಅನನ್ಯಾ ಪಾಂಡೆ ಇನ್ಸ್​ಟಾಗ್ರಾಂ)

ಅಮಿತಾಭ್​​ ಬಚ್ಚನ್​ ಮುದ್ದಿನ ಮೊಮ್ಮಗಳಾಗಿರುವ ನವ್ಯ ನವೇಲಿ ಕೂಡ ಸುಹಾನ ಹುಟ್ಟು ಹಬ್ಬಕ್ಕೆ ಇನ್ಸ್ಟಾಗ್ರಾಂನ ಸ್ಟೋರಿಯಲ್ಲಿ ಫೋಟೋ ಶೇರ್​ ಮಾಡಿದ್ದಾರೆ. ಚಿತ್ರದಲ್ಲಿ ಸುಹಾನಾ ಪೋಲ್ಕಾ ಡಾಟ್​ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್​ ನಟ ಶಾರುಖ್​​ ಖಾನ್​ ಮತ್ತು ಡಿಸೈನರ್​ ಗೌರಿ ಖಾನ್​ ಅವರ ಮುದ್ದಿನ ಮಗಳಾಗಿರುವ ಸುಹಾನಾ 2000ರಲ್ಲಿ ಮೇ 22ರಂದು ಜನಿಸಿದ್ದಾರೆ. ನಟನಾ ತರಬೇತಿ ಪಡೆದಿರುವ ನಟಿ ಸುಹಾನ, ಜೋಯಾ ಅಖ್ತರ್​ ಅವರ ದಿ ಆರ್ಚೀಸ್​ ವೆಬ್​ ಸಿರೀಸ್​ನಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಡಿಸೆಂಬರ್​ನಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ಈ ವೆಬ್​ ಸಿರೀಸ್​ನಲ್ಲಿ ವೆರೋನಿಕಾ ಪಾತ್ರದಲ್ಲಿ ಕಾಣಿಸಿದ್ದರು. ಇದಾದ ಬಳಿಕ ತನ್ನ ತಂದೆಯೊಂದಿಗೆ ಸಿನಿಮಾದಲ್ಲಿ ನಟಿಸಲು ಸುಹಾನಾ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಏರ್​ಪೋರ್ಟ್​​​ನಲ್ಲಿ ಕಾಣಿಸಿಕೊಂಡ ಶಾರುಖ್​ ಫ್ಯಾಮಿಲಿ: ಶೀಘ್ರದಲ್ಲೇ ಸೆಟ್ಟೇರಲಿದೆ ತಂದೆ - ಮಗಳ ಚಿತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.