ETV Bharat / entertainment

ಡಬ್ಬಿಂಗ್​ನಲ್ಲಿ ಬ್ಯುಸಿಯಾದ ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2 ಚಿತ್ರ: ಏನಂತಾರೆ ಡೈರೆಕ್ಟರ್?​ - Sanju Weds Geetha 2

author img

By ETV Bharat Karnataka Team

Published : Apr 12, 2024, 7:06 AM IST

ಕನ್ನಡದ ಸ್ಟಾರ್​ ಡೈರೆಕ್ಟರ್​ ಸಾಲಿನಲ್ಲಿ ನಿಲ್ಲುವ ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2 ಚಿತ್ರ ತಂಡವು ಡಬ್ಬಿಂಗ್​​​ನಲ್ಲೂ ಬ್ಯುಸಿಯಾಗಿದೆ.

ಸಂಜು ವೆಡ್ಸ್ ಗೀತಾ 2 ಚಿತ್ರ
ಸಂಜು ವೆಡ್ಸ್ ಗೀತಾ 2 ಚಿತ್ರ

ಕನ್ನಡ ಚಿತ್ರರಂಗಕ್ಕೆ ಅದ್ಭುತ ಪ್ರೇಮಕಥೆಗಳನ್ನು ಕೊಟ್ಟಂಥ ನಿರ್ದೇಶಕರಲ್ಲಿ ನಟ ಹಾಗೂ ನಿರ್ದೇಶಕ ನಾಗಶೇಖರ್ ಕೂಡ ಒಬ್ಬರು. ನಾಗಶೇಖರ್ ಸಾರಥ್ಯದಲ್ಲಿ ದಶಕದ ಹಿಂದೆ ಮೂಡಿ ಬಂದಿದ್ದ ಸಂಜು ವೆಡ್ಸ್ ಗೀತಾ ಚಿತ್ರ ಕಥೆ ಹಾಡುಗಳಿಂದಲೇ ಜನಪ್ರಿಯವಾಗಿತ್ತು. ಈಗ ಅದೇ ಹೆಸರಿನಲ್ಲಿ ಪಾರ್ಟ್ 2 ಮಾಡುತ್ತಿರುವ ನಿರ್ದೇಶಕ ನಾಗಶೇಖರ್ ಮತ್ತೊಂದು ಪ್ರೇಮಕಥೆ ಹೇಳ ಹೊರಟಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ಇಲ್ಲಿ ರಮ್ಯಾ ಬದಲು ರಚಿತಾರಾಮ್ ನಾಯಕಿಯಾಗಿದ್ದಾರೆ. ಸದ್ಯ ಈ ಚಿತ್ರದ 3 ಹಂತಗಳ ಚಿತ್ರೀಕರಣ ಹಾಗೂ ಎಡಿಟಿಂಗ್ ಮುಗಿದಿದ್ದು, ಸಾಧು ಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸಕ್ಕೆ ಚಾಲನೆ ನೀಡಲಾಗಿದೆ.

ಸಂಜು ವೆಡ್ಸ್ ಗೀತಾ 2 ಚಿತ್ರ
ಸಂಜು ವೆಡ್ಸ್ ಗೀತಾ 2 ಚಿತ್ರ

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನಾಗಶೇಖರ್, ನಮ್ಮ ಚಿತ್ರ ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕರ ಸಹಕಾರವೇ ಕಾರಣ. ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿ, ನಂತರ ಸ್ವಿಟ್ಜರ್​ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್​ಗಳಲ್ಲಿ ಶೂಟ್ ಮಾಡಿಕೊಂಡು ಬಂದೆವು. ಈಗಾಗಲೇ ಮೂರನೇ ಹಂತ ಮುಗಿಸಿದ್ದು, ಈ ಶುಕ್ರವಾರದಿಂದ ನಾಲ್ಕನೇ ಹಂತದ ಚಿತ್ರೀಕರಣವನ್ನು ಶುರು ಮಾಡುತ್ತಿದ್ದೇವೆ ಎಂದರು.

ಶಿಡ್ಲಘಟ್ಟ ರೇಷ್ಮೆಗೆ ದೊಡ್ಡ ಮಾರ್ಕೆಟ್ ಇದೆ. ನಮ್ಮ ರೇಷ್ಮೆ ನೂಲಿಗೆ ಒಳ್ಳೆ ಬೆಲೆ ಬೇಕು ಅಂತ ಹೋರಾಡುವ ಇಬ್ಬರು ಪ್ರೇಮಿಗಳ ಕಥೆ ಈ ಚಿತ್ರದಲ್ಲಿದೆ. ಆರ್ಟಿಫೀಷಿಯಲ್ ಲವ್​ಸ್ಟೋರಿ ಮಾಡೋದಕ್ಕಿಂತ ನಮ್ಮ ಮಣ್ಣಿನ ಹೋರಾಟದ ಕಥೆ ಹೇಳಬೇಕು ಎಂದು ಈ ಸಿನಿಮಾ ಮಾಡಿದ್ದೇನೆ. ನಮ್ಮ ಚಿತ್ರದಲ್ಲಿ ಹಾಡುಗಳೇ ಹೈಲೈಟ್. ಹಾಡು ಕೇಳಿದವರೆಲ್ಲ‌ ಮೆಚ್ಚಿಕೊಂಡಿದ್ದಾರೆ. ಚಿತ್ರ ಶುರುವಾದಾಗಲೇ ಆನಂದ್ ಆಡಿಯೋದವರು ರೈಟ್ಸ್ ತಗೊಂಡಿದ್ದಾರೆ. ಒಂದು ಹಾಡು ಬಳಸಿಕೊಂಡಿರುವ ಬಗ್ಗೆ ಲಹರಿ ಜೊತೆ ಮಾತುಕತೆ ನಡೆಯುತ್ತಿದೆ. ನಮ್ಮ ಸಿನಿಮಾಗೆ ಕಾಂಟ್ರಿವರ್ಸಿ ಪ್ರಚಾರ ಬೇಕಿಲ್ಲ. ಕಿಟ್ಟಿ, ರಚ್ಚು ಪರ್ಫಾರ್ಮನ್ಸ್ ತುಂಬಾ ಚೆನ್ನಾಗಿ ಬಂದಿದೆ. ಜೂನ್ ವೇಳೆಗೆ ಬರಲೇಬೇಕು ಎಂಬ ಹಠದಿಂದ ಕೆಲಸ ಮಾಡುತ್ತಿದ್ದೇವೆ ಮೇ ಎಂಡ್ ಫಸ್ಟ್ ಕಾಪಿ ಬರುತ್ತದೆ ಎಂದು ನಾಗಶೇಖರ್​ ಹೇಳಿದರು.

ನಂತರ ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ ಚಿತ್ರದಲ್ಲಿ ಮಾತುಗಳಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಸ್ವಲ್ಪ ಮುಂಚೆಯೇ ಡಬ್ಬಿಂಗ್ ಶುರು ಮಾಡುತ್ತಿದ್ದೇವೆ. ಚಿತ್ರದಲ್ಲಿ ತುಂಬಾ ಮೆಲೋಡಿಯಸ್ ಹಾಡುಗಳಿವೆ. ಮತ್ತೊಂದು ಅದ್ಭುತ ಪ್ರೇಮಕಾವ್ಯ ಇದಾಗಲಿದೆ ಎಂದರು. ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ 40 ದಿನ ಶೂಟಿಂಗ್ ಮಾಡಿದ್ದೇವೆ. ಎಲ್ಲೂ ಸಹ ತೊಂದರೆಯಾಗದೇ, ಸರಾಗವಾಗಿ ಶೂಟಿಂಗ್ ಮಾಡಿಕೊಂಡು ಬಂದಿದ್ದೇವೆ. ಹಾಸನದಲ್ಲಿ ಆಡಿಯೋ ರಿಲೀಸ್ ಮಾಡುವ ಪ್ಲಾನ್ ಇದೆ ಎಂದರು.

ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅಲ್ಲದೇ ರಾಗಿಣಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ‌ ಶ್ರೀಧರ ವಿ. ಸಂಭ್ರಮ 5 ಸುಂದರ ಟ್ಯೂನ್ ಕಂಪೋಜ್ ಮಾಡಿದ್ದು ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ಹಾಡಿದ್ದಾರೆ. ಸದ್ಯ ಒಂದಲ್ಲ ಒಂದು ವಿಚಾರಕ್ಕೆ ಗಮನ ಸೆಳೆಯುತ್ತಿರೋ ಸಂಜು ವೆಡ್ಸ್ ಗೀತಾ 2 ಚಿತ್ರ ಎಲೆಕ್ಷನ್ ಮುಗಿದ ಮೇಲೆ‌ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ : ಝೈದ್ ಖಾನ್ 2ನೇ ಸಿನಿಮಾ ಅನೌನ್ಸ್: 'ಕಲ್ಟ್'ನಲ್ಲಿ 'ಬನಾರಸ್' ಹುಡುಗ - Cult Movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.