ETV Bharat / entertainment

ಸಮಂತಾಗೆ ಸ್ಫೂರ್ತಿ ಅಲ್ಲು ಅರ್ಜುನ್​: ನಟನನ್ನು ಕೊಂಡಾಡಿದ ಖ್ಯಾತ ನಟಿ - Samantha movies

ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​ ಬಗ್ಗೆ ಖ್ಯಾತ ನಟಿ ಸಮಂತಾ ರುತ್ ಪ್ರಭು ಗುಣಗಾನ ಮಾಡಿದ್ದಾರೆ.

Samantha Ruth Prabhu speaks about Allu Arjun
ಸಮಂತಾಗೆ ಸ್ಫೂರ್ತಿ ಅಲ್ಲು ಅರ್ಜುನ್
author img

By ETV Bharat Karnataka Team

Published : Mar 5, 2024, 6:43 PM IST

ಸಮಂತಾ ರುತ್ ಪ್ರಭು, ದಕ್ಷಿಣ ಚಿತ್ರರಂಗದ ಖ್ಯಾತ ನಟಿಯರಲ್ಲೊಬ್ಬರು ಕೊನೆಯದಾಗಿ, ಖುಷಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2023ರ ಸೆಪ್ಟೆಂಬರ್​​ 1ರಂದು ತೆರೆಕಂಡ ಈ ಚಿತ್ರ ಯಶಸ್ವಿ ಆಗಿತ್ತು. ಅದಾದ ಬಳಿಕ ನಟಿಯ ಯಾವುದೇ ಚಿತ್ರಗಳು ಬಿಡುಗಡೆ ಆಗಿಲ್ಲ. ಹೊಸ ಸಿನಿಮಾಗಳು ಕೂಡ ಘೋಷಣೆಯಾಗಿಲ್ಲ.

ಮಯೋಸಿಟಿಸ್ ಹಿನ್ನೆಲೆ, ವಿರಾಮದಲ್ಲಿದ್ದ ಸಮಂತಾ ರುತ್ ಪ್ರಭು ಶೀಘ್ರದಲ್ಲೇ ಸಿನಿಮಾ ಪ್ರಾರಂಭಿಸಲಿದ್ದು, ಸದ್ಯ ಪಾಡ್​ಕಾಸ್ಟ್ ಮೂಲಕ ತಮ್ಮ ಕೆಲಸ ಆರಂಭಿಸಿದ್ದಾರೆ. ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ತಮ್ಮ ಸಿನಿಪಯಣ ಮೆಲುಕುಹಾಕಿದರು. ಈ ವೇಳೆ, ನಟಿಯ ರೋಲ್ ಮಾಡೆಲ್ ಬಗ್ಗೆ ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮಂತಾ, ಅಲ್ಲು ಅರ್ಜುನ್ ನನ್ನ ಸ್ಫೂರ್ತಿಯ ಮೂಲ ಎಂಬುದಾಗಿ ಬಹಿರಂಗಪಡಿಸಿದರು. ತೆರೆ ಮೇಲಿನ ಅವರ ಬಹುಮುಖ ಪ್ರತಿಭೆ ಮತ್ತು ಕಲೆ ಮೇಲೆ ಅವರ ಸಮರ್ಪಣೆಯನ್ನು ನಟಿ ಶ್ಲಾಘಿಸಿದರು.

ಈ ಹಿಂದೆ ಸಮಂತಾ, ಅಲ್ಲು ಅರ್ಜುನ್‌ ಜೊತೆ ಎರಡು ಬಾರಿ ಕಾಣಿಸಿಕೊಂಡಿದ್ದಾರೆ. 2015ರ ಸನ್ ಆಫ್ ಸತ್ಯಮೂರ್ತಿ ಮತ್ತು ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ಪುಷ್ಪ: ದಿ ರೈಸ್‌ನ ಪಾಪ್ಯುಲರ್ ಸಾಂಗ್​​​ ಊ ಅಂಟಾವದಲ್ಲಿ ಕಾಣಿಸಿಕೊಂಡಿದ್ದರು. ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬುವ ನಟನ ನಟನಾ ಸಾಮರ್ಥ್ಯವನ್ನು ಸಮಂತಾ ಕೊಂಡಾಡಿದ್ದಾರೆ. ಅಲ್ಲು ಅರ್ಜುನ್​​ನನ್ನು "acting beast'' ಎಂದು ಉಲ್ಲೇಖಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮಾರ್ಗದರ್ಶನಕ್ಕಾಗಿ ಅಲ್ಲು ಅರ್ಜುನ್​​ ಕಡೆ ನೋಡುವುದಾಗಿ ಬಹಿರಂಗಪಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಮೇಲಿನ ಅಭಿಮಾನವನ್ನು ಒಪ್ಪಿಕೊಂಡಿದ್ದು ಮಾತ್ರವಲ್ಲದೇ, ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆಯೂ ದನಿ ಎತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಹೆಚ್ಚು ಸವಾಲುಗಳೆದುರಾದವು ಎಂಬುದನ್ನು ಒಪ್ಪಿಕೊಂಡರು. ಮಯೋಸಿಟಿಸ್ ಜೊತೆ ಹೋರಾಟ, ಆ ಕಾಯಿಲೆ ಸ್ನಾಯುಗಳ ಮೇಲೆ ಬೀರಿದ ಪರಿಣಾಮವನ್ನು ಬಹಿರಂಗಪಡಿಸಿದರು. ಇದೇ ಸಂದರ್ಭ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ನಟಿ ಆಗಾಗ್ಗೆ ಫಿಟ್ನೆಸ್ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೋಷಿಯಲ್​ ಮೀಡಿಯಾದಲ್ಲಿ ಸಲಹೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: ರಾಜಮೌಳಿ ಸಿನಿಮಾ: 8 ವಿಭಿನ್ನ ನೋಟದಲ್ಲಿ ಮಹೇಶ್​ ಬಾಬು; ವಿದೇಶದಲ್ಲಿ ನಡೆಯಲಿದೆ ಚಿತ್ರೀಕರಣ?!

ಇತ್ತೀಚೆಗೆ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 'ಟೇಕ್ 20' ಎಂಬ ಪಾಡ್‌ಕಾಸ್ಟ್ ಸೀರಿಸ್​​ ಲಾಂಚ್​ ಮಾಡಿದ್ದಾರೆ. ಇದು ಮಾನಸಿಕ ಆರೋಗ್ಯ ಮತ್ತು ಫಿಟ್ನೆಸ್​​ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿರುತ್ತದೆ. ಮುಂದೆ ಸಿಟಾಡೆಲ್‌ ಸೀರಿಸ್​ನಲ್ಲಿ ಬಾಲಿವುಡ್​ ನಟ ವರುಣ್ ಧವನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕಮಲ್ ಹಾಸನ್​​ರ 'ಥಗ್ ಲೈಫ್‌'ನಿಂದ ಹೊರಬಂದ ದುಲ್ಕರ್ ಸಲ್ಮಾನ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.