ಮುಂಬೈ (ಮಹಾರಾಷ್ಟ್ರ) : ಬಾಲಿವುಡ್‌ನಲ್ಲಿ ಹೆಚ್ಚು ಇಷ್ಟಪಡುವ ಮತ್ತು ಪ್ರೀತಿಸುವ ನಟಿಯರಲ್ಲಿ ಶ್ರದ್ಧಾ ಕಪೂರ್ ಒಬ್ಬರು. ತಮ್ಮ ಚೊಚ್ಚಲ ಚಿತ್ರ 'ಆಶಿಕಿ 2', 'ಓಕೆ ಜಾನು', 'ಸ್ತ್ರೀ' ಮುಂತಾದ ಹಲವು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಜನಮನ ಗೆದ್ದಿದ್ದಾರೆ. ನಟನೆಯ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ತನ್ನ ವಿಚಿತ್ರ ಪೋಸ್ಟ್‌ಗಳಿಂದ ಜನರನ್ನು ರಂಜಿಸುತ್ತಲೇ ಇರುವ ಇವರು, ಇತ್ತೀಚೆಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದು ಲೇಟ್ ನೈಟ್ ಡ್ರೈವ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಶ್ರದ್ಧಾ ಕಪೂರ್ ಇಂದು ಮೇ 28 ರಂದು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಸ್ನಲ್ಲಿ ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಪೋಸ್ಟ್ ಜನರ ಗಮನ ಸೆಳೆದಿದೆ. ಶ್ರದ್ಧಾ ಕಪೂರ್ ತಮ್ಮ ಮತ್ತು ಸ್ನೇಹಿತೆಯೊಂದಿಗೆ ಮೋಜಿನ ಲೇಟ್ ನೈಟ್ ಡ್ರೈವ್ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅವರು ಡ್ರೈವ್ ಆನಂದಿಸುತ್ತಿದ್ದಾರೆ. ಈ ವಿಡಿಯೋಗೆ ಅವರು ಶೀರ್ಷಿಕೆ ನೀಡಿದ್ದಾರೆ. 'ಹೊಸ ಕರಾವಳಿ ರಸ್ತೆ ನನ್ನ ಹೃದಯವನ್ನು ಗೆದ್ದಿದೆ. ತಡರಾತ್ರಿಯ ಡ್ರೈವ್‌ಗಳ ಮೇಲಿನ ಪ್ರೀತಿ ಈಗಷ್ಟೇ ಹೆಚ್ಚಿದೆ' ಎಂದು ಬರೆದುಕೊಂಡಿದ್ದಾರೆ.
ಒಂದು ಸ್ಟೋರಿಯಲ್ಲಿ ನಟಿ ಶ್ರದ್ಧಾ ತನ್ನ ಸ್ನೇಹಿತೆಯೊಂದಿಗೆ ಬರ್ಗರ್ ತಿನ್ನುವುದನ್ನು ಕಾಣಬಹುದು. ಈ ಕ್ಷಣವನ್ನು ಹಂಚಿಕೊಳ್ಳುವಾಗ, ಅವರು ತಮಾಷೆಯ ಶೀರ್ಷಿಕೆಯನ್ನು ನೀಡಿದ್ದಾರೆ. ‘ಈ ಹುಡುಗಿ ತುಂಬಾ ತಮಾಷೆ’ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ರೀಲ್ಸ್ನಲ್ಲಿ, ಅವರು ತನ್ನ ಸ್ನೇಹಿತೆಯೊಂದಿಗೆ ಸಿಹಿ ಹಂಚುವ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಶ್ರದ್ಧಾ ಕಪೂರ್ ಅವರ ಮುಂಬರುವ ಸಿನಿಮಾ : ಶ್ರದ್ಧಾ ಕಪೂರ್ 2018 ರ ಹಾರರ್ ಕಾಮಿಡಿ 'ಸ್ತ್ರೀ' ನ ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮರ್ ಕೌಶಿಕ್ ಅವರ ಈ ಯೋಜನೆಯಲ್ಲಿ ಪಂಕಜ್ ತ್ರಿಪಾಠಿ, ರಾಜ್‌ಕುಮಾರ್ ರಾವ್ ಮತ್ತು ಅಭಿಷೇಕ್ ಬ್ಯಾನರ್ಜಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಗಸ್ಟ್ 30, 2024 ರಂದು ಬಿಡುಗಡೆ ಮಾಡಲು ನಿಗದಿಪಡಿಸಲಾಗಿದೆ. ಥಿಯೇಟರ್‌ಗೆ ಬರಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ : ಕೆಂಪು ಬಣ್ಣದ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ನಟಿ ಶ್ರದ್ಧಾ ಕಪೂರ್.. ಬೆಲೆ ಎಷ್ಟು ಗೊತ್ತಾ ?