ಭೈರತಿ ರಣಗಲ್ ಮಾಸ್ ಟೈಟಲ್ನಿಂದಲೇ ಟಾಕ್ ಆಗುತ್ತಿರುವ ಕನ್ನಡ ಸಿನಿಮಾ. ಭೈರತಿ ರಣಗಲ್ ಆಗಿ ಶಿವಣ್ಣ ಬೆಳ್ಳಿತೆರೆ ಮೇಲೆ ಹೇಗೆ ಅಬ್ಬರಿಸುತ್ತಾರೆ ಅನ್ನೋದು ಅವರ ಅಭಿಮಾನಿ ಬಳಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹುಟ್ಟಿರುವ ನಿರೀಕ್ಷೆ. ಇಂದು ಯುಗಾದಿ ಹಬ್ಬದ ಸಲುವಾಗಿ ಚಿತ್ರದ ಹೊಸ ಪೋಸ್ಟರ್ ರಿವೀಲ್ ಆಗಿದೆ.
ಮಫ್ತಿ ಮುಂದುವರಿದ ಭಾಗ 'ಭೈರತಿ ರಣಗಲ್' ರಿಲೀಸ್‌ಗೆ ರೆಡಿ ಆಗುತ್ತಿದೆ. ಇಂದು ರಿವೀಲ್ ಆಗಿರುವ ಪೊಸ್ಟರ್ ನೋಡಿದ ಕನ್ನಡ ಸಿನಿಮಾ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಭಾಗಶಃ ಪೂರ್ಣಗೊಂಡಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ಭೈರತಿ ರಣಗಲ್ ನೋಡಿ ಎಂಜಾಯ್ ಮಾಡೋಕೆ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ತಂಡ ಕೂಡ ಇದಕ್ಕೆ ತಕ್ಕ ತಯಾರಿ ಮಾಡಿಕೊಳ್ಳುತ್ತಿದೆ.
ಶಿವರಾಜ್ಕುಮಾರ್ ಮಾಡಿರೋ ಸಿನಿಮಾಗಳ ಸಂಖ್ಯೆ 100ಕ್ಕೂ ಹೆಚ್ಚು. ಹೀಗಿದ್ರೂ ಶಿವಣ್ಣನ ಖದರ್ ಬದಲಾಗಿಲ್ಲ. ಅವರ ಮುಂದಿನ ಚಿತ್ರಗಳ ಮೇಲೆ ನಿರೀಕ್ಷೆಗಳು ಬೆಟ್ಟದಷ್ಟಿದೆ. ಯುಗಾದಿ ಹಬ್ಬಕ್ಕೆ ಲಾಯರ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದು, ಇದನ್ನು ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಹಿಂದೆ ಸಮರ ಸಿನಿಮಾದಲ್ಲಿ ಶಿವಣ್ಣ ಸ್ಟೈಲಿಷ್ ಲಾಯರ್ ಪಾತ್ರದಲ್ಲಿ ಮಿಂಚಿದ್ದರು. ಬಹಳ ವರ್ಷಗಳ ಬಳಿಕ ಭೈರತಿ ರಣಗಲ್ ಚಿತ್ರದಲ್ಲಿ ಕರಿಕೋಟ್ ಹಾಕಿರೋದು ಅಭಿಮಾನಿಗಳಲ್ಲಿ ಕೂತೂಹಲ ಕೆರಳಿಸಿದೆ.
ಇದನ್ನೂ ಓದಿ: ಶಿವಮೊಗ್ಗ: ಮತದಾರರ ನಡುವೆ ಯುಗಾದಿ ಆಚರಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ, ಶಿವರಾಜ್ಕುಮಾರ್ - Geetha Shivarajkumar Ugadi