ETV Bharat / entertainment

ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ 'ಯೋಧ' ತೆರೆಗೆ: ಕಿಯಾರಾ ಅಡ್ವಾಣಿ ಸೇರಿ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿದೆ - Yodha

ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯಭೂಮಿಕೆಯ 'ಯೋಧ' ಚಿತ್ರ ಇಂದು ಬಿಡುಗಡೆ ಆಗಿದ್ದು, ಬಹುತೇಕ ಉತ್ತಮ ಸ್ಪಂದನೆ ಸ್ವೀಕರಿಸುತ್ತಿದೆ.

Yodha movie
ಯೋಧ ಸಿನಿಮಾ
author img

By ETV Bharat Karnataka Team

Published : Mar 15, 2024, 4:12 PM IST

ಬಾಲಿವುಡ್​ ಬಹುಬೇಡಿಕೆ ತಾರೆಯರಾದ ಸಿದ್ಧಾರ್ಥ್ ಮಲ್ಹೋತ್ರಾ, ದಿಶಾ ಪಟಾನಿ ಮತ್ತು ರಾಶಿ ಖನ್ನಾ ಮುಖ್ಯಭೂಮಿಕೆಯ 'ಯೋಧ' ಇಂದು ಚಿತ್ರಮಂದಿರ ಪ್ರವೇಶಿಸಿದೆ. ನವ ನಿರ್ದೇಶಕರಾದ ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ನಿರ್ದೇಶನದ ಈ ಚಿತ್ರವನ್ನು ಹಿರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಶಶಾಂಕ್ ಖೈತಾನ್ ನಿರ್ಮಿಸಿದ್ದಾರೆ. ಆ್ಯಕ್ಷನ್​ ಪ್ಯಾಕ್ಡ್​​ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯೋಧ ಸಿನಿಮಾ ವೀಕ್ಷಿಸಿದವರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​​​ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, "ಯೋಧ ಅದ್ಭುತವಾಗಿದೆ. ಸಾಹಸ ದೃಶ್ಯಗಳು ಅತ್ಯುತ್ತಮ. ನಿರೀಕ್ಷೆಗಳನ್ನು ಮೀರಿಸಿದೆ'' ಎಂದು ತಿಳಿಸಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, " ಯೋಧ ಅದ್ಭುತ ಚಿತ್ರ. ಕಥಾವಸ್ತುವಿನಲ್ಲಿ ಟ್ವಿಸ್ಟ್, ಆ್ಯಕ್ಷನ್​​ ಎಲ್ಲವೂ ಅತ್ಯುತ್ತಮ'' ಎಂದು ತಿಳಿಸಿದ್ದಾರೆ.

ನೆಟ್ಟಿಗರೋರ್ವರು ಸಿನಿಮಾವನ್ನು ''ರಿಯಲ್​ ಡೀಲ್​​" ಎಂದು ಉಲ್ಲೇಖಿಸಿ, "ಯೋಧ ಆ್ಯಕ್ಷನ್, ಡ್ರಾಮಾ, ಎಮೋಶನ್ಸ್ ಎಲ್ಲವನ್ನೂ ಒಳಗೊಂಡ ಸಿನಿಮಾ, ನೋಡಲೇಬೇಕಾದ ಚಿತ್ರ"ಎಂದು ಬರೆದಿದ್ದಾರೆ. ಚಿತ್ರದಲ್ಲಿ ಹ್ಯಾಡ್ಸಂ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ ಅವರ ಎಂಟ್ರಿಗೂ ಶಿಳ್ಳೆ-ಚಪ್ಪಾಳೆ ಸಿಕ್ಕಿದೆ. ಬಾಪ್ ಲೆವೆಲ್ ಎಂಟ್ರಿ, ಅವರ ವಾಕಿಂಗ್ ಸ್ಟೈಲ್​​ ಅದ್ಭುತ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಸಿನಿಮಾ ಬಹುತೇಕ ಪಾಸಿಟಿವ್​​ ರೆಸ್ಪಾನ್ಸ್ ಸ್ವೀಕರಿಸಿದ್ದು, "ಯೋಧ ಹಿಟ್​​ ಮೂವಿ'' ಎಂದು ಓರ್ವರು ಉಲ್ಲೇಖಿಸಿದ್ದಾರೆ. ಮುಂಬೈನಲ್ಲಿ ನಡೆದ ಸ್ಕ್ರೀನಿಂಗ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಿರ್ದೇಶಕರಾದ ಸಾಗರ್ ಅಂಬ್ರೆ, ಪುಷ್ಕರ್ ಓಜಾ ಉತ್ತಮ ಪ್ರತಿಕ್ರಿಯೆ ಪಡೆದಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿ, ''ಸಿನಿಮಾ ಸ್ಫೂರ್ತಿದಾಯಕವಾಗಿದೆ ಮತ್ತು ಪ್ರತೀ ಅಂಶಗಳೂ (ಕಥೆ, ಚಿತ್ರೀಕರಣ, ಕ್ಯಾಮರಾ ವರ್ಕ್, ಸಂಗೀತ ಮತ್ತು ನಟನೆ) ಪರ್ಫೆಕ್ಟ್​​ ಆಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಈ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡೋ ಮೂಲಕ ನೀವು ನಿಮ್ಮನ್ನೇ ಮೀರಿಸಿದ್ದೀರಿ" ಎಂದು ತಿಳಿಸಿದ್ದಾರೆ. ಸೂಪರ್​ ಹಿಟ್​​, ಬ್ಲಾಕ್​ ಬಸ್ಟರ್, ಔಟ್​ ಸ್ಟ್ಯಾಂಡಿಂಗ್​​ ಎಂದೆಲ್ಲ ಕಾಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: RC16: ರಾಮ್​​ ಚರಣ್​ ಸಿನಿಮಾ ಸೆಟ್ಟೇರೋದು ಯಾವಾಗ? ಡೀಟೆಲ್ಸ್ ಇಲ್ಲಿದೆ

ಮತ್ತೊಂದೆಡೆ ಸಿದ್ಧಾರ್ಥ್ ಮಲ್ಹೋತ್ರಾ ಪತ್ನಿ, ಬಾಲಿವುಡ್​ ಬಹುಬೇಡಿಕೆ ನಟಿ ಕಿಯಾರಾ ಅಡ್ವಾಣಿ ಕೂಡ ಸಿನಿಮಾವನ್ನು ಶ್ಲಾಘಿಸಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿ ಹಂಚಿಕೊಂಡಿರುವ ನಟಿ, ''ಸಿದ್ಧಾರ್ಥ್ ಮಲ್ಹೋತ್ರಾ ನೀವು ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದ್ದೀರಿ. ನಿಮ್ಮ ಅತ್ಯುತ್ತಮ" ಎಂದು ಬರೆದುಕೊಂಡಿದ್ದಾರೆ. ಚೊಚ್ಚಲ ನಿರ್ದೇಶಕ ಜೋಡಿಯನ್ನೂ ಶ್ಲಾಘಿಸಿರುವ ಕಿಯಾರಾ "ಸಾಗರ್, ಪುಷ್ಕರ್ ಇದು ನಿಮ್ಮ ಚೊಚ್ಚಲ ಚಿತ್ರ ಎಂದು ನಂಬಲಾಗುತ್ತಿಲ್ಲ'' ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ದಿಶಾ ಪಟಾನಿ ಮತ್ತು ರಾಶಿ ಖನ್ನಾ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿ "ಲೇಡಿ ಯೋಧಾಸ್" ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬರ್ತ್​​ಡೇ ಗರ್ಲ್ ಆಲಿಯಾ ಭಟ್​​ ಮುಂದಿನ ಚಿತ್ರಗಳಿವು: ರಾಷ್ಟ್ರಪ್ರಶಸ್ತಿ ವಿಜೇತ ನಟಿಯ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ

ಗುರುವಾರ ರಾತ್ರಿ ಮುಂಬೈನಲ್ಲಿ ಚಿತ್ರತಂಡ ಯೋಧ ಸ್ಪೆಷಲ್​​ ಶೋ ಹಮ್ಮಿಕೊಂಡಿತ್ತು. ಸಿದ್ಧಾರ್ಥ್ ಸಂಪೂರ್ಣ ಕುಟುಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಜೊತೆಗೆ ಚಿತ್ರತಂಡ ಹಾಜರಿತ್ತು. ಸೋಷಿಯಲ್​ ಮೀಡಿಯಾದಲ್ಲಿ ಈವೆಂಟ್​ನ ಫೋಟೋ - ವಿಡಿಯೋಗಳು ಸದ್ದು ಮಾಡುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.