ETV Bharat / entertainment

'ಗಜರಾಮ'ನ ಸಾರಾಯಿ ಶಾಂತಮ್ಮ ಅದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಗಜರಾಮ'ನ ಸಾರಾಯಿ ಶಾಂತಮ್ಮ ಹಾಡು ಅನಾವರಣಗೊಂಡಿದೆ. ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಾಂಗ್​ನಲ್ಲಿ ಮೈ ಕುಣಿಸಿದ್ದಾರೆ.

Ragini Dwivedi - Rajavardhan
ರಾಗಿಣಿ ದ್ವಿವೇದಿ - ರಾಜವರ್ಧನ್ (ETV Bharat)
author img

By ETV Bharat Entertainment Team

Published : Oct 30, 2024, 5:33 PM IST

ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬಿಚ್ಚುಗತ್ತಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ರಾಜವರ್ಧನ್ ಇತ್ತೀಚೆಗಷ್ಟೇ 'ಹಿರಣ್ಯ' ಶೀರ್ಷಿಕೆಯ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಗಜರಾಮ'.

ಟೈಟಲ್ ಹಾಗೂ ಒಂದಷ್ಟು ಝಲಕ್ ಮೂಲಕ ಕುತೂಹಲ ಹೆಚ್ಚಿಸಿರುವ 'ಗಜರಾಮ' ಸಿನಿಮಾದ ಸ್ಪೆಷಲ್ ಸಾಂಗ್​​ ರಿಲೀಸ್ ಆಗಿದೆ. ಮೇಕಿಂಗ್ ಹಂತದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ಸಾರಾಯಿ ಶಾಂತಮ್ಮ ಹಾಡು ಈಗ ಆನಂದ್ ಆಡಿಯೋ ಯೂಟ್ಯೂಬ್​ನಲ್ಲಿ ಅನಾವರಣಗೊಂಡಿದೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಾರಾಯಿ ಶಾಂತಮ್ಮ ಸಾಂಗ್ ರಿಲೀಸ್​ ಆಗಿದ್ದು, ಈವೆಂಟ್​ನಲ್ಲಿ ನಟ ರಾಜವರ್ಧನ್, ನಟಿ ರಾಗಿಣಿ ಸೇರಿದಂತೆ ಇಡೀ ತಂಡ ಭಾಗಿಯಾಗಿತ್ತು.

ಹಾಡು ಬಿಡುಗಡೆ ಬಳಿಕ ನಟ ರಾಜವರ್ಧನ್ ಮಾತನಾಡಿ, ಈ ಹಾಡಿಗಾಗಿ ತುಂಬಾ ಕಾಯುತ್ತಿದ್ದೆವು. ವಿಡಿಯೋ ಸಾಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಗಜರಾಮ ಸಿನಿಮಾ ಒಂದು ಕಡೆಯಾದರೆ, ಈ ಸಾಂಗ್ ಒಂದು ಕಡೆ. ಈ ಹಾಡಿಗೆ ಸಾಕಷ್ಟು ಖರ್ಚಾಗಿದೆ. ಸಾಮಾನ್ಯವಾಗಿ ಈ ರೀತಿಯ ಹಾಡನ್ನು ಮಾಡಲು ಕಷ್ಟ ಆಗುತ್ತದೆ. ಆದ್ರೆ ಸಾಂಗ್ ಅದ್ಭುತವಾಗಿ ಮೂಡಿಬಂದಿದೆ. ಚಿನ್ಮಯ್​ ಸರ್ ಒಳ್ಳೆ ಲಿರಿಕ್ಸ್ ಬರೆದುಕೊಟ್ಟರು. ಧನು ಮಾಸ್ಟರ್ ಅದ್ಭುತ ಕೊರಿಯೋಗ್ರಫಿ ಮಾಡಿದ್ದಾರೆ. ನಿರ್ದೇಶಕರು ಸಿನಿಮಾಗಾಗಿ ಸಾಕಷ್ಟು ದುಡಿದಿದ್ದಾರೆ. ಇಡೀ ತಂಡದ ಶ್ರಮದಿಂದ ಸಿನಿಮಾವನ್ನು ಚೆನ್ನಾಗಿ ಮಾಡಿದ್ದೇವೆ ಎಂದರು.

GAJARAMA movie event
'ಗಜರಾಮ' ಸಾಂಗ್​ ರಿಲೀಸ್​ ಈವೆಂಟ್​ (ETV Bharat)

ನಟಿ ರಾಗಿಣಿ ದ್ವಿವೇದಿ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಸಂತಸ ಇದೆ. ಒಂದು ವರ್ಷದಿಂದ ಈ ಚಿತ್ರದಲ್ಲಿ ಪಯಣ ಮಾಡಿಕೊಂಡು ಬರುತ್ತಿದ್ದೇವೆ. ಹಾಡಿನಲ್ಲಿ ರಾಜ್ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಮನೋಮೂರ್ತಿ ಸರ್ ಇಷ್ಟು ಒಳ್ಳೆಯ ಮ್ಯೂಸಿಕ್ ಕೊಡುತ್ತಾರೆ ಎಂದುಕೊಂಡಿರಲಿಲ್ಲ. ಈ ಹಾಡು ಕೇಳಿ ಎಲ್ಲರಿಗೂ ಒಂದೊಳ್ಳೆ ಪಾಸಿಟಿವ್ ವೈಬ್ಸ್ ಬಂದಿದೆ ಎಂದುಕೊಳ್ಳುತ್ತೇನೆ. ಸಿನಿಮಾ ಮಾಡೋದು ತುಂಬಾ ಕಷ್ಟ. ಬಹಳ ತಾಳ್ಮೆಯಿಂದ, ಹಾರ್ಡ್ ವರ್ಕ್​​​ನಲ್ಲಿ ಸಿನಿಮಾ ಮಾಡುವುದು ಒಂದು ಚಾಲೆಂಜ್ ಎಂದರು.

ಇದನ್ನೂ ಓದಿ: ದರ್ಶನ್​​ಗೆ ಮಧ್ಯಂತರ ಜಾಮೀನು: ಹರ್ಷ ವ್ಯಕ್ತಪಡಿಸಿದ ನಿರ್ದೇಶಕ ನಂದಕಿಶೋರ್; ನಟನ ಮನೆ, ಕಾರು ಶುಚಿಗೊಳಿಸಿದ ಕೆಲಸಗಾರರು

ಗಜರಾಮ ಸಿನಿಮಾದ ಸಾರಾಯಿ ಶಾಂತಮ್ಮ ಹಾಡಿಗೆ ಚಿನ್ಮಯ್ ಭಾವಿಕೆರೆ ಸಾಹಿತ್ಯ ಬರೆದಿದ್ದು, ಮಂಗ್ಲಿ ಹಾಗೂ ಕುನಲ್ ಗಾಂಜಾವಾಲಾ ಧ್ವನಿಯಾಗಿದ್ದಾರೆ. ಮನೋಮೂರ್ತಿ ರಾಕಿಂಗ್ ಮ್ಯೂಸಿಕ್, ಮ್ಯಾಸೀವ್ ಸ್ಟಾರ್ ರಾಜವರ್ಧನ್ ಹಾಗೂ ಮಾಸ್ ಕ್ವೀನ್ ರಾಗಿಣಿ ದ್ವಿವೇದಿ ಭರ್ಜರಿ ಕುಣಿತ ಹಾಡಿನ ತೂಕ ಹೆಚ್ಚಿಸಿದೆ. ಈ ಸಿನಿಮಾವನ್ನು ಯುವ ನಿರ್ದೇಶಕ ಸುನಿಲ್ ಕುಮಾರ್ ವಿ.ಎ ನಿರ್ದೇಶನ ಮಾಡುತ್ತಿದ್ದಾರೆ. ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ರಾಜವರ್ಧನ್ ಅವರಿಗೆ ಜೋಡಿಯಾಗಿ ತಪಸ್ವಿನಿ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್ ನಟಿಸಿದ್ದಾರೆ. ಕಬೀರ್ ಸಿಂಗ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.

GAJARAMA movie event
'ಗಜರಾಮ' ಚಿತ್ರತಂಡ (ETV Bharat)

ಇದನ್ನೂ ಓದಿ: 'ಟಾಕ್ಸಿಕ್' ಶೂಟಿಂಗ್ ಸ್ಪಾಟ್​​​ಗೆ ಸಚಿವ ಈಶ್ವರ್​ ಖಂಡ್ರೆ ಭೇಟಿ: ಮತ್ತೆ ಸಂಕಷ್ಟದಲ್ಲಿ ಯಶ್​ ಸಿನಿಮಾ

ಆ್ಯಕ್ಷನ್ ಮಾಸ್ ಎಂಟರ್​ಟೈನರ್​ ಆಗಿರುವ 'ಗಜರಾಮ' ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡುತ್ತಿರುವುದು ವಿಶೇಷ. ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ ಮಾಡುತ್ತಿದ್ದು, ಜ್ಞಾನೇಶ್ ಬಿ. ಮಠದ್ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಈ ಸಿನಿಮಾಗಿದೆ. ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ಗಜರಾಮ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಡಿಸೆಂಬರ್ 27ಕ್ಕೆ ರಾಜ್ಯಾದ್ಯಂತ ಗಜರಾಮ ಸಿನಿಮಾ ಬಿಡುಗಡೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.