ETV Bharat / entertainment

'ನಿಮ್ಮ ಮನೆಮನಗಳಿಗೆ ಬರುತ್ತಿರುವ ಅಣ್ಣಯ್ಯನಿಗೆ ಶುಭವಾಗಲಿ': ಪ್ರಮೋದ್​​​ ನಿರ್ಮಾಣದ ಧಾರವಾಹಿಗೆ ರಿಷಬ್​ ಶೆಟ್ಟಿ ಸಾಥ್ - Annayya Serial - ANNAYYA SERIAL

ಪ್ರಮುಖ ಪೋಷಕ ಪಾತ್ರಗಳು, ಖಳನಾಯಕನ ಪಾತ್ರಗಳ ಮೂಲಕ ಜನಪ್ರಿಯರಾಗಿರುವ ಪ್ರಮೋದ್​ ಶೆಟ್ಟಿ ನಿರ್ಮಾಣದ ಚೊಚ್ಚಲ ಧಾರಾವಾಹಿ 'ಅಣ್ಣಯ್ಯ' ಇಂದಿನಿಂದ ಪ್ರಸಾರ ಕಾಣುತ್ತಿದೆ. ಗೆಳೆಯನ ಹೊಸ ಪ್ರಯತ್ನಕ್ಕೆ ಡಿವೈನ್​ ಸ್ಟಾರ್ ರಿಷಬ್ ಶೆಟ್ಟಿ​ ಸಾಥ್​​ ಸಿಕ್ಕಿದೆ.

Rishabh Shetty promoting Annayya serial produced by Pramod Shetty
ಪ್ರಮೋದ್​​​ ನಿರ್ಮಾಣದ ಧಾರವಾಹಿಗೆ ರಿಷಬ್​ ಶೆಟ್ಟಿ ಸಾಥ್ (ETV Bharat)
author img

By ETV Bharat Entertainment Team

Published : Aug 12, 2024, 7:34 PM IST

ರಿಷಬ್​ ಶೆಟ್ಟಿ, ನಟನೆ, ನಿರ್ದೇಶನ, ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಏಳಿಗೆಯಲ್ಲಿ ಡಿವೈನ್​ ಸ್ಟಾರ್​​ ಪಾತ್ರ ಹಿರಿದು. ತಮ್ಮ ಚಿತ್ರಗಳ ಜೊತೆಗೆ ಹೊಸ ತಂಡಗಳನ್ನೂ ಸಹ ಅವರು ಬೆಂಬಲಿಸುತ್ತಿದ್ದಾರೆ. ಇದೀಗ ಹೊಸ ಧಾರವಾಹಿಗೆ ಬೆಂಬಲಿಸುವ ಮೂಲಕ ಗಮನ ಸೆಳೆದಿದ್ದಾರೆ.

'ಅಣ್ಣಯ್ಯ' ಸಿರಿಯಲ್​ಗೆ ಕಾಂತಾರ ಶಿವನ ಸಾಥ್: ಝೀ ಕನ್ನಡದಲ್ಲಿ ಇಂದಿನಿಂದ ಹೊಸ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಇದು ಅಣ್ಣ ತಂಗಿಯ ಕಥೆಯಾಗಿದ್ದು, 'ಅಣ್ಣಯ್ಯ' ಸಿರಿಯಲ್​ನ ಶೀರ್ಷಿಕೆ. ನಾಯಕ ನಟನಿಗೆ ನಾಲ್ಕು ತಂಗಿಯರು. ಅವರಿಗೆ ಮದುವೆ ಮಾಡುವ ಜವಾಬ್ದಾರಿ ಅಣ್ಣನದ್ದು. ತಂಗಿಯರ ಜವಾಬ್ದಾರಿ ಹೊರುವ ಅಣ್ಣನ ಕಥೆಯನ್ನು ಈ ಧಾರಾವಾಹಿ ಒಳಗೊಂಡಿದೆ. ಡಿವೈನ್​ ಸ್ಟಾರ್ ಖ್ಯಾತಿಯ ರಿಷಬ್​ ಶೆಟ್ಟಿ ಅವರೀಗ ಈ ತಂಡಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಈ ಅಣ್ಣಯ್ಯ ಧಾರವಾಹಿಯನ್ನು ರಿಷಬ್​ ಶೆಟ್ಟಿ ಗೆಳೆಯ ಪ್ರಮೋದ್​ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಸೀರಿಯಲ್​ ಪ್ರೊಡಕ್ಷನ್​ನಲ್ಲಿ ಪ್ರಮೋದ್​ ಅವರಿಗಿದು ಮೊದಲ ಹೆಜ್ಜೆ. ಗೆಳೆಯನ ಹೊಸ ಪ್ರಯತ್ನಕ್ಕೆ ರಿಷಬ್​ ಅವರ ಬಲ​​ ಸಿಕ್ಕಿದೆ. ಸ್ಪೆಷಲ್​ ಪ್ರಮೋಶನ್​ ವಿಡಿಯೋವನ್ನು ಝೀ ಕನ್ನಡ ಹಂಚಿಕೊಂಡಿದ್ದು, ಸಖತ್​ ಸದ್ದು ಮಾಡುತ್ತಿದೆ.

ಇನ್​ಸ್ಟಾಗ್ರಾಮ್​ ಪೋಸ್ಟ್: ಝೀ ಕನ್ನಡ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಎರಡು ವಿಡಿಯೋಗಳನ್ನು ಹಂಚಿಕೊಂಡಿದೆ. ಈ ಎರಡೂ ಪ್ರೋಮೋಗಳಲ್ಲಿ ಕಾಂತಾರ ಸ್ಟಾರ್​​ ರಿಷಬ್​ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಬೆಳಗ್ಗೆ ಹಂಚಿಕೊಂಡ ವಿಡಿಯೋಗೆ, ''ಅಣ್ಣ ಅನ್ನೋ ಪದಕ್ಕೆ ಎರಡೇ ಅಕ್ಷರ. ಆದ್ರೆ, ಅಣ್ಣನ ಪ್ರೀತಿ ಲೆಕ್ಕವೇ ಇಲ್ಲದಷ್ಟು ಎತ್ತರ. 'ಅಣ್ಣಯ್ಯ' ಇಂದಿನಿಂದ ರಾತ್ರಿ 7:30ಕ್ಕೆ'' ಎಂಬ ಕ್ಯಾಪ್ಷನ್​​ ಕೊಡಲಾಗಿದೆ. ಸಂಜೆ ಶೇರ್ ಮಾಡಲಾದ ಮತ್ತೊಂದು ವಿಡಿಯೋಗೆ, ''ಶಿವ-ಪಾರ್ವತಿಯ ಪ್ರೀತಿ ಕಥೆ ಭಾರೀ ಗಮ್ಮತ್ತುಂಟು ಅಂತಿದ್ದಾರೆ ಕಾಡುಬೆಟ್ಟು ಶಿವಣ್ಣ. 'ಅಣ್ಣಯ್ಯ' ಇಂದಿನಿಂದ ರಾತ್ರಿ 7:30ಕ್ಕೆ'' ಎಂದು ಬರೆಯಲಾಗಿದೆ.

ಪ್ರಮೋಶನಲ್​ ವಿಡಿಯೋದಲ್ಲೇನಿದೆ? ವಿಡಿಯೋದಲ್ಲಿ, ನಾನು ನಿಮಗೊಂದು ಕಥೆ ಹೇಳಲು ಬಂದೆ. ನಮ್ಮ ಶಿವಣ್ಣನಂದು. ಕಾಡು ಬೆಟ್ಟು ಶಿವಣ್ಣ ಅಲ್ಲ. ಮಾರಿಗುಡಿ ಶಿವಣ್ಣನ ಕಥೆ. ನಿಮ್ಮ ಮನೆಮನಗಳಿಗೆ ಬರುತ್ತಿರುವ ಅಣ್ಣಯ್ಯನಿಗೆ ಶುಭವಾಗ್ಲಿ. ಅಣ್ಣಯ್ಯ, ರಾತ್ರಿ 7:30ಕ್ಕೆ ಝೀ ಕನ್ನಡದಲ್ಲಿ ಎಂದು ಹೇಳುವ ಮೂಲಕ ರಿಷಬ್​​ ಶೆಟ್ಟಿ ವಿಭಿನ್ನವಾಗಿ ಪ್ರಮೋಶನ್​ ಮಾಡಿದ್ದಾರೆ.

ಇದನ್ನೂ ಓದಿ: ಕಾಂತಾರ ಸೂಪರ್ ಹಿಟ್ ಆದ್ರೂ ರಿಷಬ್ ಬಾಡಿಗೆ ಮನೆಯಲ್ಲಿದ್ದಾರೆ: ಪ್ರಮೋದ್ ಶೆಟ್ಟಿ - Pramod Shetty Interview

ಮತ್ತೊಂದು ವಿಡಿಯೋದಲ್ಲಿ, ಇವ್ಳೆ ನಮ್​ ಶಿವಣ್ಣ ಮನ್ಸ್ ಕದ್ದಿರೋ ಪಾರ್ವತಿ. ದಣಿಗಳ ಮಗ್ಳು, ಡಾಕ್ಟ್ರು. ಅಕ್ಷರನೇ ಕಲಿದಿರೋ ನಮ್​ ಶಿವಣ್ಣನ ಎದೆಯಲ್ಲಿ ಪ್ರೀತಿ ಹುಟ್ಟಿಸಿದವಳು. ಶಿವ ಪಾರ್ವತಿ ಲವ್​ ಸ್ಟೋರಿ ಭಾರಿ ಗಮ್ಮತ್ತುಂಟು ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಲಾಫಿಂಗ್​​ ಬುದ್ಧ' ಟ್ರೇಲರ್​ ರಿಲೀಸ್​ಗೆ ದಿನ ನಿಗದಿ: ರಿಷಬ್​ ನಿರ್ಮಾಣದ ಚಿತ್ರದಲ್ಲಿ ಮೋಡಿ ಮಾಡಲು ರೆಡಿಯಾದ ಪ್ರಮೋದ್​ - Laughing Buddha Trailer

ಇವ್ರು ಹ್ಯಾಟ್ರಿಕ್ ಹೀರೋ ಶಿವಣ್ಣನಂತೆಯೇ. ತಂಗಿ ಅಂದ್ರೆ ಬಹಳ ಪ್ರೀತಿ. ನಾಲ್ಕು ತಂಗಿಯರ ಬದುಕು ಚೆಂದವಾಗಬೇಕು ಅನ್ನೋದೇ ಅವರ ದೊಡ್ಡ ಕನಸು.​ ಅಣ್ಣನ ಕನಸು ಇಷ್ಟೇ ಅಲ್ಲ. ಭಾರಿ ಉಂಟು. ಈ ಧಾರವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7:30ಕ್ಕೆ ಪ್ರಸಾರ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.