ETV Bharat / entertainment

ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಟ ವಿಜಯ್​: ಶೂಟಿಂಗ್​ ಲೊಕೇಶನ್​ನಿಂದ ವಿಡಿಯೋ ಶೇರ್ - Thalapathy Vijay - THALAPATHY VIJAY

ಅಪಾರ ಸಂಖ್ಯೆಯ ಅಭಿಮಾನಿಗಳ ವಿಡಿಯೋ ಹಂಚಿಕೊಂಡ ವಿಜಯ್​​​​, ಸರ್ವರಿಗೂ ಕೃತಜ್ಞತೆ ಅರ್ಪಿಸಿದ್ದಾರೆ.

south superstar Vijay Expresses Gratitude to fans
ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಟ ವಿಜಯ್
author img

By ETV Bharat Karnataka Team

Published : Mar 23, 2024, 12:52 PM IST

ದಕ್ಷಿಣ ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರು ಇತ್ತೀಚೆಗೆ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣಕ್ಕಾಗಿ ಕೇರಳದ ತಿರುವನಂತಪುರಕ್ಕೆ ತೆರಳಿದ್ದರು. ಶೂಟಿಂಗ್ ಸ್ಥಳದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ಸೇರಿದ್ದರು. ದಳಪತಿ ವಿಜಯ್ ಎಂಬ ಹರ್ಷೋದ್ಘಾರ ಮೊಳಗುತ್ತಿತ್ತು. ಅಭಿಮಾನಿಗಳನ್ನು ನಿಯಂತ್ರಿಸುವುದು ದೊಡ್ಡ ಸವಾಲೇ ಆಗಿತ್ತು.

ತಮ್ಮನ್ನು ನೋಡಲು ಬಂದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳ ವಿಡಿಯೋ ಹಂಚಿಕೊಂಡ ವಿಜಯ್​​​​, ಸರ್ವರಿಗೂ ಕೃತಜ್ಞತೆ ಅರ್ಪಿಸಿದ್ದಾರೆ. ಜೊತೆಗೆ ಮಲೆಯಾಳಂನಲ್ಲಿ, "ನನ್ನ ಸಹೋದರಿಯರೇ, ಸಹೋದರರೇ ಮತ್ತು ತಾಯಂದಿರೇ" ಎಲ್ಲಾ ಮಲಯಾಳಿಗರಿಗೂ ಧನ್ಯವಾದಗಳು ಎಂದು ಕ್ಯಾಪ್ಷನ್​​ ಕೊಟ್ಟಿದ್ದಾರೆ. ತಿರುವನಂತಪುರಂನ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಟ ವಿಜಯ್ ಅವರೇ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಇತ್ತೀಚೆಗಷ್ಟೇ ನಟ ವಿಜಯ್​ ಶೂಟಿಂಗ್​ ಸಲುವಾಗಿ ಕೇರಳಕ್ಕೆ ಭೇಟಿ ಕೊಟ್ಟಿದ್ದಾರೆ. 14 ವರ್ಷಗಳ ನಂತರ ಸೋಮವಾರದಂದು ವಿಜಯ್ ಕೇರಳಕ್ಕೆ ಮರಳಿದ ಹಿನ್ನೆಲೆ ಅಭಿಮಾನಿಗಳು ನಟನನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಲೆಕ್ಕಕ್ಕೆ ಸಿಗದಷ್ಟು ಮಂದಿ ನಟನನ್ನು ಸುತ್ತುವರಿದಿದ್ದ ವಿಡಿಯೋ ಇತ್ತೀಚೆಗಷ್ಟೇ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿತ್ತು. ದೊಡ್ಡ ಮಟ್ಟದ ಜನಸಂದಣಿಯನ್ನು ನಿರ್ವಹಿಸುವುದು ತಂಡಕ್ಕೆ ಸವಾಲಾಗಿತ್ತು. ಅದಾಗ್ಯೂ, ವಿಜಯ್ ಕೂಲ್​ ಆಗಿ ಪರಿಸ್ಥಿತಿ ನಿಭಾಯಿಸಿದರು. ನಟ ಶೇರ್ ಮಾಡಿರೋ ವಿಡಿಯೋದಲ್ಲಿ, ಬೂದು ಬಣ್ಣದ ಟೀ ಶರ್ಟ್ ಮತ್ತು ಅದರ ಮೇಲೆ ವೈಟ್​ ಶರ್ಟ್ ಧರಿಸಿದ್ದರು. ಕ್ಲೀನ್​ ಶೇವ್​​ ಲುಕ್​ ಚಿತ್ರದ ಭಾಗ ಎಂದು ನಂಬಲಾಗಿದೆ. ಯುವಕನಂತೆ ಕಾಣಿಸಿಕೊಂಡಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ.

ಇದನ್ನೂ ಓದಿ: 2025ರಲ್ಲಿ ಸೆಟ್ಟೇರಲಿದೆ ರಣ್​ವೀರ್​, ಕಿಯಾರಾ ನಟನೆಯ 'ಡಾನ್​​ 3'? - Don 3

'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‌' (The Greatest of All Time) ಅಥವಾ 'GOAT' ಎಂದೂ ಕರೆಯಲ್ಪಡುವ ಈ ಚಿತ್ರದಲ್ಲಿ, ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ತಿರುವನಂತಪುರದ ಚಿತ್ರೀಕರಣದ ಸಮಯದಲ್ಲಿ ವಿವಿಧ ಹೇರ್ ಸ್ಟೈಲ್‌ಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಸುತ್ತಲಿನ ಉತ್ಸಾಹವನ್ನು ಹೆಚ್ಚಿಸಿದೆ. ವಿಜಯ್ ಅವರಲ್ಲದೇ, ಚಿತ್ರದಲ್ಲಿ ಪ್ರಭುದೇವ, ಪ್ರಶಾಂತ್, ಸ್ನೇಹಾ ಮತ್ತು ಲೈಲಾ ಸೇರಿದಂತೆ ಮೊದಲಾದವರು ನಟಿಸುತ್ತಿದ್ದಾರೆ. ವೆಂಕಟ್​ ಪ್ರಭು ನಿರ್ದೇಶನದ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ: ಲೋಕಸಮರದಲ್ಲಿ ಕಣಕ್ಕಿಳಿಯಲಿದ್ದಾರಾ ಬಾಲಿವುಡ್​ ನಟ ಗೋವಿಂದ? - Bollywood Actor Govinda

ವಿಜಯ್ ನಟನಾಗಿ ಕೊನೆಯ ಚಿತ್ರ ಕೂಡಾ ಆಗಿರಬಹುದು. ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಹಿನ್ನೆಲೆ ಸಿನಿಮಾಗಳಿಂದ ಅವರು ದೂರ ಉಳಿಯುವ ಸಾಧ್ಯತೆ ಇದೆ. ಹಾಗಾಗಿ ಈ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‌' ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.