ETV Bharat / entertainment

ಸಲ್ಮಾನ್-ರಶ್ಮಿಕಾ 'ಸಿಖಂದರ್' ಶೂಟಿಂಗ್‌: ಸೆಟ್​​ನಿಂದ ಸಲ್ಲು ನ್ಯೂ ಲುಕ್ ರಿವೀಲ್​​ - Sikandar - SIKANDAR

ಸಲ್ಮಾನ್​ ಖಾನ್​​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಸಿಖಂದರ್' ಸಿನಿಮಾದ ಶೂಟಿಂಗ್​ ಶುರುವಾಗಿದೆ.

Photo from Sikandar
ಸಿಖಂದರ್ ಸೆಟ್​ನಿಂದ​​ ಫೋಟೋ ರಿವೀಲ್ (Social media)
author img

By ETV Bharat Karnataka Team

Published : Jun 19, 2024, 4:40 PM IST

ಬಾಲಿವುಡ್​ ನಟ ಸಲ್ಮಾನ್ ಖಾನ್ ಹಾಗೂ ನಟಿ​​ ರಶ್ಮಿಕಾ ಮಂದಣ್ಣ ಅಭಿನಯದ 'ಸಿಖಂದರ್' ಸಿನಿಮಾ ಇಂದು ಸೆಟ್ಟೇರಿತು. ಕಳೆದೆರಡು ತಿಂಗಳಿಂದ ತಮ್ಮ ನಿವಾಸದೆದುರು ನಡೆದ ಗುಂಡಿನ ದಾಳಿಯಿಂದಾಗಿ ಸುದ್ದಿಯಲ್ಲಿದ್ದ 'ಬಾಲಿವುಡ್ ಭಾಯ್​ಜಾನ್' ಇದೀಗ ಸಿನಿಮಾ ಸೆಟ್​ಗೆ ಹಿಂದಿರುಗಿದ್ದಾರೆ. ಸೆಟ್​​ನಿಂದ ಹೊರಬಿದ್ದಿರುವ ಸಲ್ಲು ನ್ಯೂ ಲುಕ್​​​​ ನೆಟ್ಟಿಗರ ಗಮನ ಸೆಳೆಯುತ್ತಿದೆ.

ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ ಚಿತ್ರತಂಡದೊಂದಿಗಿನ ಫೋಟೋ ಹಂಚಿಕೊಂಡ ಸಲ್ಮಾನ್​ ಖಾನ್, ಸಿಖಂದರ್ ಚಿತ್ರತಂಡದೊಂದಿಗೆ 2025ರ ಈದ್​​​ಗಾಗಿ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಾಡಿಯಾಡ್ವಾಲಾ ಗ್ರ್ಯಾಂಡ್ಸನ್ ಎಂಟರ್ಟೈನ್ಮೆಂಟ್ ಕೂಡ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ ಈ ಫೋಟೋ ಹಂಚಿಕೊಂಡು, 'ಸಿಕಂದರ್ ಟ್ರಿಯೋ. ಈ ಫೋಟೋ ಚಿತ್ರದ ಸೆಟ್‌ನಿಂದ' ಎಂದು ತಿಳಿಸಿದೆ.

ಸಲ್ಮಾನ್​ ಖಾನ್​​ ಹೊಸ ನೋಟಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, 'ಅದ್ಭುತವಾಗಿ ಕಾಣುತ್ತಿದ್ದಾರೆ' ಎಂದು ಮೆಚ್ಚಿದ್ದಾರೆ. ಮತ್ತೊಬ್ಬರು, 'ಸಲ್ಮಾನ್​ ದಿನದಿಂದ ದಿನಕ್ಕೆ ಚಿಕ್ಕವರಾಗಿ ಕಾಣುತ್ತಿದ್ದಾರೆ' ಎಂದು ಗುಣಗಾನ ಮಾಡಿದ್ದಾರೆ. ಉಳಿದಂತೆ, ಸಲ್ಮಾನ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಕಾಮೆಂಟ್​ ಸೆಕ್ಷನ್​​ ರೆಡ್​ ಹಾರ್ಟ್, ಫೈಯರ್ ಎಮೋಜಿಯಿಂದ ತುಂಬುತ್ತಿದೆ.

ಇದನ್ನೂ ಓದಿ: 'ಕಲ್ಕಿ 2898 ಎಡಿ': ಭರ್ಜರಿ ಪ್ರೀ-ಬುಕಿಂಗ್‌, ಆರ್​ಆರ್​ಆರ್ ದಾಖಲೆ ಪುಡಿ ಪುಡಿ - Kalki 2898 AD

'ಗಜಿನಿ' ಮತ್ತು 'ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ'ಯಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಎ.ಆರ್.ಮುರುಗದಾಸ್ ಆ್ಯಕ್ಷನ್​​ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಸಲ್ಮಾನ್ ಮುಖ್ಯ ಪಾತ್ರ ಮಾಡುತ್ತಿದ್ದಾರೆ. 2025ರ ಈದ್​ಗೆ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ. ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರ ಬ್ಯಾನರ್ ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್ಟೈನ್ಮೆಂಟ್ ಈ ಚಿತ್ರವನ್ನು ಬಿಗ್​ ಬಜೆಟ್​ನಲ್ಲಿ ನಿರ್ಮಿಸುತ್ತಿದೆ. 'ಪುಷ್ಪ' ನಟಿ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಸಲ್ಮಾನ್​ ಖಾನ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: 'ಭೈರತಿ ರಣಗಲ್' ಜಾಗಕ್ಕೆ 'ಭೀಮ'ನ ಎಂಟ್ರಿ:‌ ಹ್ಯಾಟ್ರಿಕ್ ಹೀರೋನ ಸಿನಿಮಾ ಮುಂದೂಡಿಕೆ - Bhairathi Ranagal Postponed

ಕಿಕ್, ಜುಡ್ವಾ ಮತ್ತು ಮುಜ್ಸೆ ಶಾದಿ ಕರೋಗಿ ಸಿನಿಮಾಗಳ ನಂತರ ಸಲ್ಮಾನ್ ಖಾನ್ ಮತ್ತು ಸಾಜಿದ್ ನಾಡಿಯಾಡ್ವಾಲಾ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಕೊನೆಯದಾಗಿ, 2014ರಲ್ಲಿ ಬಂದ ಕಿಕ್ ಚಿತ್ರದಲ್ಲಿ ಕೆಲಸ ಮಾಡಿದ್ದರು. ಈ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗಿವೆ​. ಇದೀಗ ಸಿಖಂದರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಲ್ಮಾನ್ ಕೊನೆಯದಾಗಿ 2023ರ ನವೆಂಬರ್​ನಲ್ಲಿ ತೆರೆಕಂಡ ಟೈಗರ್ 3ನಲ್ಲಿ ಕಾಣಿಸಿಕೊಂಡಿದ್ದರು. ಡಿಸೆಂಬರ್​ನಲ್ಲಿ ಬಿಡುಗಡೆ ಆಗಿ ಧೂಳೆಬ್ಬಿಸಿದ ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಇವರ ಮುಂದಿನ ಚಿತ್ರಗಳ ಮೇಲೆ ಸಿನಿಪ್ರಿಯರು ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.