ETV Bharat / entertainment

ಮೈಯೋಸಿಟಿಸ್​ ಪತ್ತೆಯಾಗುವ ಮುನ್ನ ನಿಜಕ್ಕೂ ಕಷ್ಟಕರ ಅನುಭವ: ಪಾಡಕಾಸ್ಟ್​​ನಲ್ಲಿ ಸಮಂತಾ ಮಾತು

author img

By ETV Bharat Karnataka Team

Published : Feb 20, 2024, 11:29 AM IST

ಸಾಕಷ್ಟು ಆರೋಗ್ಯ ಸಮಸ್ಯೆಗೆ ಗುರಿಯಾದ ನಟಿ ಸಮಂತಾ ರೋಗ ಪತ್ತೆಯಾಗುವ ಮುನ್ನ ಅನುಭವಿಸಿದ ಕಷ್ಟಗಳ ಕುರಿತು ಮಾತನಾಡಿದ್ದಾರೆ

Samantha Talks on her health issue on her podcast

ಹೈದರಾಬಾದ್​: ನಟಿ ಸಮಂತಾ ರುತ್​ ಪ್ರಭು ಮೈಯೋಸಿಟಿಸ್ ಆರೋಗ್ಯ ಸಮಸ್ಯೆ ಪತ್ತೆಯಾಗುವ ಮುನ್ನ ಅನುಭವಿಸಿದ ಆರೋಗ್ಯದ ಸವಾಲು ಮತ್ತು ನಂತರದಲ್ಲಿನ ಆಕೆಯ ಆರೋಗ್ಯ ಪರಿಸ್ಥಿತಿಗಳ ಕುರಿತು ಮಾತನಾಡಿದ್ದಾರೆ. ರೋಗ ಪತ್ತೆಗೆ ಮುನ್ನ ಆಕೆಯ ಅನುಭವ ಮತ್ತು ಚಿಕಿತ್ಸೆ ಬಳಿಕ ವರ್ಷಗಳ ನಂತರದಲ್ಲಿ ಅನುಭವಿಸಿದ ಶಾಂತತೆ ಕುರಿತು ತಮ್ಮ ಸ್ನೇಹಿತ, ಮ್ಯಾನೇಜರ್​​ ಹಿಮಾಂಕ್​ ಜೊತೆಗಿನ ಮಾತುಕತೆಯ ಸಂದರ್ಭವನ್ನು ಮೆಲುಕು ಹಾಕಿದ್ದಾರೆ.

"ನನಗೆ ಇನ್ನು ನೆನಪಿದೆ ಈ ಸಮಸ್ಯೆಯಾಗುವ ಒಂದು ವರ್ಷ ಮುಂಚೆ ನಾನು ತುಂಬಾ ಕಷ್ಟದಲ್ಲಿದ್ದೆ. ನನ್ನ ಸ್ನೇಹಿತ, ಮ್ಯಾನೇಜರ್​ ಹಿಮಾಂಕ್​ ಜೊತೆಗೆ ಮುಂಬೈನಿಂದ ಪ್ರಯಾಣಿಸಿದ ಆ ನಿರ್ದಿಷ್ಟದ ದಿನದ ಬಗ್ಗೆ ಹೆಚ್ಚು ನೆನಪಿದೆ. ಹಿಂದಿನ ವರ್ಷದ ಜೂನ್​ನಲ್ಲಿ ನಾನು ಇದೀಗ ಅಂತಿಮವಾಗಿ ಶಾಂತವಾಗಿದ್ದೇನೆ ಎಂದು ಆತನಿಗೆ ಹೇಳಿದ್ದೆ. ದೀರ್ಘಕಾಲದ ಬಳಿಕ ನನಗೆ ಕೊಂಚ ವಿಶ್ರಾಮದಾಯಕ ಮತ್ತು ಶಾಂತವಾದ ಅನುಭವವೂ ಉಂಟಾಯಿತು. ಅಂತಿಮವಾಗಿ ನಾನು ಉಸಿರಾಡುತ್ತಿರುವಂತೆ, ಸರಿಯಾಗಿ ನಿದ್ರೆಗೆ ಜಾರುವಂತೆ ಆಯಿತು. ಇದೀಗ ನಾನು ಆರಾಮಗೆ ಏಳಬಹುದು. ನನ್ನ ಕೆಲಸದ ಮೇಲೆ ಉತ್ತಮವಾಗಿ ಗಮನ ಹರಿಸಬಹುದು. ಇದೇ ಪರಿಸ್ಥಿತಿಯಲ್ಲಿಯೇ ಪ್ರತಿದಿನ ಏಳಬಹುದು ಎಂಬ ಅನುಭವ ಉಂಟಾಯಿತು" ಎಂದು ಸಮಂತಾ ತಿಳಿಸಿದ್ದಾರೆ.

  • " class="align-text-top noRightClick twitterSection" data="">

ತಮ್ಮ ಪಾಡ್​ಕಾ​ಸ್ಟ್​ ಸರಣಿ ಟೇಕ್​ 20ಯಲ್ಲಿ ಮಾತನಾಡಿರುವ ಅವರು, ತಮ್ಮ ಆರೋಗ್ಯದ ಪ್ರಯಾಣದ ಕುರಿತು ಚರ್ಚಿಸಿದ್ದಾರೆ. ಈ ವೇಳೆ, ತಾವು ಅನುಭವಿಸಿದ ಸಮಸ್ಯೆ ಕುರಿತು ಹೇಳುತ್ತಾ ಜನರು ಆರೋಗ್ಯ ಮತ್ತು ಸುರಕ್ಷತೆಗೆ ಒತ್ತು ನೀಡುವ ಅವಶ್ಯ ಎಂದಿದ್ದಾರೆ. ತಾವು ಪಾಡ್​ಕಾಸ್ಟ್​​​ ಮಾಡಲು ಪ್ರಮುಖ ಕಾರಣ ಎಂದರೆ, ಅನುಭವಿಸಿದ ಭಯಾನಕ ಅನುಭವ. ಈ ಸ್ವಯಂ ನಿರೋಧಕ ಸ್ಥಿತಿಯು ಜೀವಮಾನವಿಡೀ ಇರುತ್ತದೆ. ಇಂದಿಗೂ ಕೂಡ ಇವುಗಳ ವಿರುದ್ಧ ಹೋರಾಡುತ್ತಿದ್ದೇನೆ. ಜನರು ಕ್ಷಮಿಸುವುದಕ್ಕಿಂತ ಸುರಕ್ಷಿತವಾಗಿರಲು ನಾನು ಬಯಸುತ್ತೇನೆ ಎಂದರು.

ತಾವು ಮೈಯೋಸಿಟಿಸ್ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ನಟಿ ಸಮಂತಾ ಕಳೆದ ವರ್ಷ ಇನ್​​ಸ್ಟಾಗ್ರಾಂನಲ್ಲಿ ತಿಳಿಸಿದ್ದರು. ಇದರಿಂದಾಗಿ ತಮ್ಮ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ವೃತ್ತಿಯಿಂದ ಸಣ್ಣ ವಿರಾಮ ಪಡೆಯುವುದಾಗಿ ತಿಳಿಸಿದ್ದಾರೆ. ತಮ್ಮ ಈ ಆರೋಗ್ಯ ಪ್ರಯಾಣದಲ್ಲಿ ತಾವು ಎಷ್ಟು ದುರ್ಬಲತೆ ಅನುಭವಿಸಿದ್ದು, ಅದನ್ನು ಸವಾಲಾಗಿ ಸ್ವೀಕರಿಸಿದ್ದರ ಕುರಿತು ಕೂಡ ತಿಳಿಸಿದ್ದಾರೆ. ದುರ್ಬಲತೆಯನ್ನು ಸ್ವೀಕರಿಸುವುದಕ್ಕೆ ಇಂದೂ ಕೂಡ ಹೋರಾಡುತ್ತಿದ್ದೇನೆ ಎಂದಿದ್ದಾರೆ. ಆರೋಗ್ಯದ ಸಚಿವಾಲಯ ಹೊರತಾಗಿ ತಮ್ಮ ವೃತ್ತಿ ಜೀವನದಲ್ಲಿ ಹೊಸ ಯೋಜನೆಯೊಂದಿಗೆ ಮರಳುತ್ತಿರುವುದಾಗಿ ಇದೇ ವೇಳೆ, ಘೋಷಿಸಿದರು. ಆರೋಗ್ಯ ವಿಷಯ ಕುರಿತ ಪಾಡ್​​ಕಾಸ್ಟ್​ ಆರಂಭಿಸುವ ಬಗ್ಗೆ ಎಷ್ಟು ಒಲವನ್ನು ಹೊಂದಿರುವುದಾಗಿ ತಿಳಿಸಿದರು.

ಇದರ ಜೊತೆಗೆ ನಟಿ ಸಮಂತಾ ವರುಣ್​ ಧವನ್​ ಜೊತೆಗೆ ಸಿಟಾಡೆಲ್​ ವೆಬ್​ ಸಿರೀಸ್​ನಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ವ್ಯಾಲಂಟೈನ್​ ಡೇಗೆ ವಿಶೇಷ ಸಂದೇಶ ಹಂಚಿಕೊಂಡ ನಟಿ ಸಮಂತಾ ರುತ್​ ಪ್ರಭು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.