ETV Bharat / entertainment

ಮಗು ಯಾರನ್ನು ಹೋಲುತ್ತದೆ? ದೀಪಿಕಾ ರಣ್​​​ವೀರ್​​ ಬಾಲ್ಯದ ಫೋಟೋಗಳು ವೈರಲ್​​​ - Deepika Ranveer - DEEPIKA RANVEER

ಬಾಲಿವುಡ್​ನ ಪವರ್​​ ಕಪಲ್​ ರಣ್​​​ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಹೆಣ್ಣು ಮಗುವಿನ ಫೋಟೋ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಜೊತೆಗೆ, ಸೋಷಿಯಲ್​ ಮೀಡಿಯಾದಲ್ಲಿ ಕಂದಮ್ಮ ತಾಯಿ ದೀಪಿಕಾರನ್ನು ಹೋಲುತ್ತದೆಯೋ ಅಥವಾ ತಂದೆ ರಣ್​​​ವೀರ್ ಅವರನ್ನು ಹೋಲುತ್ತದೆಯೋ? ಎಂಬ ಚರ್ಚೆ ನಡೆಯುತ್ತಿದೆ.

Deepika and Ranveer
ರಣ್​​ವೀರ್​​ ಸಿಂಗ್​ - ದೀಪಿಕಾ ಪಡುಕೋಣೆ (Photo: ANI/ ETV Bharat)
author img

By ETV Bharat Entertainment Team

Published : Sep 20, 2024, 5:20 PM IST

ಹೈದರಾಬಾದ್: ಜನಪ್ರಿಯ ತಾರಾ ದಂಪತಿ ರಣ್​​​ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರ ಪ್ರೇಮ್​ಕಹಾನಿ ಯಾವುದೇ ಫೇರಿ ಟೇಲ್​ಗಿಂತ ಕಡಿಮೆಯಿಲ್ಲ. 2018ರ ನವೆಂಬರ್​​​​ನಲ್ಲಿ ದಾಂಪತ್ಯ ಜೀವನ ಆರಂಭಿಸಿದ ದೀಪ್​ವೀರ್​​​ 2024ರ ಸೆಪ್ಟೆಂಬರ್​​ನಲ್ಲಿ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ದೊಡ್ಡ ಪಯಣ ಹೊಂದಿರುವ ತಾರಾದಂಪತಿಯ ಪ್ರೇಮಕಥೆ 2013ರ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ಸಿನಿಮಾ ಸೆಟ್‌ನಲ್ಲಿ ಶುರುವಾಯಿತು. ಜೋಡಿಯ ಆನ್-ಸ್ಕ್ರೀನ್ ಕೆಮಿಸ್ಟ್ರಿ ಪರದೆ ಮೇಲೆ ಸಖತ್​ ಸದ್ದು ಮಾಡಿತ್ತು. ಇಬ್ಬರ ಸಂಬಂಧ ಗಟ್ಟಿಯಾಗಿ ಪ್ರಸ್ತುತ ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾಗಿದ್ದಾರೆ.

2018ರ ನವೆಂಬರ್​​​​ನಲ್ಲಿ ಇಟಲಿಯ ಲೇಕ್ ಕೋಮೊದಲ್ಲಿ ಕೊಂಕಣಿ ಮತ್ತು ಸಿಂಧಿ ಪದ್ಧತಿಗಳ ಪ್ರಕಾರ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದೊಂದು ಖಾಸಗಿ ಸಮಾರಂಭವಾಗಿತ್ತು. ನಂತರ ಭಾರತದಲ್ಲೂ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದರು. ಪ್ರೇಮಪಕ್ಷಿಗಳ ವಿವಾಹ ಸಮಾರಂಭ ಪ್ರೀತಿ, ನಗು ಮತ್ತು ಮರೆಯಲಾಗದ ನೆನಪುಗಳನ್ನು ಸೃಷ್ಟಿಸಿದೆ. ಸೋಷಿಯಲ್​ ಮೀಡಿಯಾದಲ್ಲಿ ಅದ್ಭುತ ಫೋಟೋಗಳೊಂದಿಗೆ ಅಭಿಮಾನಿಗಳನ್ನು ರಂಜಿಸಿದ್ದರು.

ಈ ಜೋಡಿಗೆ 2024ರ ವಿಶೇಷ: 2024 ಈ ಜೋಡಿಗೆ ಬಹಳ ವಿಶೇಷ ಎಂದೇ ಹೇಳಬಹುದು. ಹೌದು, ಗೌರಿ ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ತಮ್ಮ ಮೊದಲ ಮಗುವನ್ನು ಈ ಜಗತ್ತಿಗೆ ಸ್ವಾಗತಿಸಿದ್ದಾರೆ. ದೀಪ್​ವೀರ್​ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಹೊಸ ಅಧ್ಯಾಯ ಆರಂಭಿಸಿದ್ದಾರೆ. ಮಗಳ ಜನನದ ಘೋಷಣೆಯು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳ ಸಂತಸಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ತಿಳಿಸಿದ್ದರು. ಇದೀಗ ಸ್ಟಾರ್ ಕಪಲ್​ನ ಅಪಾರ ಸಂಖ್ಯೆಯ ಅಭಿಮಾನಿಗಳು ಮಗುವಿನ ಮೊದಲ ನೋಟಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೇ ಮಗು ತಾಯಿಯನ್ನು ಹೆಚ್ಚು ಹೋಲುತ್ತಾಳೋ ಅಥವಾ ತಂದೆಯನ್ನು ಹೆಚ್ಚು ಹೋಲುತ್ತಾಳೋ? ಎಂಬ ಬಗ್ಗೆಯೂ ಕುತೂಹಲ ವ್ಯಕ್ತಡಿಸುತ್ತಿದ್ದಾರೆ.

ಇದನ್ನೂ ಓದಿ: ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ: 'ದೊಡ್ಮನೆಗಳ ದೊಡ್ಡತನ'ವೆಂದ ನೆಟ್ಟಿಗರು - Aaradhya Touches Shivrajkumar Feet

ರಣವೀರ್​ - ದೀಪಿಕಾ ಬಾಲ್ಯದ ಫೋಟೋಗಳು ವೈರಲ್: ಸಾಮಾಜಿಕ ಮಾಧ್ಯಮದಲ್ಲೀಗ ರಣ್​​​ವೀರ್ ಸಿಂಗ್​​ ಹಾಗೂ ದೀಪಿಕಾ ಪಡುಕೋಣೆ ಅವರ ಬಾಲ್ಯದ ಫೋಟೋಗಳು ವೈರಲ್​​ ಆಗುತ್ತಿವೆ. ಹೋಲಿಕೆಯ ಚರ್ಚೆ ದೊಡ್ಡ ಮಟ್ಟದಲ್ಲೇ ನಡೆಯುತ್ತಿವೆ. ಬಾಲ್ಯ ರಣ್​​​ವೀರ್ ಅವರ ಬಾಲಿಶ ನಗು, ಎಕ್ಸ್​​​ಪ್ರೆಸ್ಸೀವ್​ ಐಸ್ ಮತ್ತು ದೀಪಿಕಾ ಅವರ ಆಕರ್ಷಕ ನಡವಳಿಕೆ, ನಗುವಿನ ಚಿತ್ರಗಳು ವ್ಯಾಪಕವಾಗಿ ವೈರಲ್​​ ಆಗುತ್ತಿದ್ದು, ಮಗಳು ಆನುವಂಶಿಕವಾಗಿ ಪಡೆಯಬಹುದಾದ ಸಂಭಾವ್ಯ ಗುಣಲಕ್ಷಣಗಳ ಬಗ್ಗೆ ಚರ್ಚೆ ಹುಟ್ಟುಕೊಂಡಿವೆ. ಕಂದಮ್ಮನ ಫೋಟೋ ನೋಡುವ ನಿರೀಕ್ಷೆಯು ಊಹೆಯನ್ನು ಹೆಚ್ಚುಗೊಳಿಸಿವೆ. ಕೆಲ ಅಭಿಮಾನಿಗಳು ದಂಪತಿಯ ಬಾಲ್ಯದ ಚಿತ್ರಗಳನ್ನು ಅಕ್ಕಪಕ್ಕದಲ್ಲಿಸಿ ಹೋಲಿಕೆ ಮಾಡುತ್ತಿದ್ದರೆ, ಕೆಲವರು ನವಜಾತ ಶಿಶುವಿನೊಂದಿಗೆ ಪೋಷಕರಿರುವ ಎಐ ಚಿತ್ರ ಸೃಷ್ಟಿಸಿ ವೈರಲ್​​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಅದಿತಿ ರಾವ್ ಹೈದರಿ-ಸಿದ್ಧಾರ್ಥ್ - Aditi Rao Hydari Siddharth

ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ಗಳು ಹಲವು ಪೋಸ್ಟ್‌ಗಳಿಂದ ತುಂಬಿದ್ದು, ಅಭಿಮಾನಿಗಳು ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ದೀಪ್​ವೀರ್​ ಪುತ್ರಿ ನಿಸ್ಸಂದೇಹವಾಗಿ ಸ್ಟಾರ್​​ ಆಗುತ್ತಾಳೆಂದು ಹಲವರು ಭವಿಷ್ಯ ನುಡಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.