ಭಾರತೀಯ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಎಸ್.ಎಸ್ ರಾಜಮೌಳಿ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಶನ್ನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಎಸ್‌ಎಸ್‌ಎಂಬಿ 29'. ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾ ಬಗ್ಗೆ ಹೆಚ್ಚೇನೂ ಮಾಹಿತಿ ಬಿಟ್ಟುಕೊಡದಿದ್ದರೂ ಸಿನಿಮಾ ಸುತ್ತಲಿನ ಕ್ರೇಜ್ ಜೋರಾಗೇ ಇದೆ. ಬಾಹುಬಲಿ ಸರಣಿ ಮತ್ತು ಆರ್ಆರ್ಆರ್ ಸೇರಿದಂತೆ ಬ್ಲಾಕ್‌ಬಸ್ಟರ್ ಸಿನಿಮಾಗಳ ಯಶಸ್ಸಿನ ನಂತರ ರಾಜಮೌಳಿ ಈ ಬಹು ನಿರೀಕ್ಷಿತ ಪ್ರಾಜೆಕ್ಟ್ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಎಸ್‌ಎಸ್‌ಎಂಬಿ 29ರ ಶೂಟಿಂಗ್ ಶೆಡ್ಯೂಲ್ ಕೆಲಸ ಸಾಗುತ್ತಿದೆ. ಯಾವುದೇ ಕೆಲಸಗಳನ್ನು ವಿಳಂಬವಾಗದಂತೆ ನೋಡಿಕೊಳ್ಳಲಾಗುತ್ತಿದೆ. 2027ರ ಮೊದಲಾರ್ಧದಲ್ಲಿ ಸಿನಿಮಾವನ್ನು ಬಿಡುಗಡೆಗೊಳಿಸುವ ಯೋಜನೆ ಚಿತ್ರ ತಂಡದ್ದು, ಈ ನಿಟ್ಟಿನಲ್ಲಿ ಚಿತ್ರತಂಡ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ರಾಜಮೌಳಿ ತಮ್ಮ ವಿಭಿನ್ನ ನಿರ್ದೇಶನಾ ಶೈಲಿ, ಸೂಕ್ಷ್ಮ ವಿಧಾನಗಳಿಗೆ ಹೆಸರು ವಾಸಿಯಾಗಿದ್ದು, ಪ್ರಸ್ತುತ ಪ್ರೀ ಪ್ರೊಡಕ್ಷನ್ ಹಂತದಲ್ಲಿ ಮುಳುಗಿದ್ದಾರೆ. ಎಲ್ಲವೂ ಸರಿಯಾಗಿ ಸಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ.
ಇನ್ನೂ ನಾಯಕ ನಟ ಮಹೇಶ್ ಬಾಬು ಭಗವಾನ್ ಹನುಮಾನ್‌ನಿಂದ ಪ್ರೇರಿತವಾದ ಪಾತ್ರಕ್ಕಾಗಿ ದೈಹಿಕ ರೂಪಾಂತರಕ್ಕೆ ಒಳಗಾಗುತ್ತಿದ್ದಾರೆ. 'ಎಸ್‌ಎಸ್‌ಎಂಬಿ 29' ಜಂಗಲ್ ಡ್ರಾಮಾ ಥ್ರಿಲ್ಲರ್ ಎಂದು ನಂಬಲಾಗಿದೆ. ಪೌರಾಣಿಕ ಮತ್ತು ಸಾಹಸದಂತಹ ಅಂಶಗಳ ಮಿಶ್ರಣ ಎಂದು ಭರವಸೆ ನೀಡಿದೆ. ಇದು ಅದ್ಭುತ ಸಿನಿಮೀಯ ಅನುಭವ ನೀಡಲಿದೆ ಅನ್ನೋದು ಈವರೆಗೆ ಸಿಕ್ಕ ಮಾಹಿತಿಗಳು ಸೂಚಿಸಿವೆ. ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ಮಹೇಶ್ ಬಾಬು ಜರ್ಮನ್ಗೂ ತೆರಳಿದ್ದರು.
ಸರಿ ಸುಮಾರು 1,000 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಚಿತ್ರ ನಿರ್ಮಾಣಗೊಳ್ಳಲಿದೆ ಎಂದು ವರದಿಯಾಗಿದೆ. ಈ ವರ್ಷಾರಂಭ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ಈ ಸಿನಿಮಾದ ಸ್ಕ್ರಿಪ್ಟ್ ಪೂರ್ಣಗೊಂಡಿದೆ ಎಂದು ದೃಢಪಡಿಸಿದರು. ಇದು ಜನಪ್ರಿಯ ಹಾಲಿವುಡ್ ಸಾಹಸ ಸರಣಿ ಇಂಡಿಯಾನಾ ಜೋನ್ಸ್‌ನಿಂದ ಸ್ಫೂರ್ತಿ ಪಡೆಯಬಹುದು ಎಂದು ವದಂತಿಗಳಿವೆ.
ಇದನ್ನೂ ಓದಿ: ಗೋಕರ್ಣದಲ್ಲಿ ಪೂಜೆ ಸಲ್ಲಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ - Rishab Shetty Visits Gokarna
ಆಸ್ಕರ್ ವಿಜೇತ ಸಂಗೀತ ಸಂಯೋಜಕ ಎಂ.ಎಂ ಕೀರವಾಣಿ ಚಿತ್ರತಂಡದ ಭಾಗವಾಗಿದ್ದು, ಸಿನಿಪ್ರಿಯರ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿದೆ. ಇತರೆ ನಟ ನಟಿಯರ ಬಗ್ಗೆ ವದಂತಿಗಳಿದ್ದರೂ, ಚಿತ್ರ ತಯಾರಕರು ಮಹೇಶ್ ಬಾಬು ಅವರನ್ನು ಭಾಗವಹಿಸುವಿಕೆನ್ನು ಮಾತ್ರ ಅಧಿಕೃತವಾಗಿ ಘೋಷಿಸಿದ್ದಾರೆ. ಅಭಿಮಾನಿಗಳು ಹೆಚ್ಚಿನ ಅಪ್ಡೇಟ್ಸ್ ನಿರೀಕ್ಷಿಸಿದ್ದಾರೆ.