ETV Bharat / entertainment

ಬಡವರ ಕಷ್ಟಗಳಿಗೆ ಸ್ಪಂದಿಸುವ 'ಕಾವಲಿಗ'ನಾದ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​​ - SHIVA RAJKUMAR

ಶಿವಣ್ಣ ಮುಖ್ಯಭೂಮಿಕೆಯ 'ಭೈರತಿ ರಣಗಲ್' ಚಿತ್ರದ 'ಕಾವಲಿಗ' ಹಾಡು ಅನಾವರಣಗೊಂಡಿದೆ.

Kaavaliga from Bhairathi Ranagal
ಭೈರತಿ ರಣಗಲ್ ಚಿತ್ರದ ಕಾವಲಿಗ ಹಾಡು ಅನಾವರಣ (Photo: film poster)
author img

By ETV Bharat Karnataka Team

Published : Oct 8, 2024, 2:32 PM IST

'ಭೈರತಿ ರಣಗಲ್' ಶೀರ್ಷಿಕೆಯಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೈಪ್ ಕ್ರಿಯೇಟ್ ಆಗಿರುವ ಚಿತ್ರ. ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಅದ್ಧೂರಿ ಮೇಕಿಂಗ್​ನಿಂದ ಅಭಿಮಾನಿ ಬಳಗದಲ್ಲಿ ಕುತೂಹಲ ಹುಟ್ಟಿಸಿರೋ ಭೈರತಿ ರಣಗಲ್ ಚಿತ್ರದ ಎರಡನೇ ಹಾಡು ಅನಾವರಣಗೊಂಡಿದೆ.

ಈ ಹಿಂದೆ ಗೀತೆರಚನೆಕಾರ ಕಿನ್ನಾಳ್ ರಾಜ್ ಬರೆದಿದ್ದ ಇತಿಹಾಸವೇ ನಿಬ್ಬೆರಿಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು ಎಂಬ ಹಾಡನ್ನು ಮಿಲಿಯನ್​ಗಟ್ಟಲೆ ಜನರು ವೀಕ್ಷಿಸಿ ಫಿದಾ ಆಗಿದ್ದರು. ಇದೀಗ ಮತ್ತೊಂದು ಎಮೋಷನಲ್ ಹಾಡು ಅನಾವರಣಗೊಂಡಿದ್ದು, ಸಿನಿಮಾ ನೋಡುವ ಕಾತರ ಹೆಚ್ಚಿಸಿದೆ.

''ದಡವಿರದ ಕಡಲಿನಲ್ಲಿ, ಬುಡವಿರದ ಹಡಗುಗಳು ಗುರಿ ಇರದೇ ನಲೆ ಸಿಗದೇ ಮುಳುಗುತ್ತಿವೆ, ದುಗಡಗಳ ಆರ್ಭಟಕ್ಕೆ ಸುಡುತ್ತಿರುವ ಸಂಕಟಕ್ಕೆ ತಡೆಯಾಜ್ಞೆ ತಂದವನು ಯಾರಿವನು ಕಾವಲಿಗ..ಕಾವಲಿಗ...ನಂಬಿಕೆಯ ಕಾವಲಿಗ'' ಅಂತಾ ಶುರುವಾಗುವ ಈ ಹಾಡು ಬಡವರ ಕಷ್ಟಗಳ ಬಗ್ಗೆ ಹೇಳುತ್ತಿದೆ. ಯುವ ಪ್ರತಿಭೆ ಸಾಯಿ ಸರ್ವೇಶ್ ಈ ಹಾಡನ್ನು ಬರೆದಿದ್ದು, ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ರವಿ ಬಸ್ರೂರ್ ಕ್ಯಾಚೀ ಟ್ಯೂನ್ ಹಾಕಿದ್ದಾರೆ.

2017ರ ಡಿಸೆಂಬರ್​​ 1ರಂದು ತೆರೆಕಂಡು ಸೂಪರ್​ ಹಿಟ್​ ಆಗಿದ್ದ ಮಫ್ತಿ ಸಿನಿಮಾದ ಪ್ರೀಕ್ವೆಲ್​ ಈ 'ಭೈರತಿ ರಣಗಲ್'​​​. ಈ ಸಿನಿಮಾ ಸ್ಯಾಂಡಲ್​ವುಡ್​ ಮಾತ್ರವಲ್ಲದೇ, ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಕುತೂಹಲ ಹುಟ್ಟಿಸಿದೆ. ಶಿವರಾಜ್​​​ಕುಮಾರ್​​ ಪಾತ್ರದ ಮೇಲೆ ನಿರೀಕ್ಷೆ, ಕುತೂಹಲ ಕೂಡಾ ಜೋರಾಗಿದೆ. ಇದೀಗ ಈ ಕಾವಲಿಗ ಹಾಡು ಅಭಿಮಾನಿಗಳ ಕುತೂಹಲ, ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ.

ಇದನ್ನೂ ಓದಿ: ಯುವ ದಸರಾ: ರವಿ ಬಸ್ರೂರು ಮ್ಯೂಸಿಕ್​​ಗೆ ಕುಣಿದು ಕುಪ್ಪಳಿಸಿದ ಜನತೆ; ಪ್ರೇಕ್ಷಕರ ಮನಗೆದ್ದ ವಿವಿಧ ತಂಡಗಳು

ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿರುವ ಭೈರತಿ ರಣಗಲ್‍ ಚಿತ್ರವನ್ನು ನಿರ್ದೇಶಕ ನರ್ತನ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಶಿವರಾಜ್​ಕುಮಾರ್ ಜೊತೆಗೆ ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್, ದೇವರಾಜ್‍, ಗೋಪಾಲ ಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ: 'ಕೃಷ್ಣಂ ಪ್ರಣಯ ಸಖಿ' ಸಿನಿಮಾಗೆ 50ರ ಸಂಭ್ರಮ: ಪ್ರೇಕ್ಷಕರೇ ದೇವರೆಂದ ಗೋಲ್ಡನ್ ಸ್ಟಾರ್ ಗಣೇಶ್

ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣವಿದ್ದು, ಆಕಾಶ್ ಹಿರೇಮಠ ಎಡಿಟಿಂಗ್​ ಮಾಡಿದ್ದಾರೆ. ‌ಗುಣ ಅವರ ಕಲಾ ನಿರ್ದೇಶನ, ದಿಲೀಪ್ ಸುಬ್ರಹ್ಮಣ್ಯ ಹಾಗೂ ಚೇತನ್ ಡಿಸೋಜ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ನವೆಂಬರ್ 15ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದು, ಹ್ಯಾಟ್ರಿಕ್ ಹೀರೋನ ಸಿನಿಮಾ ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.