ETV Bharat / entertainment

ಯಶ್​ ಪುತ್ರನ 5ನೇ ಜನ್ಮದಿನ: ಕುಟುಂಬದ ಸುಂದರ ಕ್ಷಣಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್​​ - YATHARV 5TH BIRTHDAY

ಪುತ್ರ ಯಥರ್ವ್ ಜನ್ಮದಿನದ ಹಿನ್ನೆಲೆಯಲ್ಲಿ ಕುಟುಂಬದ ಸುಂದರ ಕ್ಷಣಗಳ ಸ್ಪೆಷಲ್​ ವಿಡಿಯೋವೊಂದನ್ನು ನಟಿ ರಾಧಿಕಾ ಪಂಡಿತ್​​ ಹಂಚಿಕೊಂಡಿದ್ದಾರೆ.

Rocking star Yash And Radhika Pandit
ರಾಕಿಂಗ್​ ಸ್ಟಾರ್ ಯಶ್ - ರಾಧಿಕಾ ಪಂಡಿತ್​​ (ANI)
author img

By ETV Bharat Entertainment Team

Published : Oct 30, 2024, 8:10 PM IST

ಕನ್ನಡ ಚಿತ್ರರಂಗದ ಎವರ್​ಗ್ರೀನ್​ ಬ್ಯೂಟಿ​ ರಾಧಿಕಾ ಪಂಡಿತ್​. ಒಂದು ಸಮಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದ ಇವರು ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಹಾಗಂತ ನಟಿಯ ಸ್ಟಾರ್​ಡಮ್​ ಏನೂ ಕಡಿಮೆ ಆಗಿಲ್ಲ. ಅವರ ಕ್ರೇಜ್​ ಈಗಲೂ ಅಷ್ಟೇ ಇದೆ. ಇದೀಗ ಹೊಸ ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ರಾಧಿಕಾ ಪಂಡಿತ್​​​ ಆರೇಳು ವರ್ಷಗಳಿಂದ ಸಂಸಾರ, ಮಕ್ಕಳು ಅಂತಾ ಸಖತ್​​​ ಬ್ಯುಸಿಯಾಗಿದ್ದಾರೆ. ಸಿನಿಮಾಗಳಿಂದ ದೂರವುಳಿದಿದ್ದರೂ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​​​. ಆಗಾಗ್ಗೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಹೊಸ ಹೊಸ ಪೋಸ್ಟ್​ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಮಗ ಯಥರ್ವ್ ಐದನೇ ಹುಟ್ಟುಹಬ್ಬದ ಸಲುವಾಗಿ ಕ್ಯೂಟ್​ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಕಿಂಗ್​​ ಫ್ಯಾಮಿಲಿಯ ಹಲವು ಸುಂದರ ಕ್ಷಣಗಳಿವೆ.

ದಿ ಮೋಸ್ಟ್​ ಅಮೇಜಿಂಗ್​​ ಬಾಯ್​ ಆಗಿ ಬೆಳೆಯುವುದನ್ನು ನೋಡುತ್ತಿರುವುದಕ್ಕೆ ಐದು ವರ್ಷಗಳು. ನಮ್ಮ ಪುಟ್ಟ ಸನ್​ಶೈನ್​ಗೆ 5ನೇ ಹುಟ್ಟುಹಬ್ಬದ ಶುಭಾಶಯಗಳು ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಕಾಲಾಯ ತಸ್ಮೈ ನಮಃ': ದರ್ಶನ್​​ ಬೇಲ್​ ಬೆನ್ನಲ್ಲೇ ನಟಿ ರಚಿತಾ ರಾಮ್​ ಹೇಳಿದ್ದಿಷ್ಟು

2019ರ ಅಕ್ಟೋಬರ್​ 30ರಂದು ಯಥರ್ವ್​ ಜನಿಸಿದ್ದಾನೆ.​ ಅಪ್ಪ, ಅಮ್ಮನಂತೆ ಇಬ್ಬರು ಮಕ್ಕಳಿಗೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈಗಾಗಲೇ ತಮ್ಮ ಕ್ಯೂಟ್​ ವಿಡಿಯೋಗಳ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿದ್ದಾರೆ. ರಾಧಿಕಾ ಪಂಡಿತ್​ ಮಕ್ಕಳ ಹಲವು ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹನುಮಾನ್ ಪಾತ್ರದಲ್ಲಿ ರಿಷಬ್​ ಶೆಟ್ಟಿ: ಟಾಲಿವುಡ್​ನಲ್ಲಿ ಛಾಪು ಮೂಡಿಸಲು ಕಾಂತಾರ ಸ್ಟಾರ್ ರೆಡಿ

ಆದ್ರೆ ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯಶ್​, ''ಮಕ್ಕಳಿಗೆ ಈಗಲೇ ಯಾವುದೇ ಸ್ಥಾನಮಾನ, ವಿಶೇಷ ಗೌರವ ಕೊಡಬೇಡಿ. ಪ್ರೀತಿಸಿ, ಆಶೀರ್ವದಿಸಿ. ಅವರು ತಮ್ಮ ಜೀವನದಲ್ಲಿ ಏನಾದರೂ ಸಾಧಿಸಿದ ಮೇಲೆಯೇ ಅವರಿಗೆ ಗೌರವ ಕೊಡಿ'' ಎಂದು ಹೇಳಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.