ETV Bharat / entertainment

ದೀಪಿಕಾ, ಮಗು ನೋಡಲು ಆಸ್ಪತ್ರೆಗೆ ಭೇಟಿ ಕೊಟ್ಟ ಶಾರುಖ್:​ ವಿಡಿಯೋ - Shah Rukh Khan Met Deepika - SHAH RUKH KHAN MET DEEPIKA

ಗುರುವಾರ ರಾತ್ರಿ ನಟ ಶಾರುಖ್ ಖಾನ್ ಮುಂಬೈನ ಹೆಚ್​ಎನ್​​​ ರಿಲಯನ್ಸ್ ಆಸ್ಪತ್ರೆಗೆ ಭೇಟಿ ನೀಡಿ ದೀಪಿಕಾ ಪಡುಕೋಣೆ ಕುಶಲೋಪರಿ ವಿಚಾರಿಸಿದ್ದಾರೆ. ರಣ್​​​ವೀರ್​​ ಸಿಂಗ್​​ ಮತ್ತು ದೀಪಿಕಾ ಪಡುಕೋಣೆ ಸೆಪ್ಟೆಂಬರ್ 7ರಂದು ಪೋಷಕರಾಗಿ ಭಡ್ತಿ ಪಡೆದಿದ್ದಾರೆ.

SRK Meets Deepika Padukone
ದೀಪಿಕಾ ಪಡುಕೋಣೆ ಭೇಟಿಯಾದ ಶಾರುಖ್​​ ಖಾನ್​​​​ (IANS)
author img

By ETV Bharat Entertainment Team

Published : Sep 13, 2024, 1:29 PM IST

ದೀಪಿಕಾ ಪಡುಕೋಣೆ ಭೇಟಿಯಾದ ಶಾರುಖ್​​ ಖಾನ್​​​​ (Video: PTI)

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​ನ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಬಹುಕಾಲದ ಆಪ್ತ ಸ್ನೇಹಿತರೆಂಬುದು ನಿಮಗೆ ತಿಳಿದೇ ಇದೆ. ಶಾರುಖ್​​ ಖಾನ್​ ಜೊತೆ 'ಓಂ ಶಾಂತಿ ಓಂ' ಚಿತ್ರದ ಮೂಲಕ ತಮ್ಮ ಬಾಲಿವುಡ್ ಪ್ರಯಾಣ ಪ್ರಾರಂಭಿಸಿದ ದೀಪಿಕಾ ಅವರು ಎಸ್​ಆರ್​​ಕೆ ಜೊತೆ ಹಲವು ಬ್ಲಾಕ್‌ಬಸ್ಟರ್ ಹಿಟ್‌ ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಕಳೆದ ವರ್ಷ ಬಂದ ಪಠಾಣ್​ ಕೂಡಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುವಲ್ಲಿ ಯಶ ಕಂಡಿದೆ. ಭಾನುವಾರ ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಶಾರುಖ್​ ಖಾನ್​ ತಾಯಿ ಮಗುವನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ.

ಗುರುವಾರ ರಾತ್ರಿ ಶಾರುಖ್ ಖಾನ್ ಮುಂಬೈನ ಹೆಚ್​ಎನ್​​​ ರಿಲಯನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಶನಿವಾರ ಆಸ್ಪತ್ರೆ ತಲುಪಿದ್ದ ದೀಪಿಕಾ ಭಾನುವಾರ ಮಗುವಿನ ಆಗಮನವಾಗಿದೆ ಎಂದು ಘೋಷಿಸಿದರು. ಕಳೆದ ರಾತ್ರಿ ಭೇಟಿ ಕೊಟ್ಟ ಸೂಪರ್‌ ಸ್ಟಾರ್ ದೀಪಿಕಾ ಮತ್ತು ಅವರ ಪುಟ್ಟ ಕಂದಮ್ಮನೊಂದಿಗೆ ಆಸ್ಪತ್ರೆಯಲ್ಲಿ ಸಮಯ ಕಳೆದರು. ಕಿಂಗ್​ ಖಾನ್​ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ವಹಿಸಲಾಗಿತ್ತು. ಶಾರುಖ್​​​ಗೂ ಮೊದಲು, ಮುಖೇಶ್ ಮತ್ತು ನೀತಾ ಅಂಬಾನಿ ಕೂಡಾ ದೀಪ್​ವೀರ್​​ ದಂಪತಿಯನ್ನು ಭೇಟಿ ಮಾಡಿದ್ದರು.

ಹೆಣ್ಣು ಮಗುವಿನ ಆಗಮನ ಹಿನ್ನೆಲೆಯಲ್ಲಿ ತಾರಾ ದಂಪತಿ ಸೇರಿದಂತೆ ಕುಟುಂಬಸ್ಥರು ಬಹಳ ಸಂತೋಷದಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ದೀಪಿಕಾರನ್ನೇ ಹೋಲುವ ಮಗಳು ಬೇಕೆಂದು ರಣ್​​​ವೀರ್ ಬಹಳ ದಿನಗಳಿಂದ ಬಯಸಿದ್ದರು. ತಮ್ಮ ಮಗುವಿನ ಜನನಕ್ಕೂ ಮೊದಲು, ದೀಪಿಕಾ, ರಣ್​​​ವೀರ್ ಹಾಗೂ ಕುಟುಂಬಸ್ಥರು ಗೌರಿ ಗಣೇಶ ಚತುರ್ಥಿ ಹಿನ್ನೆಲೆ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಗಣೇಶನ ಆಶೀರ್ವಾದ ಪಡೆದ ನಟಿ ಮೊಗದಲ್ಲಿ ತಾಯಿಯಾಗುತ್ತಿರುವ ಕಳೆ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: 'ಸಂಜು ವೆಡ್ಸ್ ಗೀತಾ' ನಿರ್ದೇಶಕರ ಹೊಸ ಸಿನಿಮಾ: ಕನ್ನಡಕ್ಕೆ ಎಂಟ್ರಿ ಕೊಟ್ಟ 'ಮೈನೆ ಪ್ಯಾರ್ ಕಿಯಾ' ಭಾಗ್ಯಶ್ರೀ ಪುತ್ರಿ - Bhagyashree Daughter Kannada Film

ಅದಕ್ಕೂ ಮುನ್ನ ದೀಪಿಕಾ ಮತ್ತು ರಣ್​​​ವೀರ್ ಅದ್ಭುತ ಮೆಟರ್ನಿಟಿ ಫೋಟೋ0 ಶೂಟ್ ಮೂಲಕ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡಿದ್ದರು. ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಜೊತೆಗೆ ಹಾರ್ಟ್, ಎವಿಲ್​ ಐ ಮತ್ತು ಇನ್ಫಿನಿಟಿ ಸಿಂಬಲ್​ಗಳನ್ನು ಕ್ಯಾಪ್ಷನ್​​ ಆಗಿ ಕೊಟ್ಟಿದ್ದರು. ದೀಪಿಕಾ ತಮ್ಮ ಪ್ರೆಗ್ನೆನ್ಸಿ, ಬೇಬಿ ಬಂಪ್ ಅನ್ನು ಆನಂದಿಸುತ್ತಿರುವುದು ಈ ಚಿತ್ರಗಳಲ್ಲಿ ಸ್ಪಷ್ಟವಾಗಿ ತೋರಿತ್ತು. ಬೋಲ್ಡ್​ ಫೋಟೋಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ನಟಿ ಮಲೈಕಾ ಅರೋರಾ ಮಲತಂದೆ ಆತ್ಮಹತ್ಯೆ: ಮರಣೋತ್ತರ ಪರೀಕ್ಷೆಯಲ್ಲೇನಿದೆ? - Malaika Stepfather Autopsy Report

ಈ ವರ್ಷದ ಫೆಬ್ರವರಿಯಲ್ಲಿ ದೀಪ್​ವೀರ್​ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ರು. ಆರು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದ ಪ್ರೇಮಪಕ್ಷಿಗಳು 2018ರ ನವೆಂಬರ್ 14ರಂದು ಇಟಲಿಯ ಲೇಕ್ ಕೊಮೊದಲ್ಲಿ ಸಪ್ತಪದಿ ತುಳಿದಿದ್ದರು. ಪರಸ್ಪರ ಪ್ರಿತಿ ವ್ಯಕ್ತಪಡಿಸುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಸದಾ ಗಮನ ಸೆಳೆಯುತ್ತಿರುತ್ತಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ಸೆಟ್‌ನಲ್ಲಿ ಪ್ರಾರಂಭವಾದ ಪ್ರೇಮ್​ಕಹಾನಿ ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್‌ ಮೂಲಕ ಮುಂದುವರಿಯಿತು. ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿರುವ ಸಿಂಗಂ ಎಗೈನ್​ ಚಿತ್ರದಲ್ಲೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.