ETV Bharat / entertainment

ಲಾಕ್​​ಡೌನ್​​​ನಲ್ಲಿ ಒಂದೇ ಮನೆಯಲ್ಲಿ ನಡೆದಿತ್ತು ಚಿತ್ರೀಕರಣ: 'ಟೆನಂಟ್' ಟ್ರೇಲರ್​ ನೋಡಿದ್ರಾ? - TENANT KANNADA MOVIE

ಶ್ರೀಧರ್ ಶಾಸ್ತ್ರಿ ಆ್ಯಕ್ಷನ್ ಕಟ್ ಹೇಳಿರುವ 'ಟೆನಂಟ್' ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ.​

'Tenant' Film Team
'ಟೆನಂಟ್' ಟ್ರೇಲರ್​ ರಿಲೀಸ್​ ಈವೆಂಟ್​​ (ETV Bharat)
author img

By ETV Bharat Entertainment Team

Published : Nov 7, 2024, 4:56 PM IST

'ಟೆನಂಟ್' ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿದ್ದ ಸಿನಿಮಾ. ಇದೀಗ ಟ್ರೆಲರ್​​ ಮೂಲಕ ಅಭಿಮಾನಿಗಳೆದುರು ಬಂದಿದೆ. ಚಿತ್ರೀಕರಣ ಮುಗಿಸಿ ಸಿನಿಪ್ರಿಯರ ಹೃದಯಕ್ಕೆ ಲಗ್ಗೆ ಇಡುವ ಸಲುವಾಗಿ ಪ್ರಮೋಷನ್ ಅಂಗಳಕ್ಕೆ ಇಳಿದಿದೆ ಟೆನಂಟ್ ಟೀಂ.

ಅಂದಹಾಗೆ ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಸದ್ಯ ಬಿಗ್ ಬಾಸ್ ಮನೆಯೊಳಗೆ ಇರುವ ನಟ ಧರ್ಮಕೀರ್ತಿರಾಜ್ ಮತ್ತು ಉಗ್ರಂ ಮಂಜು ಸೇರಿದಂತೆ ತಿಲಕ್, ರಾಕೇಶ್ ಮಯ್ಯಾ ಹಾಗೂ ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗೆ ಶ್ರೀಧರ್ ಶಾಸ್ತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ರೀಧರ್​ ಅವರಿಗಿದು ಚೊಚ್ಚಲ ಚಿತ್ರ. ಸದ್ಯ ಅನಾವರಣಗೊಂಡಿರುವ ಟ್ರೇಲರ್​​ ನೋಡಿದ್ರೆ ಇದು ಮೊದಲ ಸಿನಿಮಾವೆಂದು ಅನಿಸದಷ್ಟು ಅಚ್ಚುಕಟ್ಟಾಗಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ ನಿರ್ದೇಶಕರು. ಕ್ರೈಮ್ ಥ್ರಿಲ್ಲರ್ ಕಥಾಹಂದರದ ಟೆನಂಟ್ ಸಿನಿಮಾದ ಟ್ರೇಲರ್​ ಆಕರ್ಷಕವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಒಂದೇ ಮನೆಯಲ್ಲಿ ನಡೆಯುವ ಕಥೆ ಇದಾಗಿದೆ.

ಕಣ್ ಕಣ್ಣ ಸಲಿಗೆ ಎಂದು ಲವರ್ ಬಾಯ್ ಆಗಿ ಮಿಂಚಿದ್ದ ನಟ ಧರ್ಮಕೀರ್ತಿರಾಜ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇನ್ನು ತಿಲಕ್ ರಾಜ್, ರಾಕೇಶ್ ಮಯ್ಯಾ ಹಾಗೂ ಸೋನು ಗೌಡ ಅವರ ಪಾತ್ರಗಳು ಸಹ ವಿಭಿನ್ನವಾಗಿದ್ದು, ವರ್ಷಗಳ ಗ್ಯಾಪ್​ ಬಳಿಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಚಿತ್ರದಲ್ಲಿ ಎಲ್ಲರ ಪಾತ್ರಗಳು ಸಹ ಗಮನ ಸೆಳೆಯುವಂತಿದ್ದು, ಬ್ಯಾಕ್​ಗ್ರೌಂಡ್ ಸ್ಕೋರ್ ಚಿತ್ರದ ಮೇಲಿನ ಕುತೂಹಲ, ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

'Tenant' Film Team
'ಟೆನಂಟ್' ಸ್ಟಾರ್ಸ್ (ETV Bharat)

ಪೊಲೀಸ್ ಪಾತ್ರ ನಿರ್ವಹಿಸಿರುವ ನಟ ತಿಲಕ್ ಮಾತನಾಡಿ, ನಿರ್ದೇಶಕ ಶ್ರೀಧರ್ ಕಥೆ ಹೇಳಿದಾಗ ತುಂಬಾನೇ ಇಷ್ಟ ಆಯ್ತು. ನನ್ನ ಸಿನಿಮಾ ಜೀವನದಲ್ಲೇ ಇಂಥ ಪಾತ್ರ ನಿರ್ವಹಿಸಿಲ್ಲ. ಇದು ಖಂಡಿತಾ ನನ್ನ ಜೀವನದ ಬಹುಮುಖ್ಯ ಸಿನಿಮಾವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಟ ರಾಕೇಶ್ ಮಯ್ಯಾ ಮಾತನಾಡಿ, ನಿರ್ದೇಶಕ ಶ್ರೀಧರ್ ಅವರು ಪಾತ್ರಗಳ ಬಗ್ಗೆ ತುಂಬಾನೇ ಕ್ಲ್ಯಾರಿಟಿ ಇಟ್ಟುಕೊಂಡು ಮಾಡಿದ್ದಾರೆ. ಒಂದೇ ಮನೆಯಲ್ಲಿ ನಡೆಯುವ ಸಿನಿಮಾವಿದು. ಎಲ್ಲರೂ ಸಿನಿಮಾ ನೋಡಿ ಬೆಂಬಲಿಸಿ ಎಂದು ಕೇಳಿಕೊಂಡರು.

'Tenant' Film Team
'ಟೆನಂಟ್' ಟ್ರೇಲರ್​ ರಿಲೀಸ್​ ಈವೆಂಟ್​​ (ETV Bharat)

ನಟಿ ಸೋನು ಗೌಡ ಮಾತನಾಡಿ, ಮೊದಲು ಈ ಸಿನಿಮಾದ ಕಥೆ ಕೇಳಿ ಮಾಡಬೇಕೋ ಬೇಡವೋ ಅಂತಾ ಯೋಚನೆ ಮಾಡಿದ್ದೆ. ಈ ರೀತಿಯ ಪಾತ್ರವನ್ನು ನಾನೆಂದಿಗೂ ಮಾಡಿರಲಿಲ್ಲ. ಜನ ನನ್ನನ್ನು ಸ್ವೀಕರಿಸುತ್ತಾರಾ ಎನ್ನುವ ಭಯವಿತ್ತು. ಆದ್ರೆ ಕಥೆ ಇಷ್ಟ ಆಗಿ ಒಪ್ಪಿಕೊಂಡೆ. 21 ದಿನ ಶೂಟಿಂಗ್​ನಲ್ಲಿ ಭಾಗಿಯಾಗಿದ್ದೆ. ಲಾಕ್ ಡೌನ್ ಸಮಯದಲ್ಲಿ ಒಂದೇ ಮನೆಯಲ್ಲಿ ಚಿತ್ರೀಕರಣ ನಡೆದಿತ್ತು. ಹಾಗಾಗಿ ಜನರನ್ನು ಎಂಗೇಜಿಂಗ್ ಆಗಿ ಇಟ್ಟುಕೊಳ್ಳಬಹುದಾ ಎನ್ನುವ ಗೊಂದಲವಿತ್ತು. ಆದ್ರೆ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನನ್ನ 3 ವರ್ಷಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ: 'ಬಘೀರ' ಸಂಭ್ರಮಾಚರಣೆಯಲ್ಲಿ ಶ್ರೀಮುರುಳಿ ಮನದಾಳ

ನಿರ್ದೇಶಕ ಶ್ರೀಧರ್ ಮಾತನಾಡಿ, ಲಾಕ್‍ಡೌನ್ ಅನ್ನು ಬೇಸ್​ ಆಗಿ ಇಟ್ಟುಕೊಂಡು ಮಾಡಿರುವ ಕಥೆ. ಒಂದೇ ಮನೆಯಲ್ಲಿ ನಡೆಯುವ ಕಥೆ. 5 ಪ್ರಮುಖ ಪಾತ್ರಗಳಿವೆ. ಎಲ್ಲರೂ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಸಿನಿಮಾ ನೋಡಿ ಹಾರೈಸಿ ಎಂದು ಕೇಳಿಕೊಂಡರು.

'Tenant' Film Team
'ಟೆನಂಟ್' ಚಿತ್ರತಂಡ (ETV Bharat)

ಇದನ್ನೂ ಓದಿ: ಸಲ್ಮಾನ್​ ಬೆನ್ನಲ್ಲೇ ಸೂಪರ್​ ಸ್ಟಾರ್ ಶಾರುಖ್​ ಖಾನ್​ಗೂ ಕೊಲೆ ಬೆದರಿಕೆ: ಎಫ್​​ಐಆರ್​ ದಾಖಲು

ಮಾಸ್ಟರ್ ಚಾಯ್ಸ್ ಕ್ರಿಯೇಶನ್‍ನಡಿ ನಾಗರಾಜ್ ಟಿ ನಿರ್ಮಾಣ ಮಾಡಿರುವ ಟೆನಂಟ್ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೆ ಗಿರೀಶ್ ಹೊತೂರ್ ಸಂಗೀತ ಸಂಯೊಜನೆ ಮಾಡಿದ್ದಾರೆ. ಉಜ್ವಲ್ ಸಂಕಲನ, ಮನೋಹರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯ ಟ್ರೇಲರ್​ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ಟೆನಂಟ್ ಇದೇ ನ.22ಕ್ಕೆ ಅದ್ದೂರಿಯಾಗಿ ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.