ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್'ಗೆ ಅಭಿನಯ ಚಕ್ರವರ್ತಿ ಸುದೀಪ್ ಅವರು ವಿದಾಯ ಘೋಷಿಸಿದ್ದಾರೆ. ಮುಂದಿನ ಸೀಸನ್ಗಳನ್ನು ನಾನು ನಡೆಸಿಕೊಡುವುದಿಲ್ಲ ಎಂದು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಈ ನಿರ್ಧಾರದ ಹಿಂದಿನ ಕಾರಣ ಏನಿರಬಹುದು ಎಂದು ಅಭಿಮಾನಿಗಳು ಊಹಿಸತೊಡಗಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಂತೆ - ಕಂತೆಗಳು ಹರಿದಾಡಿದ್ದವು. ಎಲ್ಲದಕ್ಕೂ ಕಿಚ್ಚ ಇಂದು ಸೂಕ್ತ ಉತ್ತರ ಕೊಟ್ಟಿದ್ದಾರೆ.
I appreciate all the love and support coming my way regarding my tweet; it truly makes me feel cherished. However, I kindly ask those creating comments and videos to refrain from making assumptions about any conflicts between the channel and myself. We have shared a long and…
— Kichcha Sudeepa (@KicchaSudeep) October 15, 2024
ಸುದೀಪ್ ಎಕ್ಸ್ ಪೋಸ್ಟ್: ಇತ್ತೀಚೆಗೆ ನಾನು ಮಾಡಿದ ಟ್ವೀಟ್ಗೆ ಸಂಬಂಧಿಸಿದಂತೆ ನಿಮ್ಮೆಲ್ಲಾ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಈ ವಾತ್ಸಲ್ಯ ನಿಜವಾಗಿಯೂ ಮನಮುಟ್ಟುವಂತಿದೆ. ಅದಾಗ್ಯೂ, ಚಾನಲ್ ಮತ್ತು ನನ್ನ ನಡುವೆ ಮನಸ್ತಾಪಗಳಿವೆ ಎಂದು ಯಾವುದೇ ತರಹದ ಊಹೆಗಳನ್ನು ಮಾಡದಂತೆ ಕಾಮೆಂಟ್‌ಗಳು ಮತ್ತು ವಿಡಿಯೋಗಳನ್ನು ಮಾಡುವವರಲ್ಲಿ ವಿನಂತಿಸುತ್ತಿದ್ದೇನೆ. ನಾವು ಸುದೀರ್ಘ ಮತ್ತು ಸಕಾರಾತ್ಮಕ ಪ್ರಯಾಣವನ್ನು ನಡೆಸಿದ್ದೇವೆ. "ಅಗೌರವ" ಎಂಬ ಪದವನ್ನು ಅದರೊಂದಿಗೆ ಸೇರಿಸಬೇಡಿ. ಈ ವಿಷಯದ ಸುತ್ತಲಿನ ಊಹಾಪೋಹಗಳು ಆಧಾರರಹಿತವಾಗಿವೆ. ನನ್ನ ಟ್ವೀಟ್ ನೇರ ಮತ್ತು ಪ್ರಾಮಾಣಿಕವಾಗಿದೆ. ಕಲರ್ಸ್ನೊಂದಿಗಿನ ನನ್ನ ಸಂಬಂಧ ಅದ್ಭುತವಾಗಿದೆ. ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ನಿರ್ದೇಶಕ ಪ್ರಕಾಶ್ ಅವರು ಪ್ರತಿಭಾವಂತ ಮತ್ತು ಎನರ್ಜಿಟಿಕ್ ವ್ಯಕ್ತಿತ್ವ. ನಾನು ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸುವ ವ್ಯಕ್ತಿ ನಾನಲ್ಲ ಎಂದು ತಿಳಿಸಿದ್ದಾರೆ.
Thank you all for the great response shown towards #BBK11.
— Kichcha Sudeepa (@KicchaSudeep) October 13, 2024
The TVR (number) speaks in volumes about the love you all have shown towards the show and me.
It's been a great 10+1 years of travel together, and it's time for me to move on with what I need to do. This will be my last… pic.twitter.com/uCV6qch6eS
ಇದನ್ನೂ ಓದಿ: 'ನಾನು ಅನ್ಫಿಟ್ ಅನಿಸ್ತಿದೆ': ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಕಣ್ಣೀರು; ಬ್ಯಾಗ್ ಪ್ಯಾಕ್ ಮಾಡಲು ಸಲಹೆ
ಭಾನುವಾರ ರಾತ್ರಿ 9:22ಕ್ಕೆ ಟ್ವೀಟ್ ಮಾಡಿದ್ದ ಕಿಚ್ಚ ಸುದೀಪ್, ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ನೀವು ತೋರಿರುವ ಅದ್ಭುತ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಟಿವಿಆರ್ (ಸಂಖ್ಯೆ) ಬಿಗ್ ಬಾಸ್ ಶೋ ಹಾಗೂ ನನ್ನ ಬಗ್ಗೆ ನೀವೆಲ್ಲರೂ ತೋರಿದ ಪ್ರೀತಿಯ ಬಗ್ಗೆ ಸದ್ದು ಮಾಡುತ್ತಿದೆ. ಇದು ನಾವೆಲ್ಲರೂ ಜೊತೆಯಾಗಿ 10+1 ವರ್ಷಗಳ ಪ್ರಯಾಣ. ನಾನು ಮಾಡಬೇಕಿರುವ ಕೆಲಸಗಳನ್ನು ಮುಂದುವರಿಸಲು ಇದು ಸೂಕ್ತ ಸಮಯ. ಇದು ಬಿಗ್ ಬಾಸ್ ಕನ್ನಡಕ್ಕೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಮತ್ತು ಇಷ್ಟು ವರ್ಷಗಳಿಂದ ಬಿಗ್ ಬಾಸ್ ಅನ್ನು ಫಾಲೋ ಮಾಡಿದ ಎಲ್ಲರೂ ಗೌರವಿಸುತ್ತಾರೆಂದು ನಾನು ನಿಜವಾಗಿಯೂ ನಂಬಿದ್ದೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ. ನಾನು ಕೂಡಾ ನಿಮ್ಮೆಲ್ಲರನ್ನು ರಂಜಿಸುತ್ತೇನೆ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಸುದೀಪ್ ಗುಡ್ ಬೈ ಬೆನ್ನಲ್ಲೇ ಮನೆಯಿಂದ ಹೊರನಡೆದ ಬಿಗ್ ಬಾಸ್! ಸ್ಪರ್ಧಿಗಳ ಉಡಾಫೆತನದ ವಿರುದ್ಧ ರೊಚ್ಚಿಗೆದ್ದ Bigg Boss
ಇದು ಅಪಾರ ಸಂಖ್ಯೆಯ ಅಭಿಮಾನಿಗಳು, ಪ್ರೇಕ್ಷಕರಿಗೆ ಕಹಿಸತ್ಯ. ಬಿಗ್ ಬಾಸ್ ಜನಪ್ರಿಯತೆಯಲ್ಲಿ ಸುದೀಪ್ ಪಾತ್ರ ಬಹಳ ದೊಡ್ಡದಿದೆ. ವೀಕೆಂಡ್ ಶೋಗಳಿಗಾಗಿಯೇ ಕಾದು ಕೂರುವ ಪ್ರೇಕ್ಷಕರ ಸಂಖ್ಯೆಯೂ ದೊಡ್ಡದಿದೆ. ಇದೀಗ ಈ ಕಾರ್ಯಕ್ರಮವನ್ನು ಸುದೀಪ್ ನಿರೂಪಿಸುತ್ತಿಲ್ಲ ಅನ್ನೋ ವಿಚಾರವನ್ನು ನಂಬಲಾಗದ ಸ್ಥಿತಿಯಲ್ಲಿ ಹಲವರಿದ್ದಾರೆ.