ಹೈದರಾಬಾದ್: ಸೆಪ್ಟೆಂಬರ್ 14 ಮತ್ತು 15 ರಂದು ದುಬೈನಲ್ಲಿ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) 2024 ಬಹಳ ಅದ್ಧೂರಿಯಾಗಿ ಜರುಗಿತು. ಶನಿವಾರದಂದು ಕನ್ನಡ ಮತ್ತು ತೆಲುಗು ಚಿತ್ರರಂಗದವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ರೆ, ಭಾನುವಾರ ಸಂಜೆ ತಮಿಳು ಮತ್ತು ಮಲಯಾಳಂ ಚಿತ್ರರಂಗದ ಸಂಭ್ರಮ ಜರುಗಿತು. ಈವೆಂಟ್ ದಕ್ಷಿಣ ಭಾರತದ ಚಲನಚಿತ್ರೋದ್ಯಮ ಪ್ರತಿಭೆ ಅನಾವರಣ ಎಂದೇ ಹೇಳಬಹುದು.
ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಹಲವು ಅಸಾಧಾರಣ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
Heartfelt congratulations to ಕರುನಾಡ ಚಕ್ರವರ್ತಿ @NimmaShivanna on receiving the Excellence in Cinema Award at @siima
— Dr. ShivaRajkumar Trends (@ShivannaTrends1) September 15, 2024
ಕನ್ನಡ ಚಿತ್ರರಂಗದಲ್ಲಿ ನಿಮ್ಮ 50 ವರ್ಷಗಳ ಗಮನಾರ್ಹ ಪಯಣ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇದೆ 💥
VC - @siima #DrShivaRajkumar #DrShivaRajkumarTrends pic.twitter.com/kIPp6i3pib
ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಗೆ 'ಎಕ್ಸಲೆನ್ಸ್ ಇನ್ ಸಿನಿಮಾ ಅವಾರ್ಡ್' ಲಭಿಸಿದೆ. ಪ್ರಶಸ್ತಿ ಸ್ವೀಕರಿಸಿಲು ಸೆಂಚುರಿ ಸ್ಟಾರ್ ವೇದಿಕೆಗೆ ಹೋದಾಗ ಕಾರ್ಯಕ್ರಮದಲ್ಲಿದ್ದವರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಇದು ಕನ್ನಡದ ಕೀರ್ತಿಗೆ ಸಂದ ಗೌರವ ಅಂತಲೇ ಹೇಳಬಹುದು.
Never fail to entertain us ❤️✨
— Dr Shivarajkumar updates ™ (@shivannaupdates) September 15, 2024
King @NimmaShivanna 👑 @siima#Shivanna #Shivarajkumar #SIIMA2024 #SIIMA #KingShivanna #DrShivarajkumar #DrShivarajkumarUpdates pic.twitter.com/Qf29uxy0eK
ಸೈಮಾ ಪ್ರಶಸ್ತಿ ವಿಜೇತರ ಪಟ್ಟಿ 9ಕನ್ನಡ ಚಿತ್ರರಂಗ):
- ಎಕ್ಸಲೆನ್ಸ್ ಇನ್ ಸಿನಿಮಾ ಅವಾರ್ಡ್: ಶಿವರಾಜ್ಕುಮಾರ್
- ಅತ್ಯುತ್ತಮ ಸಿನಿಮಾ: ಕಾಟೇರ
- ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ
- ಅತ್ಯುತ್ತಮ ನಟಿ: ಚೈತ್ರಾ ಜೆ ಆಚಾರ್ (ಟೋಬಿ)
- ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ)
- ಚೊಚ್ಚಲ ಪ್ರಯತ್ನದಲ್ಲೇ ಅತ್ಯುತ್ತಮ ನಿರ್ದೇಶಕ: ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ)
- ಅತ್ಯುತ್ತಮ ನಟ (ಕ್ರಿಟಿಕ್ಸ್): ಡಾಲಿ ಧನಂಜಯ್ (ಗುರುದೇವ್ ಹೊಯ್ಸಳ)
- ಅತ್ಯುತ್ತಮ ನಟಿ (ಕ್ರಿಟಿಕ್ಸ್): ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ)
- ಚೊಚ್ಚಲ ಪ್ರಯತ್ನದಲ್ಲೇ ಅತ್ಯುತ್ತಮ ನಟಿ: ಆರಾಧನಾ (ಕಾಟೇರ)
- ಅತ್ಯುತ್ತಮ ಖಳನಾಯಕ: ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ)
- ಅತ್ಯುತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ (ಕಾಟೇರ)
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಮಣಗ್ಲಿ (ಕಾಟೇರ)
- ಅತ್ಯುತ್ತಮ ಹಿನ್ನೆಲೆ ಗಾಯಕ: ಕಪಿಲ್ ಕಪಿಲನ್ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ).
Suit up, because the Men in Black always know how to save the day 🕶️ @NimmaShivanna at #SIIMA2024 @siima#BhairathiRanagalNovember15 ⚔️#Shivanna #Shivarajkumar #KingShivanna #DrShivarajkumar #DrShivarajkumarUpdates pic.twitter.com/mt4w6UWLbq
— Dr Shivarajkumar updates ™ (@shivannaupdates) September 15, 2024
ಇನ್ನೂ ಸಿನಿಮಾ ವಿಚಾರ ಗಮನಿಸುವುದಾದರೆ ಶಿವರಾಜ್ಕುಮಾರ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಭೈರತಿ ರಣಗಲ್'. ನರ್ತನ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ನವೆಂಬರ್ 15ಕ್ಕೆ ಬಿಡುಗಡೆ ಆಗಲಿದೆ. 2017ರ ಡಿಸೆಂಬರ್ 1ರಂದು ತೆರೆಕಂಡು ಸೂಪರ್ ಹಿಟ್ ಆಗಿದ್ದ ಮಫ್ತಿ ಚಿತ್ರದ ಸೀಕ್ವೆಲ್ ಆಗಿರುವ ಹಿನ್ನೆಲೆ ಈ 'ಭೈರತಿ ರಣಗಲ್' ಬಗ್ಗೆ ಅಭಿಮಾನಿಗಳು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಸೈಮಾ ಅವಾರ್ಡ್ 2024: ಸ್ಯಾಂಡಲ್ವುಡ್ಗೆ ಸಾಲು ಸಾಲು ಪ್ರಶಸ್ತಿ - SIIMA 2024