ETV Bharat / entertainment

''ಲೆಕ್ಕವಿಲ್ಲದಷ್ಟು ಬಾರಿ ನನ್ನ ಮದುವೆ ಮಾಡಿಸಿಬಿಟ್ಟಿರಿ'': ಮದುವೆ ವದಂತಿ ಬಗ್ಗೆ ಅಸಮಧಾನಗೊಂಡ ನಟಿ ರಮ್ಯಾ - Ramya Reacts Wedding Rumors - RAMYA REACTS WEDDING RUMORS

ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ಮದುವೆ ಯಾವಾಗ? ಎಂಬ ಸುದ್ದಿ ಬಹಳ ದಿನಗಳಿಂದ ಇದೆ. ಎರಡ್ಮೂರು ದಿನಗಳ ಹಿಂದೆ ನಟಿಯ ಮದುವೆ ವದಂತಿ ಜೋರಾಗೇ ಹರಡಿತ್ತು. ಇದೀಗ ಸ್ವತಃ ನಟಿಯೇ ಈ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್​​ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

Actress Ramya
ನಟಿ ರಮ್ಯಾ (ETV Bharat)
author img

By ETV Bharat Karnataka Team

Published : Sep 11, 2024, 12:45 PM IST

ರಮ್ಯಾ, ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ನಂಬರ್​ ಒನ್​ ನಟಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಆದ ಸ್ಟಾರ್​ಡಮ್​ ಹೊಂದಿದ್ದರು. ಕನ್ನಡ ಚಿತ್ರರಂಗದ ಕೆಲವೇ ಬಹುಬೇಡಿಕೆ ನಟಿಯರಲ್ಲಿ ಇವರೂ ಕೂಡಾ ಒಬ್ಬರಾಗಿದ್ದರು. ಸದ್ಯ ಸಿನಿಮಾಗಳಿಂದ ದೂರವುಳಿದಿದ್ದರೂ ಕೂಡಾ ಜನಪ್ರಿಯತೆಗೇನು ಕಡಿಮೆ ಇಲ್ಲ. ಸದಾ ಒಂದಿಲ್ಲೊಂದು ವಿಚಾರಗಳ ಮೂಲಕ ಸದ್ದು ಮಾಡುವ ಮೋಹಕತಾರೆಯ ಮದುವೆ ವಿಚಾರ ಇತ್ತೀಚೆಗಷ್ಟೇ ಸಖತ್​​ ಸದ್ದು ಮಾಡಿತ್ತು.

ಹೌದು, ಎರಡ್ಮೂರು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾ ಅವರು ಶೀಘ್ರದಲ್ಲೇ ಮದುವೆ ಆಗುತ್ತಿದ್ದಾರೆ ಎಂಬ ವದಂತಿ ಜೋರಾಗೇ ಹರಡಿತ್ತು. ಈ ಬಗ್ಗೆ ನಟಿಯಾಗಲಿ ಅಥವಾ ಅವರ ತಂಡವಾಗಲಿ ಯಾವುದೇ ಅಧಿಕೃತ ಮಾಹಿತಿ ಕೊಡದಿದ್ದರೂ ಕೂಡಾ ನಿಶ್ಚಿತಾರ್ಥ ಮತ್ತು ಮದುವೆಗೆ ಸಂಬಂಧಿಸಿದಂತೆ ತರತರವಾದ ಊಹಾಪೋಹಳು ಹರಿದಾಡಿದ್ದವು. ಮದುವೆ ವದಂತಿ ಬಗ್ಗೆ ಅಸಮಾಧಾನಗೊಂಡಿರುವ ನಟಿ ರಮ್ಯಾ ಅವರೀಗ ಸೋಷಿಯಲ್​​ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್​ ಒಂದನ್ನು ಶೇರ್​​ ಮಾಡಿದ್ದಾರೆ.

Ramya IG Story
ನಟಿ ರಮ್ಯಾ ಇನ್​ಸ್ಟಾಗ್ರಾಮ್​ ಪೋಸ್ಟ್ (Ramya IG Story)

ರಮ್ಯಾ ಪ್ರತಿಕ್ರಿಯೆ: ವದಂತಿ ಉಲ್ಬಣಗೊಂಡ ಬೆನ್ನಲ್ಲೇ, ಮೌನ ಮುರಿಯಲು ತಮ್ಮ ಅಧಿಕೃತ ಇನ್​​​ಸ್ಟಾಗ್ರಾಮ್​ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಸ್ಟೋರಿ ಶೇರ್​​ ಮಾಡಿರುವ ನಟಿ, ''ಲೆಕ್ಕವಿಲ್ಲದಷ್ಟು ಬಾರಿ ಕೆಲ ಮಾಧ್ಯಮದವರು ನನ್ನ ಮದುವೆ ಮಾಡಿಸಿಬಿಟ್ಟಿದ್ದಾರೆ. ಒಂದು ವೇಳೆ ನಾನು ಯಾವಾಗಲಾದರು ಮದುವೆಯಾಗುವುದಾದರೆ ವಿಚಾರವನ್ನು ನಾನೇ ತಿಳಿಸುತ್ತೇನೆ. ಅಲ್ಲಿವರೆಗೆ ಅನಧಿಕೃತ ಮೂಲಗಳ ವದಂತಿಗೆ ಕಿವಿಗೊಡಬೇಡಿ ಎಂದು'' ಮನವಿ ಮಾಡಿಕೊಂಡಿದ್ದಾರೆ.

41ರ ಹರೆಯದ ನಟಿ ರಮ್ಯಾ ಸದ್ಯ ಸಿಂಗಲ್​ ಲೈಫ್​​ ಅನ್ನು ಸಖತ್​​ ಎಂಜಾಯ್​ ಮಾಡುತ್ತಿದ್ದಾರೆ. ಮೋಹಕತಾರೆ ರಮ್ಯಾ ಮದುವೆ ಯಾವಾಗ? ಎಂಬ ಪ್ರಶ್ನೆ ದೀರ್ಘ ಸಮಯದಿಂದ ಇದೆ. ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಅವರ ಫ್ಯಾನ್ಸ್​​ ಈ ಪ್ರಶ್ನೆಯನ್ನು ಎತ್ತುತ್ತಲೇ ಇರುತ್ತಾರೆ. ಇತ್ತೀಚೆಗೆ ಮತ್ತೆ ಮದುವೆ ಮಾತು ಶುರುವಾಗಿತ್ತು.

ಇದನ್ನೂ ಓದಿ: ಮೋಹಕತಾರೆ ರಮ್ಯಾ ಮದುವೆ ವದಂತಿ: 'ಇದು ಫೇಕ್'​​ ಎಂದ ನಟಿಯ ಆಪ್ತೆ - Ramya Wedding Rumors

ರಮ್ಯಾ ಎಂಗೇಜ್, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು. ಬೆಂಗಳೂರಿನ ರಾಯಲ್​ ಹೋಟೆಲ್​​ ಒಂದರಲ್ಲಿ ಎಂಗೇಜ್​ಮೆಂಟ್​​ ಪ್ರೋಗ್ರಾಮ್​ ನಡೆದಿದೆ. ಇದೊಂದು ಖಾಸಗಿ ಸಮಾರಂಭ ಆಗಿತ್ತು. ದೆಹಲಿ ಮೂಲದ ವರನೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಚೌಧರಿ ಗಾರ್ಮೆಂಟ್ಸ್ ಮಾಲೀಕ ಪ್ರಭವ್ ಚೌಧರಿ ಅವರನ್ನು ವರಿಸಲಿದ್ದಾರೆ ಎಂದೆಲ್ಲಾ ಗಾಳಿ ಸುದ್ದಿಗಳು ಹರಿದಾಡಿದ್ದವು. ಆದ್ರೆ ಈ ಬಗ್ಗೆ ನಟಿ ರಮ್ಯಾ ಅವರಾಗಲಿ ಅಥವಾ ಅವರ ತಂಡದವರಾಗಲಿ ಯಾವುದೇ ಅಧಿಕೃತ ಘೋಷಣೆ ಹೊರಡಿಸರಿರಲಿಲ್ಲ.

ಇದನ್ನೂ ಓದಿ: ದರ್ಶನ್ ಪ್ರಕರಣದ ಬಗ್ಗೆ ಜಾಣ್ಮೆಯ ಉತ್ತರ ಕೊಟ್ಟ ನಟ ರಮೇಶ್ ಅರವಿಂದ್: ವಿಡಿಯೋ ನೋಡಿ - Ramesh Aravind on Darshan

ಹಾಗಾಗಿ ಈಟಿವಿ ಭಾರತವು ನಟಿ ರಮ್ಯಾ ಅವರ ಆಪ್ತರನ್ನು ಸಂಪರ್ಕಿಸಿತ್ತು. ಅದಕ್ಕೆ, ಮದುವೆ ವದಂತಿಗಳನ್ನು ಅವರ ಆಪ್ತರು ಅಲ್ಲಗೆಳೆದಿದ್ದರು. ಆಪ್ತರೋರ್ವರು ಪ್ರತಿಕ್ರಿಯಿಸಿ 'ಇವು ಫೇಕ್'​​ ಎಂದು ಸ್ಪಷ್ಟಪಡಿಸಿದ್ದರು. ಈವರೆಗೆ ನಟಿಯ ಮದುವೆ ಸುದ್ದಿ ಹಲವು ಬಾರಿ ಸದ್ದು ಮಾಡಿದೆ. ಅವರ ಹೆಸರು ಕೆಲವರ ಜೊತೆ ಕೇಳಿಬಂದಿದೆ. ಆದ್ರೆ ಈವರೆಗೆ ನಟಿ ರಮ್ಯಾ ನಾನು ಮದುವೆ ಆಗುತ್ತಿದ್ದೇನೆಂದು ಎಲ್ಲೂ ಹೇಳಿಕೊಂಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.