ETV Bharat / entertainment

ಮಂಜುಮ್ಮೆಲ್ ಬಾಯ್ಸ್ ನಟನಿಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಸ್ಯಾಂಡಲ್​ವುಡ್​ ಡೈರೆಕ್ಟರ್ - Shashidhar Sreenath Bhasi movie - SHASHIDHAR SREENATH BHASI MOVIE

ಸ್ಯಾಂಡಲ್​ವುಡ್​ ಡೈರೆಕ್ಟರ್ ಶಶಿಧರ್ ಕೆ.ಎಮ್ ನಿರ್ದೇಶನದ ಮಲಯಾಳಂ ಚಿತ್ರ 'ಸಿಬಿಲ್ ಸ್ಕೋರ್'ನಲ್ಲಿ ಶ್ರೀನಾಥ್ ಭಾಸಿ ಮುಖ್ಯ ಪಾತ್ರ ವಹಿಸಲಿದ್ದಾರೆ.

Sreenath Bhasi in 'Cybil Score'
'ಸಿಬಿಲ್ ಸ್ಕೋರ್'ನಲ್ಲಿ ಶ್ರೀನಾಥ್ ಭಾಸಿ, ಶಶೀಧರ್ ಡೈರೆಕ್ಷನ್​ (ETV Bharat)
author img

By ETV Bharat Karnataka Team

Published : May 25, 2024, 8:59 AM IST

'ಮಂಜುಮ್ಮೆಲ್ ಬಾಯ್ಸ್' ಮಾಲಿವುಡ್ ಇಂಡಸ್ಟ್ರಿಯ 2024ರ ಸೂಪರ್ ಡೂಪರ್ ಹಿಟ್ ಸಿನಿಮಾ. ಭಾಷೆ ಗಡಿ ಮೀರಿ ವಿಶ್ವದಾದ್ಯಂತದ ಪ್ರೇಕ್ಷಕರನ್ನು ಆಕರ್ಷಿಸಿದೆ. ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು 'ಮಂಜುಮ್ಮೆಲ್ ಬಾಯ್ಸ್' ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾತ್ರಧಾರಿಗಳು, ಕಥಾಹಂದರ, ನಿರ್ದೇಶನ ಶೈಲಿ ಸೇರಿದಂತೆ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಇಂಚಿಂಚೂ ಮಾತನಾಡುತ್ತಿದ್ದಾರೆ. ಒಂದಿಲ್ಲೊಂದು ವಿಚಾರವಾಗಿ 'ಮಂಜುಮ್ಮೆಲ್ ಬಾಯ್ಸ್' ಸಖತ್​ ಸದ್ದು ಮಾಡುತ್ತಿದೆ.

ಇದೇ ವೇಳೆ ಡಾಟರ್ ಆಫ್ ಪಾರ್ವತಮ್ಮ, ವೀರಂ, ಶುಗರ್ ಲೆಸ್ ಚಿತ್ರಗಳನ್ನು ನಿರ್ಮಾಣ ಮಾಡಿ, ಶುಗರ್ ಲೆಸ್​ಗೆ ಆ್ಯಕ್ಷನ್​ ಕಟ್​ ಹೇಳಿದ್ದ ಸ್ಯಾಂಡಲ್​ವುಡ್​ನ ಶಶಿಧರ್ ಅವರು ಮಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಮಲಯಾಳಂನಲ್ಲಿ ತಮ್ಮ ಚೊಚ್ಚಲ ಚಿತ್ರ ನಿರ್ದೇಶಿಸಲು ಹೊರಟಿದ್ದಾರೆ. ಮಲಯಾಳಂ ಚಿತ್ರದ ಮೂಲಕ ಶಶಿಧರ್ ತಮ್ಮ ಸಿನಿಜರ್ನಿಯ ಎರಡನೇ ಡೈರೆಕ್ಷನ್​​​ಗೆ ಅಣಿಯಾಗಿದ್ದಾರೆ.

'Cybil Score'
'ಸಿಬಿಲ್ ಸ್ಕೋರ್' ತಂಡ (ETV Bharat)

'ಸಿಬಿಲ್ ಸ್ಕೋರ್'ನಲ್ಲಿ ಶ್ರೀನಾಥ್ ಭಾಸಿ: ಹೌದು, ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಪಾತ್ರಧಾರಿ ಶ್ರೀನಾಥ್ ಭಾಸಿ ಅವರು ವೈರಸ್, ಹೋಮ್, ಕುಂಬಳಂಗಿ ನೈಟ್ಸ್ ಅಂತಹ ಅದ್ಭುತ ಸಿನಿಮಾಗಳಲ್ಲಿ‌ ನಟಿಸಿ ಸೈ ಎನಿಸಿಕೊಂಡಿರುವ ಮಾಲಿವುಡ್ ಸ್ಟಾರ್ ನಟ. ನಮ್ಮ ಕನ್ನಡದ ನಿರ್ಮಾಪಕ-ನಿರ್ದೇಶಕ ಶಶಿಧರ್ ಕೆ.ಎಮ್ ನಿರ್ದೇಶನ ಮಾಡ್ತಿರೋ ಚೊಚ್ಚಲ ಮಲಯಾಳಂ ಸಿನಿಮಾ 'ಸಿಬಿಲ್ ಸ್ಕೋರ್'ನಲ್ಲಿ ಶ್ರೀನಾಥ್ ಭಾಸಿ ನಾಯಕ ನಟನಾಗಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಹಿನ್ನೆಲೆ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಚಿತ್ರತಂಡ ಕುರಿತು; 'ಸಿಬಿಲ್ ಸ್ಕೋರ್' ಸಿನಿಮಾವನ್ನು ಕನ್ನಡದ ನಿರ್ದೇಶಕ ಡೈರೆಕ್ಟ್ ಮಾಡುತ್ತಿರುವ ಕಾರಣ, ಮಲಯಾಳಂ ಸಿನಿಮಾ ಆಗಿರೋ ಹಿನ್ನೆಲೆ ಟೆಕ್ನಿಶಿಯನ್ಸ್, ಆರ್ಟಿಸ್ಟ್ ಕನ್ನಡ ಹಾಗೂ ಮಲಯಾಳಂನವರಾಗಿರುತ್ತಾರೆ. ಸೋಹನ್ ಸೀನುಲಾಲ್, ದೀಪಕ್ ಪ್ರಿನ್ಸ್ ಈ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ.

'Cybil Score'
'ಸಿಬಿಲ್ ಸ್ಕೋರ್' ತಂಡ (ETV Bharat)

ಇದನ್ನೂ ಓದಿ: 'ಉತ್ತರಕಾಂಡ' ಸಿನಿಮಾ ಸೆಟ್​ನಲ್ಲಿ ಶಿವರಾಜ್​ಕುಮಾರ್​ಗೆ ಅದ್ದೂರಿ ಸ್ವಾಗತ - shivarajkumar

ದಿ ಎಮೋಷನ್ಸ್ ಫ್ಯಾಕ್ಟರಿ ಗ್ರೂಪ್(EFG) ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ವಿವೇಕ್ ಶ್ರೀಕಂಠಯ್ಯ ಬಂಡವಾಳ ಹೂಡುತ್ತಿದ್ದಾರೆ. ಕೋ ಪ್ರೊಡ್ಯೂಸರ್ ಆಗಿ ವಿಕ್ರಮ್, ಲೈನ್ ಪ್ರೊಡ್ಯೂಸರ್ ಆಗಿ ದೀಪು ಕರುಣಾಕರನ್​, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಶಾಜಿ ಫ್ರಾನ್ಸಿಸ್ ಕೈ ಜೋಡಿಸಿದ್ದಾರೆ. ಸಿನಿಮಾದ ಡಿಓಪಿ ಪ್ರದೀಪ್ ನಾಯರ್. ಡೈಲಾಗ್ಸ್ ಜವಾಬ್ದಾರಿ ಅರ್ಜುನ್ ಟಿ ಸತ್ಯನ್ ಅವರದ್ದು. ಎಡಿಟರ್ ಸೋಬಿನ್ ಕೆ ಸೋಮನ್. ಇನ್ನು ಕ್ರಿಯೇಟಿವ್ ಹೆಡ್ ಆಗಿ ಶರತ್ ವಿನಾಯಕ್ ಚಿತ್ರತಂಡದ ಭಾಗವಾಗಿದ್ದಾರೆ. ಉಳಿದಂತೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಒದಗಿಸಲಿದ್ದು, ಸಿನಿಪ್ರಿಯರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: 'ಮಂಜುಮ್ಮೆಲ್ ಬಾಯ್ಸ್'ಗೆ ಇಳಯರಾಜ ಕಾಪಿರೈಟ್​​ ನೋಟಿಸ್​: ಕಾರಣ? - Manjummel Boys

ETV Bharat Logo

Copyright © 2025 Ushodaya Enterprises Pvt. Ltd., All Rights Reserved.