ETV Bharat / entertainment

ಸೆಕೆಂಡ್ ಹ್ಯಾಂಡ್ ಬಟ್ಟೆಗಳ ಮೇಲೆ ಬೆಳಕು ಚೆಲ್ಲುವ 'ಲಂಗೋಟಿ ಮ್ಯಾನ್​​' ಬಿಡುಗಡೆ - Langoti Man - LANGOTI MAN

ಸಂಜೋತ ಭಂಡಾರಿ ನಿರ್ದೇಶನದ 'ಲಂಗೋಟಿ ಮ್ಯಾನ್' ಇಂದು ತೆರೆಕಂಡಿದೆ. ಮೊದಲ ದಿನ ಪ್ರೇಕ್ಷಕರಿಂದ ಬಹುತೇಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

'Langoti Man' Release
ಸಂಜೋತ ಭಂಡಾರಿ ನಿರ್ದೇಶನದ 'ಲಂಗೋಟಿ ಮ್ಯಾನ್' ರಿಲೀಸ್​​ (ETV Bharat)
author img

By ETV Bharat Karnataka Team

Published : Sep 20, 2024, 6:34 PM IST

ಕನ್ನಡ ಚಿತ್ರರಂಗದಲ್ಲಿ ಮನರಂಜನೆ ಜೊತೆ ಜೊತೆಗೆ ಕಂಟೆಂಟ್ ಆಧಾರಿತ ಚಿತ್ರಗಳನ್ನು ಸಿನಿಪ್ರೇಮಿಗಳು ಗೆಲ್ಲಿಸಿದ್ದಾರೆ ಅನ್ನೋದಕ್ಕೆ ಭೀಮ, ಕೃಷ್ಣಂ ಪ್ರಣಯ ಸಖಿ, ಪೌಡರ್ ಚಿತ್ರಗಳೇ ಸಾಕ್ಷಿ. ಈ ಸಾಲಿಗೀಗ 'ಲಂಗೋಟಿ ಮ್ಯಾನ್' ಸಿನಿಮಾ ಹೊಸ ಸೇರ್ಪಡೆ. ಯುವ ನಟ ಆಕಾಶ್ ರಾಂಬೋ ಅಭಿನಯದ ಹಾಗೂ ಮಹಿಳಾ ನಿರ್ದೇಶಕಿ ಸಂಜೋತ ಭಂಡಾರಿ ನಿರ್ದೇಶನದ 'ಲಂಗೋಟಿ ಮ್ಯಾನ್' ಚಿತ್ರ ಸೆಕೆಂಡ್ ಹ್ಯಾಂಡ್ ಬಟ್ಟೆಗಳ ಮಾಫಿಯಾ ಕಥೆಯನ್ನು ಒಳಗೊಂಡಿದ್ದು, ಮೊದಲ ದಿನ ಪ್ರೇಕ್ಷಕರಿಂದ ಬಹುತೇಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಯೋಗರಾಜ್ ಭಟ್​ ಧ್ವನಿಯಲ್ಲಿ ಪಾತ್ರ ಪರಿಚಯ: ವಿಕಟಕವಿ ನಿರ್ದೇಶಕ ಯೋಗರಾಜ್ ಭಟ್ ಧ್ವನಿಯಲ್ಲಿ ಪಾತ್ರಗಳ ಪರಿಚಯದಿಂದ ಆರಂಭವಾಗುವ 'ಲಂಗೋಟಿ ಮ್ಯಾನ್' ಚಿತ್ರ ಮಡಿವಂತಿಕೆಯ ಕುಟುಂಬದಲ್ಲಿ ಲಂಗೋಟಿ ಎಷ್ಟು ಮುಖ್ಯವಾದದ್ದು ಎಂಬುದನ್ನು ತೋರಿಸಲಾಗಿದೆ. ನಿರ್ದೇಶಕಿ ಸಂಜೋತ ಭಂಡಾರಿ ಯಾವುದೇ ಸಮುದಾಯಕ್ಕೆ ಅವಮಾನ ಆಗದಂತೆ ಕಥೆ ಕಟ್ಟಿಕೊಟ್ಟಿದ್ದಾರೆ.

ಸಂಜೋತ ಭಂಡಾರಿ ನಿರ್ದೇಶನದ 'ಲಂಗೋಟಿ ಮ್ಯಾನ್' ರಿಲೀಸ್​​ (ETV Bharat)

ಹೀಗಿದೆ ಚಿತ್ರದ ಕಥೆ: 'ಲಂಗೋಟಿ ಮ್ಯಾನ್' ತಾತ ಮೊಮ್ಮಗನ ಸುತ್ತ ನಡೆಯುವ ಕಥೆ. ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕೆಂಬುದು ತಾತನ ನಿಯಮ. ಮೊಮ್ಮಗ ಅಂದ್ರೆ ಆಕಾಶ್ ರಾಂಬೋಗೆ ಅಂಡರ್​​ವೇರ್ ಹಾಕಿಕೊಳ್ಳುವ ಆಸೆ. ತಾತನ ಪಾತ್ರದಲ್ಲಿ ಅಭಿನಯಿಸಿರುವ ಧೀರೇಂದ್ರ ಎಸ್ ಮೊಮ್ಮಗನಿಗೆ ಅಂಡರ್​​ವೇರ್ ಹಾಕಲು ಬಿಡೋದಿಲ್ಲ. ತಾತನ ಮಾತಿಗೆ ತಲೆ ಕೆಡಿಸಿಕೊಳ್ಳದೇ ಬ್ರ್ಯಾಂಡೆಡ್ ಅಂಡರ್​ವೇರ್ ಹಾಕೋದನ್ನು ಮೊಮ್ಮಗ ನಿಲ್ಲಿಸಲ್ಲ. ಹೀಗೆ ಅಂಡರ್​​​ವೇರ್​ ಹಾಕಿದಾಗ ಅತ್ಯಾಚಾರ ಹಾಗೂ ಕೊಲೆ ಆರೋಪಕ್ಕೆ ಹೇಗೆ ಗುರಿಯಾಗುತ್ತಾನೆ? ಈ ಸಮಸ್ಯೆಗಳಿಂದ ಹೇಗೆ ಹೊರಗಡೆ ಬರುತ್ತಾನೆ ಅನ್ನೋದು ಈ ಚಿತ್ರದ ಸ್ಟೋರಿ.

ಈ ಹಿಂದೆ ಮಿರ್ಚಿ ಮಂಡಕ್ಕಿ ಖಡಕ್ ಚಾಯ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಂಜೋತ ಭಂಡಾರಿ ಅವರು ಫಸ್ಟ್ ಕಾಪಿ ಹೆಸರಲ್ಲಿ ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಬಟ್ಟೆ ಮಾಫಿಯಾ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆದರೆ ಸಿನಿಮಾದ ಡ್ಯುರೇಷನ್ ಹಾಗೂ ಆಗಾಗ್ಗೆ ಬರುವ ಸೀನ್ಸ್ ನೋಡಿದ್ರೆ ಕಥೆ ಹೇಳುವ ಶೈಲಿ ಕೊಂಚ ಹಿನ್ನಡೆಯಾದಂತಿದೆ.

ಇದನ್ನೂ ಓದಿ: ಬಚ್ಚನ್​​ ಕುಟುಂಬದೊಂದಿಗಿನ ಐಶ್ವರ್ಯಾ ರೈ ಫೋಟೋಗಳಿವು: ಮರೆಯಾದ ಕ್ಷಣಗಳ ಮೆಲುಕು - Bachchan Family

ಮೊಮ್ಮಗನ ಪಾತ್ರದಲ್ಲಿ ಆಕಾಶ್ ರಾಂಬೋ ಅವರ ಅಭಿನಯ ಚೆನ್ನಾಗಿದೆ. ಆಕಾಶ್ ಜೋಡಿಯಾಗಿ ಸ್ನೇಹ ಖುಷಿ ಗ್ಲ್ಯಾಮರ್ ರೋಲ್​​ನಲ್ಲಿ ಮಿಂಚಿದ್ದಾರೆ. ಉಳಿದಂತೆ ಸಂಹಿತ ವಿನ್ಯಾ, ಗಿಲ್ಲಿ ನಟ ಸಾಯಿ ಪವನ್ ಕುಮಾರ್, ಮಹಾಲಕ್ಷ್ಮೀ ಕೊಟ್ಟ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಕಾಮಿಡಿ ಮಾಡುತ್ತಾ ಗುರುತಿಸಿಕೊಂಡಿರುವ ಹುಲಿ ಕಾರ್ತಿಕ್​​ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಮಗು ಯಾರನ್ನು ಹೋಲುತ್ತದೆ? ದೀಪಿಕಾ ರಣ್​​​ವೀರ್​​ ಬಾಲ್ಯದ ಫೋಟೋಗಳು ವೈರಲ್​​​ - Deepika Ranveer

ಚಿತ್ರಕ್ಕೆ ರವಿವರ್ಮಾ ಕ್ಯಾಮರಾ ವರ್ಕ್ ಇದ್ದು, ಸಂಗೀತ ನಿರ್ದೇಶಕ ಸುಮಿತ್ ಅವರ ಹಿನ್ನೆಲೆ ಸಂಗೀತ ಚೆನ್ನಾಗಿದೆ. ತನು ಟಾಕೀಸ್ ಬ್ಯಾನರ್ ಅಡಿ ನಿರ್ಮಾಣ ಆಗಿರುವ ಲಂಗೋಟಿ ಮ್ಯಾನ್ ಚಿತ್ರದಲ್ಲಿ ಒಂದೊಳ್ಳೆ ಸಂದೇಶ ಇದ್ದು, ಎಂಟರ್​ಟೈನಿಂಗ್​ ಆಗಿದೆ. ಮೆಜೆಸ್ಟಿಕ್ ಸಮೀಪ ಇರುವ ತ್ರಿವೇಣಿ ಚಿತ್ರಮಂದಿರದಲ್ಲಿ ನಿರ್ದೇಶಕಿ ಸಂಜೋತಾ ಭಂಡಾರಿ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಖುಷಿ ಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.