ETV Bharat / entertainment

'RCB' ಕೋಣಗಳೊಂದಿಗೆ 'ಕಾಂತಾರ' ಶಿವ! ರಿಷಬ್​​ ಶೆಟ್ಟಿ ಹೇಳಿದ್ದು ಅರ್ಥವಾಯ್ತಾ?

ನಟ-ನಿರ್ದೇಶಕ ರಿಷಬ್​ ಶೆಟ್ಟಿ, 'ಆರ್​ಸಿಬಿ' ಸ್ಪೆಷಲ್​ ವಿಡಿಯೋ ಶೇರ್ ಮಾಡಿದ್ದಾರೆ.

Rishab Shetty
ರಿಷಬ್​ ಶೆಟ್ಟಿ
author img

By ETV Bharat Karnataka Team

Published : Mar 13, 2024, 4:33 PM IST

Updated : Mar 13, 2024, 4:43 PM IST

ಮಹಿಳಾ ಪ್ರೀಮಿಯರ್ ಲೀಗ್‌ ಅಂತಿಮ ಘಟ್ಟ ತಲುಪಿದೆ. ಕ್ರಿಕೆಟ್​ ಪ್ರೇಮಿಗಳಿಗೆ, ಸೋಷಿಯಲ್​ ಮೀಡಿಯಾ ಬಳಕೆದಾರರಿಗೆ 'ಡಬ್ಲ್ಯುಪಿಎಲ್​' ವಿಡಿಯೋ ತುಣುಕುಗಳು ಭರಪೂರ ಮನರಂಜನೆ ಕೊಡುತ್ತಿವೆ. ಇದರ ಜೊತೆಗೆ ಐಪಿಎಲ್​​ ಜ್ವರ ಕೂಡಾ ಶುರುವಾಗಿದೆ. ಎಂದಿನಂತೆ ಆರ್​ಸಿಬಿ ಅಭಿಮಾನಿಗಳು ಸಖತ್​ ಜೋಶ್​ನಲ್ಲಿದ್ದಾರೆ. 'ಈ ಬಾರಿ ಕಪ್​ ನಮ್ದೆ' ಅನ್ನೋ ಟಾಪ್​ ಡೈಲಾಗ್ ಆರ್​ಸಿಬಿ ಫ್ಯಾನ್ಸ್ ಕಡೆಯಿಂದ ಬರುತ್ತಿದೆ. ಐಪಿಎಲ್​ಗೆ ಬಿರುಸಿನ ತಯಾರಿ ನಡೆಯುತ್ತಿದ್ದು, ಅಭಿಮಾನಿಗಳು ಕಾತರರಾಗಿದ್ದಾರೆ. ಐಪಿಎಲ್​ ಅಬ್ಬರಕ್ಕೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಆರ್​ಸಿಬಿ ಕೋಣಗಳೊಂದಿಗೆ ಕಾಂತಾರದ ಶಿವ ಬಂದಿದ್ದಾರೆ.

ನಟ-ನಿರ್ದೇಶಕ ರಿಷಬ್​ ಶೆಟ್ಟಿ ಅವರ ವಿಶೇಷ ವಿಡಿಯೋವನ್ನು ಆರ್​​ಸಿಬಿ ತನ್ನ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ಪೋಸ್ಟ್​​ಗೆ, 'ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?' ಎಂಬ ಕುತೂಹಲಕಾರಿ ಕ್ಯಾಪ್ಷನ್​ ಕೊಟ್ಟಿದೆ. ರಿಷಬ್​ ಕೂಡ ಇದೇ ವಿಡಿಯೋ ಹಂಚಿಕೊಂಡಿದ್ದು, 'ನಿಮ್ಗೆ ಅರ್ಥ ಆಯ್ತಾ???​' ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ರಿಷಬ್​ ತಮ್ಮ ಬ್ಲಾಕ್​ಬಸ್ಟರ್ ಸಿನಿಮಾ 'ಕಾಂತಾರ'ದ ಶಿವನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವನ ಎಂಟ್ರಿಯಾಗುತ್ತಿದ್ದಂತೆ, ಮೂರು ಕೋಣಗಳು ಕಾಣಿಸಿಕೊಂಡಿವೆ. ಮೊದಲ ಕೋಣದ ಮೇಲೆ ಹೊದಿಸಿರುವ ಕೆಂಪು ಬಟ್ಟೆಯಲ್ಲಿ ರಾಯಲ್​ ಎಂದು ಬರೆಯಲಾಗಿದೆ. ಎರಡನೇ ಕೋಣದ ಮೇಲೆ ಚಾಲೆಂಜರ್ಸ್ ಎಂದು ಬರೆಯಲಾಗಿದೆ. ಮೂರನೇ ಕೋಣದ ಮೇಲೆ ಬ್ಯಾಂಗಲೂರ್ ಎಂದು ಬರೆದಿದೆ. ಬ್ಯಾಂಗಲೂರ್ ಎಂದು ಬರೆದಿರುವ ಮೂರನೇ ಕೋಣವನ್ನು ಕಂಡ ರಿಷಬ್​, ಭಟ್ರೆ ಇದು ಚೆನ್ನಾಗಿಲ್ಲ. ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಆ ತಕ್ಷಣ, ಬ್ಯಾಂಗಲೂರ್ ಎಂದು ಬರೆದಿರುವ ಕೋಣವನ್ನು ಅಲ್ಲಿಂದ ಕರೆದುಕೊಂಡು ಹೋಗಲಾಗುತ್ತದೆ. ಆಗ ರಿಷಬ್​, ಅರ್ಥವಾಯ್ತಾ? ಎಂದು ಕೇಳಿದ್ದಾರೆ.

ಇದನ್ನೂ ಓದಿ: ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್​​' ವೀಕ್ಷಿಸಲಿಚ್ಛಿಸಿದ ಕಿರಣ್ ರಾವ್

ಈ ವಿಡಿಯೋ ಹಲವರ ತಲೆಗೆ ಹುಳ ಬಿಟ್ಟಂತಾಗಿದೆ. ಏನಿದರ ಅರ್ಥ ಎಂದು ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಬ್ಯಾಂಗಲೂರ್ ಬದಲಿಗೆ ಬೆಂಗಳೂರು ಎಂದು ಬಳಸುವ ಯೋಚನೆ ಇದೆ. ಅದನ್ನೇ ಈ ವಿಡಿಯೋ ಮೂಲಕ ರಿಷಬ್​ ಶೆಟ್ಟಿ ತಿಳಿಸಿದ್ದಾರೆ ಅನ್ನೋದು ಹಲವರ ಅಭಿಪ್ರಾಯ.

ಇದನ್ನೂ ಓದಿ: 'ಬ್ಲಿಂಕ್' ಸಿನಿಮಾಗೆ ಶಿವರಾಜ್​​ಕುಮಾರ್​​ ಸಪೋರ್ಟ್; ಹೊಸ ತಂಡಗಳ ಬೆನ್ನು ತಟ್ಟಬೇಕೆಂದ ನಟ

ಇದೇ ಮಾರ್ಚ್ 19ಕ್ಕೆ ಆರ್​ಸಿಬಿ ಅನ್​ಬಾಕ್ಸ್ ಈವೆಂಟ್​ ಜರುಗಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಮಾಹಿತಿ ಸಿಗಲಿದೆ ಅನ್ನೋ ಸುಳಿವನ್ನು ಈ ವಿಡಿಯೋ ಬಿಟ್ಟುಕೊಟ್ಟಿದೆ. ಬೆಂಗಳೂರಿನಲ್ಲಿ ಆರ್​ಸಿಬಿ ಅನ್​ಬಾಕ್ಸ್ ಈವೆಂಟ್ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಭಾಗಿಯಾಗೋ ನಿರೀಕ್ಷೆ ಇದೆ. ಸದ್ಯ ಜನಪ್ರಿಯ ನಟ ರಿಷಬ್​ ಶೆಟ್ಟಿ ಅವರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

Last Updated : Mar 13, 2024, 4:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.