ETV Bharat / entertainment

ಬ್ರೆಸ್ಟ್ ಕ್ಯಾನ್ಸರ್​​ ವಿರುದ್ಧ ಹೋರಾಡುತ್ತಿರುವ ಹೀನಾ ಖಾನ್​ಗೆ ಧೈರ್ಯ ತುಂಬಿದ ಸಮಂತಾ ರುತ್ ಪ್ರಭು - Samantha on Hina Khan - SAMANTHA ON HINA KHAN

ಬ್ರೆಸ್ಟ್ ಕ್ಯಾನ್ಸರ್​​ ವಿರುದ್ಧ ಹೋರಾಡುತ್ತಿರುವ ಕಿರುತೆರೆ ನಟಿ ಹೀನಾ ಖಾನ್ ಅವರ​​ ವಿಡಿಯೋವೊಂದನ್ನು ಹಂಚಿಕೊಂಡ ಸೌತ್​ ಸ್ಟಾರ್ ನಟಿ ಸಮಂತಾ ರುತ್ ಪ್ರಭು, ನಿಮ್ಮೊಂದಿಗೆ ನನ್ನ ಪ್ರಾರ್ಥನೆಯಿದೆ ಎಂದು ತಿಳಿಸಿದ್ದಾರೆ.

Hina Khan and Samantha Ruth Prabhu
ಹೀನಾ ಖಾನ್, ಸಮಂತಾ ರುತ್ ಪ್ರಭು​ (Photo: Instagram)
author img

By ETV Bharat Karnataka Team

Published : Jul 2, 2024, 7:08 PM IST

ಕಿರುತೆರೆ ನಟಿ ಹೀನಾ ಖಾನ್ ಬ್ರೆಸ್ಟ್ ಕ್ಯಾನ್ಸರ್​​ ವಿರುದ್ಧ ಹೋರಾಡುತ್ತಿರುವುದು ನಿಮಗೆ ತಿದಿರುವ ವಿಚಾರವೇ. ಇತ್ತೀಚೆಗಷ್ಟೇ ಮೂರನೇ ಹಂತದ ಸ್ತನ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ, ಧೈರ್ಯದಿಂದ ಈ ಕಠಿಣ ಸಮಯ ಎದುರಿಸುವುದಾಗಿ ತಿಳಿಸಿದ್ದರು. ಜೊತೆಗೆ, ಅಭಿಮಾನಿಗಳಿಂದ ಬೆಂಬಲ, ಪ್ರಾರ್ಥನೆ, ಪ್ರೀತಿ ನಿರೀಕ್ಷಿಸಿದ್ದರು. ಇದೀಗ ಚಿತ್ರರಂಗದ ಗಣ್ಯರು ಸೋಷಿಯಲ್​ ಮೀಡಿಯಾ ಮೂಲಕ ಹೀನಾ ಖಾನ್​ಗೆ ಧೈರ್ಯ ತುಂಬೋ ಕೆಲಸ ಮಾಡುತ್ತಿದ್ದಾರೆ. ಜೊತೆಗೆ, ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

Samantha Instagram Story
ಸಮಂತಾ ರುತ್ ಪ್ರಭು​ ಇನ್​ಸ್ಟಾಗ್ರಾಮ್​ ಸ್ಟೋರಿ (Samantha Instagram)

ಅಪರೂಪದ ಕಾಯಿಲೆ ವಿರುದ್ಧ ಹೋರಾಡಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ತಮ್ಮ ಅಧಿಕೃತ ಇನ್​​ಸ್ಟಾಗ್ರಾಂ ​ ಸ್ಟೋರಿನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಹೀನಾ ಖಾನ್​ ಅವರ ವಿಡಿಯೋ ಇದಾಗಿದ್ದು, ರೀಪೋಸ್ಟ್ ಮಾಡಿದ್ದಾರೆ. ಜೊತೆಗೆ, "ಹೀನಾ ಖಾನ್​​ ನಿಮಗಾಗಿ ಪ್ರಾರ್ಥಿಸುತ್ತಿದ್ದೇನೆ, ವಾರಿಯರ್" ಎಂದು ಬರೆದುಕೊಂಡಿದ್ದಾರೆ

Hina Khan Instagram Story
ಹೀನಾ ಖಾನ್ ಇನ್​ಸ್ಟಾಗ್ರಾಮ್​ ಸ್ಟೋರಿ (Hina Khan Instagram)

ಸಮಂತಾ ಅವರ ಇನ್​​ಸ್ಟಾ ಸ್ಟೋರಿಯನ್ನು ರೀಶೇರ್ ಮಾಡಿದ ಹೀನಾ, ಜೀವನದ ಸವಾಲುಗಳನ್ನು ಎದುರಿಸುವಲ್ಲಿ ಸಮಂತಾ ಅವರ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಶ್ಲಾಘಿಸಿದ್ದಾರೆ. "ನೀವು ಪರಿಪೂರ್ಣ ಕಲಾವಿದೆ. ಜೀವನದ ಸವಾಲುಗಳನ್ನು ನಿಭಾಯಿಸಿದ ರೀತಿ ಅದ್ಭುತ. ನಿಮ್ಮನ್ನು ಪ್ರೀತಿಸುವೆ" ಎಂದು ಬರೆದುಕೊಂಡಿದ್ದಾರೆ. ಈ ಸೋಷಿಯಲ್​ ಮೀಡಿಯಾ ಪೋಸ್ಟ್​​ಗಳು, ಚಿತ್ರರಂಗದಲ್ಲಿ ಒಗ್ಗಟ್ಟು, ಬೆಂಬಲ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ.

ಇದನ್ನೂ ಓದಿ: ಹೀನಾ ಖಾನ್​ಗೆ ಸ್ತನ ಕ್ಯಾನ್ಸರ್: ಬ್ರೆಸ್ಟ್​​ ಕ್ಯಾನ್ಸರ್​ ವಿರುದ್ಧ ಹೋರಾಡಿದ ನಟಿಮಣಿಯರಿವರು - Breast Cancer

ಜೂನ್ 28ರಂದು ನಟಿ ಹೀನಾ ಖಾನ್ ತಮ್ಮ ಸ್ತನ ಕ್ಯಾನ್ಸರ್ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.​ ಚಿಕಿತ್ಸೆ ಪ್ರಾರಂಭಿಸಿರುವುದಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದರು. ನಂತರ ನಟಿ ಸ್ವೀಕರಿಸಿದ ಪ್ರೀತಿ, ಬೆಂಬಲವು ಅಗಾಧ. ಸೆಲೆಬ್ರಿಟಿಗಳು, ಸಹ-ನಟರು, ಸ್ನೇಹಿತರು ಮತ್ತು ಅಭಿಮಾನಿಗಳು ಸೋಷಿಯಲ್​ ಮೀಡಿಯಾ ಪೋಸ್ಟ್​​, ಕಾಮೆಂಟ್​ಗಳೊಂದಿಗೆ ನಟಿಗೆ ಧೈರ್ಯ ತುಂಬೋ ಕೆಲಸ ಮಾಡಿದ್ರು. ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

ಇದನ್ನೂ ಓದಿ: 'ಸನ್ ಆಫ್ ಸರ್ದಾರ್' ಸೀಕ್ವೆಲ್​ಗೆ ಸಜ್ಜಾದ ಅಜಯ್ ದೇವ್​​ಗನ್, ಸಂಜಯ್​ ದತ್​ - Son of Sardaar 2

ಇನ್ನು ದಕ್ಷಿಣ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ಸಮಂತಾ ರುತ್​ ಪ್ರಭು ಕೂಡ ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆ ವಿರುದ್ಧ ಹೋರಾಡಿದ್ದಾರೆ. ಕಳೆದ ವರ್ಷ ಸೋಷಿಯಲ್​​ ಮೀಡಿಯಾ ಪೋಸ್ಟ್​​​ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದರು. ಆಗಿನ ತಮ್ಮ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿ, ನಂತರ ಕೊಂಚ ಸಮಯ ತಮಗಾಗಿ ಸಮಯ ಮೀಸಲಿಟ್ಟರು. ಏಪ್ರಿಲ್​ ಕೊನೆಗೆ ತಮ್ಮ ಮುಂದಿನ ಚಿತ್ರ 'ಬಂಗಾರಂ' ಅನ್ನು ಅಧಿಕೃತವಾಗಿ ಘೋಷಿಸಿ, ಫಸ್ಟ್ ಲುಕ್​​ ಪೋಸ್ಟರ್ ಅನ್ನೂ ಹಂಚಿಕೊಂಡಿದ್ದರು. ಖ್ಯಾತ ನಟಿ ನಟಿಸಿ, ನಿರ್ಮಾಣ ಮಾಡುತ್ತಿರುವ ಚಿತ್ರವಿದು. ಸಮಂತಾ ನಿರ್ಮಾಣದ ಚೊಚ್ಚಲ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ನಟಿಯನ್ನು ಬಿಗ್​ ಸ್ಕ್ರೀನ್​ನಲ್ಲಿ ಕಾಣಲು ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ಕಾತರರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.