ETV Bharat / entertainment

ಕಮಲ್​ಗೆ ಮುಖಾಮುಖಿಯಾಗಿ ಅಕ್ಷಯ್​: ಒಂದೇ ದಿನ ಇಬ್ಬರು ಸ್ಟಾರ್​ಗಳ ಸಿನಿಮಾ ಬಿಡುಗಡೆ - Sarfira Makers Open Advance Booking - SARFIRA MAKERS OPEN ADVANCE BOOKING

ಜುಲೈ 12ಕ್ಕೆ ಅಕ್ಷಯ್​ ಕುಮಾರ್​ರ 'ಸರ್ಫಿರಾ' ಮತ್ತು ನಟ ಕಮಲ್​ ಹಾಸನ್​ರ 'ಇಂಡಿಯನ್​ 2' ಸಿನಿಮಾ ಬಿಡುಗಡೆಯಾಗುತ್ತಿದೆ.

release-clash-intensifies-as-sarfira-makers-open-advance-bookings-right-after-indian-2
ಸರ್ಫಿರಾ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 10, 2024, 4:35 PM IST

ಹೈದರಾಬಾದ್​: ಕಳೆದ ಮೂರು ದಶಕದಿಂದ ಜನರನ್ನು ಮನರಂಜಿಸುತ್ತಿರುವ ನಟ ಅಕ್ಷಯ್​ ಕುಮಾರ್​​, ಹಲವು ಬಿಗ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಸಿನಿಮಾಗಳು ಹೇಳಿಕೊಳ್ಳುವಂತ ಬಿಗ್​ ಹಿಟ್​ ನೀಡಿಲ್ಲ. ಇತ್ತೀಚಿಗೆ ತೆರೆ ಕಂಡ 'ಬಡೇ ಮಿಯಾ ಚೋಟೆ ಮಿಯಾ', 'ಮಿಷನ್​​ ರಾಣಿಗಂಜ್'​ ಮತ್ತು 'ಸೆಲ್ಫಿ' ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡಿಲ್ಲ. ಆದರೆ, ಇದೀಗ ತಮ್ಮದೇ ಸಂಸ್ಥೆ ಮೂಲಕ ಮತ್ತೊಂದು ಸಿನಿಮಾ ಮೂಲಕ ಬೆಳ್ಳಿ ತೆರೆ ಮೇಲೆ ಬರಲು ಅಕ್ಷಯ್​ ಕುಮಾರ್ ಮುಂದಾಗಿದ್ದಾರೆ. ಹಲವು ನಿರೀಕ್ಷೆ ಹೊತ್ತು ಬರುತ್ತಿರುವ ಅಕ್ಷಯ್​ ಹೊಸ ಸಿನಿಮಾ 'ಸರ್ಫಿರಾ' ಬಿಗ್​ ಹಿಟ್​​ ಆಗುವ ನಿರೀಕ್ಷೆ ಹೊಂದಿದ್ದಾರೆ.

ತಮಿಳಿನಲ್ಲಿ ನಟ ಸೂರ್ಯ ನಟಿಸಿದ್ದ 'ಸೂರರೈ ಪೊಟ್ರು' ಸಿನಿಮಾದ ರಿಮೇಕ್​ ಸರ್ಫಿರಾ ಆಗಿದೆ. ಈ ಚಿತ್ರ ಇದೇ ಜುಲೈ 12ಕ್ಕೆ ಬಿಡುಗಡೆಯಾಗುತ್ತಿದೆ. ಇದೇ ದಿನ ಕಮಲ್​ ಹಾಸನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಇಂಡಿಯನ್​ 2' ಕೂಡ ಬಿಡುಗಡೆಯಾಗುತ್ತಿದೆ. ಈ ಮೂಲಕ ಇಬ್ಬರು ಸೂಪರ್​ ಸ್ಟಾರ್​ಗಳ ಸಿನಿಮಾಗಳು ಮುಖಾಮುಖಿಯಾಗಲಿದೆ.

ಬುಧವಾರ 'ಸರ್ಫಿರಾ' ಚಿತ್ರದ ಪೋಸ್ಟರ್​ ಅನ್ನು ನಟ ಅಕ್ಷಯ್​​ ಕುಮಾರ್​ ಹಂಚಿಕೊಂಡಿದ್ದು, ಸಿನಿಮಾದ ಅಡ್ವಾನ್ಸ್​ ಬುಕ್ಕಿಂಗ್​ ಆರಂಭವಾಗಿರುವುದಾಗಿ ತಿಳಿಸಿದ್ದಾರೆ. ಹುಚ್ಚು ಕನಸೊಂದು ದೊಡ್ಡ ಪರದೆ ಮೇಲೆ ಹಾರುವ ಸಮಯವಿದು. ಅಡ್ವಾನ್ಸ್​ ಬುಕ್ಕಿಂಗ್​ ತೆರೆದಿದೆ ಎಂದು ಅಡಿಬರಹದ ಮೂಲಕ ಪೋಸ್ಟ್​ ಹಂಚಿಕೊಂಡಿರುವ ನಟ, ಶುಕ್ರವಾರ ಸರ್ಫಿರಾ ತೆರೆ ಕಾಣಲಿದೆ ಎಂದಿದ್ದಾರೆ.

ಕಡಿಮೆ ವೆಚ್ಚದಲ್ಲಿ ವಿಮಾನ ಯಾನ ಸ್ಥಾಪಿಸಿ, ಭಾರತೀಯ ವಿಮಾನಯಾನದಲ್ಲೇ ಹೊಸ ಕ್ರಾಂತಿಕಾರಕ ಹೆಜ್ಜೆ ಇಟ್ಟ ಕನ್ನಡಿಗ ಕ್ಯಾಪ್ಟನ್​ ಗೋಪಿನಾಥನ್​ ಕಥೆ ಚಿತ್ರ ಹೊಂದಿದೆ.

ಹಿಂದಿಯಲ್ಲೂ ಈ ಸಿನಿಮಾಗೆ ನಿರ್ದೇಶಕಿ ಸುಧಾ ಕೊಂಗರಾ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರದಲ್ಲಿ ನಟ ಅಕ್ಷಯ್​​ ಕುಮಾರ್​ಗೆ ರಾಧಿಕ ಮದನ್​ ಜೊತೆಯಾಗಿದ್ದು, ಪರೇಶ್​ ರಾವಲ್​, ಸೀಮಾ ಬಿಸ್ವಾಸ್​ ಪ್ರಮುಖ ಪಾತ್ರದಲ್ಲಿ ಕಂಡಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಸೂರ್ಯ ಕೂಡ ಕಾಣಿಸಲಿದ್ದಾರೆ.

ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಂಡಸ್ಟ್ರಿ ಟ್ರಾಕರ್​ ಸ್ಯಾಕ್ನಿಕ್​ ಪ್ರಕಾರ, ಚಿತ್ರ 800 ಪರದೆಯಲ್ಲಿ ಬಿಡುಗಡೆಯಾಗುತ್ತಿದ್ದು, 2700 ಟಿಕೆಟ್​​ ಮಾರಾಟವಾಗಿದೆ. ಅಡ್ವಾನ್ಸ್​​ ಬುಕ್ಕಿಂಗ್​ನಿಂದ ಚಿತ್ರ 4.8 ಲಕ್ಷ ಗಳಿಸಿದೆ.

ಇದನ್ನೂ ಓದಿ: ಇನ್ನು 4 ದಿನದಲ್ಲಿ ದೊಡ್ಡ ಪರದೆ ಮೇಲೆ ಇಂಡಿಯನ್ 2; ಇನ್ನೂ ಆರಂಭವಾಗದ ಮುಂಗಡ ಬುಕಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.