ETV Bharat / entertainment

ಡಿಂಪಲ್‌ ಕ್ವೀನ್‌ ಡೆವಿಲ್ ಲುಕ್​ಗೆ ಕಾಟೇರ ಫಿದಾ: ಮ್ಯಾಟ್ನಿ ಟ್ರೇಲರ್ ನೋಡಿದ್ರಾ? - Matinee Trailer - MATINEE TRAILER

ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ 'ಮ್ಯಾಟ್ನಿ' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.

Matinee Trailer  release
ಮ್ಯಾಟ್ನಿ ಟ್ರೇಲರ್ ರಿಲೀಸ್ ಈವೆಂಟ್
author img

By ETV Bharat Karnataka Team

Published : Mar 28, 2024, 2:30 PM IST

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ 'ಮ್ಯಾಟ್ನಿ' ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮ್ಯಾಟ್ನಿ ಟ್ರೇಲರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದರು. ದರ್ಶನ್ ಜೊತೆ ಡಾಲಿ ಧನಂಜಯ್‌ ಕೂಡ ಉಪಸ್ಥಿತರಿದ್ದರು.

  • " class="align-text-top noRightClick twitterSection" data="">

ಈವರೆಗೆ ತೆರೆ ಮೇಲೆ ಕ್ಯೂಟ್ ಆ್ಯಂಡ್ ರೊಮ್ಯಾಂಟಿಕ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ಮೊದಲ ಬಾರಿಗೆ ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಎದುರು ಬರಲು ಸಜ್ಜಾಗಿದ್ದಾರೆ. ಸತೀಶ್ ನಿನಾಸಂ ಕೂಡ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೇಲರ್ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾದಲ್ಲಿ ಯಾರು ಡೆವಿಲ್ ಎನ್ನುವುದೇ ಕುತೂಹಲ ಕೆರಳಿಸಿರುವ ಅಂಶ.

ನಟ ಸತೀಶ್ ನಿನಾಸಂ ಮಾತನಾಡಿ, ''ಯಾಕೋ ಮ್ಯಾಟ್ನಿ ಸಿನಿಮಾ ಇನ್ನೂ ರಿಲೀಸ್ ಮಾಡಿಲ್ಲ. ಮೊದ್ಲು ರಿಲೀಸ್ ಮಾಡಿ ಎಂದು ದರ್ಶನ್ ಹೇಳಿದ್ದರು. ಆಗ ಟ್ರೇಲರ್ ಲಾಂಚ್​ಗೆ ಬರಲೇಬೇಕು ಅಂತ ಕೇಳಿಕೊಂಡಿದ್ದೆ. ರಚಿತಾ ಕೂಡ ಮಾತನಾಡಿದ್ದರು. ನಿಮಗಾಗಿ ಹಾಗೂ ರಚಿತಾ ಅವರಿಗಾಗಿ ಖಂಡಿತ ಬರುತ್ತೇನೆ ಎಂದಿದ್ದರು. ಗೆಳೆಯ ಡಾಲಿ ಕೂಡ ಇದ್ದಾರೆ. ಈ ಮೂಲಕ ಮ್ಯಾಟ್ನಿಗೆ ದೊಡ್ಡ ಶಕ್ತಿ ಸಿಕ್ಕಿದೆ. ದೊಡ್ಡ ಮಟ್ಟದಲ್ಲಿ ರೀಚ್ ಆಗುತ್ತಿದೆ'' ಎಂದು ತಿಳಿಸಿದರು.

Matinee Trailer  release
ಮ್ಯಾಟ್ನಿ ಟ್ರೇಲರ್ ರಿಲೀಸ್ ಈವೆಂಟ್

ನಟಿ ರಚಿತಾ ರಾಮ‌್ ಮಾತನಾಡಿ, "ನನ್ನ ಸಿನಿಮಾದ ಟ್ರೇಲರ್ ಅನ್ನು ಮೊದಲ ಬಾರಿಗೆ ದರ್ಶನ್ ಸರ್ ಲಾಂಚ್ ಮಾಡಿದ್ದಾರೆ. ಬಹಳ ಖುಷಿ ಹಾಗೂ ಹೆಮ್ಮೆಯಾಗುತ್ತಿದೆ. ನಾನು ತೂಗುದೀಪ ಬ್ಯಾನರ್​ನಿಂದ ಲಾಂಚ್ ಆದವಳು. ಹತ್ತು ವರ್ಷದ ಬಳಿಕ ನನ್ನ ಸಿನಿಮಾದ ಟ್ರೇಲರ್ ಲಾಂಚ್​​ಗೆ ಸುದೀಪ್​ ಸರ್ ಬಂದಿದ್ದು, ಬಹಳ ಖುಷಿ ಕೊಟ್ಟಿದೆ. ವೇದಿಕೆ ಮೇಲೆ ಇರುವ ಡಾಲಿ, ಸತೀಶ್, ದರ್ಶನ್ ಸರ್ ಈ ಮೂವರು ಕಲಾವಿದರ ಜೊತೆ ನಾನು ಕೆಲಸ ಮಾಡಿದ್ದು, ಹೆಮ್ಮೆಯ ವಿಚಾರ. ಮ್ಯಾಟ್ನಿ ಸಿನಿಮಾ ವೀಕ್ಷಿಸಿ" ಎಂದು ಕೇಳಿಕೊಂಡರು.

ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆಯ ನ್ಯೂನತೆಗಳ ಮೇಲೆ ಬೆಳಕು ಚೆಲ್ಲುವ 'ಸ್ಕ್ಯಾಮ್ 1770': ಟ್ರೇಲರ್ ನೋಡಿ - Scam 1770 Trailer

ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿ, "ಮ್ಯಾಟ್ನಿ ಸಿನಿಮಾ ಏಪ್ರಿಲ್ 5ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನೀನಾಸಂನಿಂದ ಬಂದು ಸಿನಿಮಾ ರಂಗದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿಕೊಂಡು ಸತೀಶ್​ ಇಲ್ಲಿವರೆಗೂ ಬಂದಿದ್ದಾರೆ. ಈ ಜರ್ನಿ ತುಂಬಾ ದೊಡ್ಡದು. ಇನ್ನೂ ನಾಯಕಿಯಾಗಿ ಹತ್ತು ವರ್ಷಗಳಿಂದ ಸಿನಿಮಾರಂಗದಲ್ಲಿ ಇದ್ದು, ಸಕ್ಸಸ್ ಆಗೋದು ಅಂದ್ರೆ ಸುಮ್ಮನೆ ಅಲ್ಲ. ಶ್ರಮ ಕಾಣುತ್ತಿದೆ" ಎಂದು ತಿಳಿಸಿದರು.

Matinee Trailer  release
ಮ್ಯಾಟ್ನಿ ಟ್ರೇಲರ್ ರಿಲೀಸ್ ಈವೆಂಟ್

ಇದನ್ನೂ ಓದಿ: ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಪಾರು ಧಾರವಾಹಿಯ ಆದಿ: 'ಅನಿಮಾ' ಟೈಟಲ್ ಪೋಸ್ಟರ್ ರಿಲೀಸ್ - Anima Poster

ಚಿತ್ರದಲ್ಲಿ ಸತೀಶ್, ರಚಿತಾ ರಾಮ್ ಸೇರಿದಂತೆ ಅದಿತಿ ಪ್ರಭುದೇವ, ಶಿವರಾಜ್ ಕೆ.ಆರ್.ಪೇಟೆ, ನಾಗಭೂಷಣ್, ಪೂರ್ಣ ಮೈಸೂರು, ದಿಗಂತ್ ದಿವಾಕರ್, ತುಳಸಿ ಶಿವರಾಮ್ ತಬಲ ನಾಣಿ ಹೀಗೆ ಸಾಕಷ್ಟು ಕಲಾವಿದರು ಅಭಿನಯ ಮಾಡಿದ್ದಾರೆ. ಸಿನಿಮಾವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು, ಪಾರ್ವತಿ ಗೌಡ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ , ಸುಧಾಕರ್ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಾಹಣವಿದೆ. ಇನ್ನೂ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಲಿಸ್ಟ್ ಸೇರಿದ್ದು, ಟ್ರೇಲರ್ ಕೂಡ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ. ಏಪ್ರಿಲ್ 5ಕ್ಕೆ ಮ್ಯಾಟ್ನಿ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.