ETV Bharat / entertainment

ಮಹಿಳಾ ಪ್ರಧಾನ 'ತಪಸ್ಸಿ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ - Tapassi

ರವಿಚಂದ್ರನ್ ನಟನೆಯ 'ತಪಸ್ಸಿ' ಚಿತ್ರದ ಕೆಲ ಮಾಹಿತಿ ಇಲ್ಲಿದೆ.

Tapassi
'ತಪಸ್ಸಿ' ಚಿತ್ರತಂಡ
author img

By ETV Bharat Karnataka Team

Published : Mar 19, 2024, 8:02 PM IST

ಸ್ಯಾಂಡಲ್​ವುಡ್​ನ ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಮಹಿಳಾ ಪ್ರಧಾನ ಸಿನಿಮಾದ ಶೀರ್ಷಿಕೆ 'ತಪಸ್ಸಿ'. ಚಿತ್ರಕ್ಕೆ ಸ್ಪೆನ್ಸರ್ ಮ್ಯಾಥ್ಯೂ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇತ್ತೀಚೆಗೆ 'ತಪಸ್ಸಿ' ಚಿತ್ರ ಸೆಟ್ಟೇರಿದ್ದು, ಚಿತ್ರತಂಡ ಕೆಲ ಮಾಹಿತಿ ಹಂಚಿಕೊಂಡಿದೆ.

Tapassi
'ತಪಸ್ಸಿ' ಚಿತ್ರತಂಡ

ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ ನಟ ರವಿಚಂದ್ರನ್, ಮಹಿಳಾ ಪ್ರಧಾನ ಚಿತ್ರವಿದು. ಈ ಸಿನಿಮಾ ಮಾಡಿ ಮುಗಿಸಿದ್ದಾರೆ. ನನ್ನ ಭಾಗದ ಚಿತ್ರೀಕರಣವಷ್ಟೇ ಬಾಕಿ ಇದೆ. ಅದನ್ನು ಆರೇಳು ತಿಂಗಳಿನಿಂದ ನೀವೇ ಮಾಡಬೇಕು ಎಂಬ ಹಠ ಹಿಡಿದಿದ್ದಾರೆ. ಮ್ಯಾಥ್ಯೂ ನನಗೆ ಬಹಳ ಕ್ಲೋಸ್ ಫ್ರೆಂಡ್. ಬಹಳ ಶಿಸ್ತಿನಿಂದ ನಡೆದುಕೊಳ್ಳುವ ವ್ಯಕ್ತಿ. ರವಿ ಬೋಪಣ್ಣ ಸಿನಿಮಾದಿಂದ ನನಗೆ ಪರಿಚಯ. ಅದಕ್ಕೂ ಮುಂಚೆಯಿಂದಲೂ ಗಾಂಧಿನಗರದಲ್ಲಿ ಇದ್ದಾರೆ. ಅವರೇ ಈ ಸ್ಟೋರಿ ಮಾಡಿದ್ದಾರೆ. ನೀವೇ ಮಾಡಬೇಕು. ಒಂದು ಸಾಮಾಜಿಕ ಸಂದೇಶ ಸಾರಬೇಕು. ತೂಕವಾದ ಪಾತ್ರವಿದು. ಇಡೀ ಸಿನಿಮಾಗೆ ನ್ಯಾಯ ಒದಗಿಸಲು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.

Tapassi
'ತಪಸ್ಸಿ' ಚಿತ್ರತಂಡ

ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಮಾತನಾಡಿ, ರವಿಚಂದ್ರನ್ ಸರ್ ಅವರಿಂದಲೇ ಈ ಪ್ರಾಜೆಕ್ಟ್ ಶುರುವಾಗಿದೆ. ಹಾಗಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಚಿತ್ರದಲ್ಲಿ ಒಂದು ಸ್ಟ್ರಾಂಗ್ ಮೆಸೇಜ್ ಇದೆ. ಜನರಿಗೆ ಅದು ತಲುಪಬೇಕು ಎಂದರೆ ರವಿಚಂದ್ರನ್ ಸರ್ ಅಂತಹ ತಾಕತ್ತು ಇರುವ ವ್ಯಕ್ತಿ ಬಿಟ್ಟು ಬೇರೆ ಯಾರು ಇಲ್ಲ ಎನಿಸಿತು. ಇದು ಮಹಿಳಾ ಪ್ರಧಾನ ಸಿನಿಮಾ. ಇದರಲ್ಲಿ ಒಂದೊಳ್ಳೆ ಸಂದೇಶವಿದೆ ಎಂದರು.

Tapassi
'ತಪಸ್ಸಿ' ಚಿತ್ರತಂಡ

ಇದನ್ನೂ ಓದಿ : 14 ವರ್ಷಗಳ ನಂತರ ಕೇರಳಕ್ಕೆ ವಿಜಯ್ ಭೇಟಿ; ನಟನ ಕಾರು ಡ್ಯಾಮೇಜ್

ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಸಿನಿಮಾವಾಗಿರುವ ತಪಸ್ಸಿಯಲ್ಲಿ ಪ್ರಾಧ್ಯಾಪಕರಾಗಿ ಡಾಕ್ಟರ್ ವಿ ರವಿಚಂದ್ರನ್ ನಟಿಸ್ತಿದ್ದು, ಅಮ್ಮಯ್ರ ಗೋಸ್ವಾಮಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ವಿನಯ ಪ್ರಸಾದ್, ಪ್ರಜ್ವಲ್, ಸಚಿನ್, ಅನುಷ ಕಿಣಿ, ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಇದನ್ನೂ ಓದಿ : ವಿಯೆಟ್ನಾಂನಲ್ಲಿ 'ಕೃಷ್ಣಂ ಪ್ರಣಯ ಸಖಿ' ಚಿತ್ರೀಕರಣ ಪೂರ್ಣ: ಗಣೇಶ್​​ ಸಿನಿಮಾ ಬಗ್ಗೆ ಹೆಚ್ಚಿದ ಕುತೂಹಲ

ತಪಸ್ಸಿ ಸಿನಿಮಾಗೆ ವಿರೇಶ್ ಕ್ಯಾಮರಾ ಹಿಡಿಯುತ್ತಿದ್ದು, ಅರುಣ್.ಪಿ. ಥಾಮಸ್ ಸಂಕಲನ, ಆರವ್ರಿಷಿಕ್ ಸಂಗೀತ ನಿರ್ದೇಶನವಿರಲಿದೆ. ಬೆಂಗಳೂರು ಮೂವೀಸ್ ಲಾಂಛನದಲ್ಲಿ ಮೂಡಿ ಬರುತ್ತಿದೆ. ಸ್ಪೆನ್ಸರ್ ಮ್ಯಾಥ್ಯೂ ನಿರ್ದೆಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆರ್ ಗಂಗಾಧರ್ ಕಾರ್ಯಕಾರಿ ನಿರ್ಮಾಪಕನಾಗಿ ಸಾಥ್ ಕೊಟ್ಟಿದ್ದಾರೆ. ಬೆಂಗಳೂರು ಸುತ್ತಮುತ್ತ ತಪಸ್ಸಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.