ETV Bharat / entertainment

'ಮಠ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ

'ಮಠ' ಕನ್ನಡ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ
ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ (ETV Bharat)
author img

By ETV Bharat Karnataka Team

Published : Nov 3, 2024, 12:39 PM IST

Updated : Nov 3, 2024, 2:11 PM IST

ಬೆಂಗಳೂರು: ಸ್ಯಾಂಡಲ್​ವುಡ್​ ನಟ, ನಿರ್ದೇಶಕ ಗುರುಪ್ರಸಾದ್ (52) ಮಾದನಾಯಕಹಳ್ಳಿಯಲ್ಲಿರುವ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕೆಲ ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಗುರುಪ್ರಸಾದ್ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಅಪಾರ್ಟ್​ಮೆಂಟ್​ನಲ್ಲಿ ಗುರುಪ್ರಸಾದ್ ವಾಸವಾಗಿದ್ದರು. ಸುತ್ತಮುತ್ತಲಿನ ಮನೆಯ ನಿವಾಸಿಗಳಿಗೆ ಕೆಟ್ಟ ವಾಸನೆ ಬಂದ ಹಿನ್ನೆಲೆ ಮನೆಯನ್ನ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.

'ಮಠ' ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಗುರುಪ್ರಸಾದ್, 'ಎದ್ದೇಳು ಮಂಜುನಾಥ', 'ಡೈರೆಕ್ಟರ್ ಸ್ಪೆಷಲ್' ಸೇರಿದಂತೆ ಐದು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಜಗ್ಗೇಶ್ ನಟನೆಯ 'ರಂಗನಾಯಕ' ಇವರ ನಿರ್ದೇಶನದ ಕೊನೆಯ ಸಿನಿಮಾ ಆಗಿತ್ತು. 1972ರ ನವೆಂಬರ್ 2ರಂದು ಗುರುಪ್ರಸಾದ್ ಜನಿಸಿದ್ದರು. ನಿನ್ನೆ ಇವರ ಜನ್ಮದಿನವಿತ್ತು.

ಗುರುಪ್ರಸಾದ್ ಸಿನಿ ಜರ್ನಿ: 2006ರಲ್ಲಿ ಬಿಡುಗಡೆಯಾದ 'ಮಠ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ದೇಶಕರಾಗಿ ಗುರುಪ್ರಸಾದ್ ಎಂಟ್ರಿ ನೀಡಿದರು. ಈ ಚಿತ್ರ ಯಶಸ್ಸು ಗಳಿಸಿ, ನಿರ್ದೇಶಕರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. 2009ರಲ್ಲಿ 'ಎದ್ದೇಳು ಮಂಜುನಾಥ' ಸಿನಿಮಾ ನಿರ್ದೇಶಿಸಿದರು. ಈ ಚಿತ್ರವೂ ಕೂಡ ಭಾರಿ ಯಶಸ್ಸು ಗಳಿಸಿತು. 'ಎದ್ದೇಳು ಮಂಜುನಾಥ' ಸಿನಿಮಾಗೆ ಬೆಸ್ಟ್ ಡೈರೆಕ್ಟರ್ ಫಿಲ್ಮ್‌ಫೇರ್ ಪ್ರಶಸ್ತಿ ಬಂದಿತ್ತು. ಇವೆರಡೂ ಚಿತ್ರದಲ್ಲಿ ಜಗ್ಗೇಶ್ ನಾಯಕರಾಗಿ ನಟಿಸಿದ್ದರು. ಮಠ ಜಗ್ಗೇಶ್ ಅವರ 100ನೇ ಚಿತ್ರವಾಗಿತ್ತು.

18 ವರ್ಷದ ತಮ್ಮ ಸಿನಿಮಾ ವೃತ್ತಿ ಬದುಕಿನಲ್ಲಿ ಗುರುಪ್ರಸಾದ್ 5 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2006ರಲ್ಲಿ ಮಠ, 2009ರಲ್ಲಿ ಎದ್ದೇಳು ಮಂಜುನಾಥ, 2013ರಲ್ಲಿ ಡೈರೆಕ್ಟರ್ ಸ್ಪೆಷಲ್, 2017ರಲ್ಲಿ ಎರಡನೇ ಸಲ ಮತ್ತು 2024ರಲ್ಲಿ ರಂಗನಾಯಕ ಇವರು ನಿರ್ದೇಶಿಸಿದ ಸಿನಿಮಾಗಳು. ಮೊದಲೆರಡು ಸಿನಿಮಾ ಬಿಟ್ಟು ಉಳಿದು ಮೂರು ಚಿತ್ರಗಳು ಅಷ್ಟಾಗಿ ಸಕ್ಸಸ್ ಆಗಿರಲಿಲ್ಲ. ಈ ಮಧ್ಯೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಮಠ, ಎದ್ದೇಳು ಮಂಜುನಾಥ, ಹುಡುಗರು, ಜಿಗರ್​ಥಂಡಾ, ಅನಂತು ವರ್ಸಸ್ ನುಸ್ರತ್, ಬಡವ ರಾಸ್ಕಲ್, ಮೈಲಾರಿ ಸೇರಿದಂತೆ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.

ನಟ, ನಿರ್ದೇಶಕರಷ್ಟೇ ಅಲ್ಲದೇ ಸಿನಿಮಾಗಳಿಗೆ ಡೈಲಾಗ್ ರೈಟರ್ ಕೂಡ ಆಗಿದ್ದರು. ಪುನೀತ್ ರಾಜ್​ಕುಮಾರ್ ನಟನೆಯ ಹುಡುಗರು, ಉಪೇಂದ್ರ ಅಭಿನಯದ ಸೂಪರ್ ರಂಗ ಮತ್ತು ವಿಜಲ್ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು.

ಗುರುಪ್ರಸಾದ್ ಕಿರುತೆರೆಯಲ್ಲೂ ಸಕ್ರಿಯರಾಗಿದ್ದರು. ಹಲವು ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿದ್ದರು. 2014ರಲ್ಲಿ ಈಟಿವಿ ಕನ್ನಡ ವಾಹನಿಯಲ್ಲಿನ ಥಕ ದಿಮಿ ಥಾ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದರು. ಬಳಿಕ ವಿವಿಧ ಖಾಸಗಿ ವಾಹಿನಿಗಳಲ್ಲೂ ಕಾಣಿಸಿಕೊಂಡಿದ್ದರು. ರಿಯಾಲಿಟಿ ಶೋ ಬಿಗ್​ ಬಾಸ್‌ ಎರಡನೇ ಸೀಸನ್​ನಲ್ಲಿ ಸ್ಪರ್ಧಿಯಾಗಿದ್ದರು.

ಇದನ್ನೂ ಓದಿ: ಭಾರತದ ಖ್ಯಾತ ವಿನ್ಯಾಸಕಾರ ರೋಹಿತ್ ಬಾಲ್​​​ ​​ ಹೃದಯ ಸ್ತಂಭನದಿಂದ ನಿಧನ: ಕಂಬನಿ ಮಿಡಿದ ಫ್ಯಾಷನ್ ಲೋಕ!

Last Updated : Nov 3, 2024, 2:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.