ETV Bharat / entertainment

'UI' ರಿಲೀಸ್​ ಬೆನ್ನಲ್ಲೇ ಪ್ರೇಕ್ಷಕರಿಗೆ ಉಪೇಂದ್ರ ಸವಾಲ್​​: ಈ ಚಾಲೆಂಜ್​ ಸ್ವೀಕರಿಸುತ್ತೀರಾ? - REAL STAR UPENDRA

ತಮ್ಮ ಬಹುನಿರೀಕ್ಷಿತ ಸಿನಿಮಾ ಯು ಐ ರಿಲೀಸ್​ ಬೆನ್ನಲ್ಲೇ ಪ್ರೇಕ್ಷಕರಿಗೆ ಉಪೇಂದ್ರ ಸವಾಲು ಕೂಡಾ ಹಾಕಿದ್ದಾರೆ.

Real star Upendra
ರಿಯಲ್​ ಸ್ಟಾರ್ ಉಪೇಂದ್ರ (Photo: ETV Bharat)
author img

By ETV Bharat Entertainment Team

Published : Dec 20, 2024, 9:59 AM IST

ಕಾಯುವಿಕೆ ಕೊನೆಗೊಂಡಿದೆ. ಸೌತ್​ ಸಿನಿಮಾ ಇಂಡಸ್ಟ್ರಿಯ 'ಬುದ್ಧಿವಂತ' ಆ್ಯಕ್ಟರ್​, ಡೈರಕ್ಟರ್​ ಜನಪ್ರಿಯತೆಯ ಉಪೇಂದ್ರ ಸಾರಥ್ಯದ ಬಹುನಿರೀಕ್ಷಿತ ಸಿನಿಮಾ 'ಯು ಐ' ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ವಿಭಿನ್ನ ಶೀರ್ಷಿಕೆಯ ಸಿನಿಮಾ ಇಂದು, 20,12,2024​​ರ ಬೆಳಗ್ಗೆ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ತಮ್ಮ ಸಿನಿಮಾ ರಿಲೀಸ್​ ಬೆನ್ನಲ್ಲೇ ಪ್ರೇಕ್ಷಕರಿಗೆ ಉಪೇಂದ್ರ ಸವಾಲು ಕೂಡಾ ಎಸೆದಿದ್ದಾರೆ.

ವಿಭಿನ್ನ ಆಲೋಚನೆಯ ನಿರ್ದೇಶಕ; ಸಿನಿಮಾ ವಿಚಾರಕ್ಕೆ ಬಂದರೆ ಉಪೇಂದ್ರ ಅವರ ಯೋಚನಾ ಶೈಲಿಯೇ ವಿಭಿನ್ನ. ಸಿನಿಮಾ ನೋಡುವ, ಮಾಡುವ, ಅರ್ಥಮಾಡಿಕೊಳ್ಳುವ ಅವರ ಸಾಮರ್ಥ್ಯ ಪ್ರೇಕ್ಷಕರ ಚರ್ಚೆಯ ವಿಷಯಗಳಲ್ಲೊಂದು. ಅದರಲ್ಲೂ ಅವರೇ ನಿರ್ದೇಶಿಸಿ, ನಟಿಸಿದ್ದಾರೆ ಎಂದರೆ ಕೇಳೋದೇ ಬೇಡ. ವಿಭಿನ್ನದಲ್ಲಿ ವಿಭಿನ್ನ ಅಂತಲೇ ಹೇಳಬಹುದು. ಹೊಸ ಹೊಸ ಪ್ರಯೋಗಗಳನ್ನು ಸಿನಿಪ್ರಿಯರಿಗೆ ತಲುಪಿಸುವ ಪ್ರಯತ್ನ ರಿಯಲ್​ ಸ್ಟಾರ್​ನದ್ದು.

ಅದರಂತೆ ವಿಶಿಷ್ಠ ಕಥಾಹಂದರ ಹೊಂದಿರುವ ಸಿನಿಮಾ 'ಯುಐ' ಇಂದು ಬಿಡುಗಡೆ ಆಗಿದೆ. ಸಿನಿಮಾ ವೀಕ್ಷಿಸಿ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋ ಕುತೂಹಲ ಇದೆ. ಹೀಗಿರುವಾಗಲೇ ಸಿನಿಮಾ ನೋಡುಗನಿಗೆ ರಿಯಲ್​ ಸ್ಟಾರ್​​ ಸವಾಲೊಂದನ್ನು ಎಸೆದಿದ್ದಾರೆ.

ಉಪ್ಪಿ ಸವಾಲೇನು? ನಟ-ನಿರ್ದೇಶಕ ಉಪೇಂದ್ರ ತಮ್ಮ ಸಿನಿಮಾ ಬಿಡುಗಡೆ ಬೆನ್ನಲ್ಲೇ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​ಗಳಲ್ಲಿ ಪೋಸ್ಟ್​ ಒಂದನ್ನು ಶೇರ್​​ ಮಾಡಿದ್ದಾರೆ. ಅದರಲ್ಲಿ, ''ಕಾತರದಿಂದ ಕಾಯುತ್ತಿದ್ದೇನೆ.. U I ಚಿತ್ರದ ಎಷ್ಟು ಸೀನ್​​ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು…..'' ಬರೆದುಕೊಂಡಿದ್ದಾರೆ. ಹಾಗಾದ್ರೆ ಸಿನಿಮಾ ಹೇಗಿರಬಹುದೆನ್ನುವ ನೆಟ್ಟಿಗರ ಕುತೂಹಲ ಮತ್ತಷ್ಟು ಕೆರಳಿದೆ.

ಇದನ್ನೂ ಓದಿ: ಇಂದು 'ಯುಐ' ರಿಲೀಸ್​​: ಉಪ್ಪಿ ಸಿನಿಮಾ ಏಕೆ ನೋಡಬೇಕು? ಇಲ್ಲಿದೆ ಬಹುನಿರೀಕ್ಷಿತ ಚಿತ್ರದ ವಿಶೇಷತೆಗಳು

ಉಪೇಂದ್ರ ಅವರ ಸಿನಿಮಾಗಳು ವೀಕ್ಷಕರ ತಲೆಗೆ ಕೆಲಸ ಕೊಡುತ್ತೆ ಅನ್ನೋ ಮಾತು ಈಗಾಗಲೇ ಸಾಬೀತು ಮಾಡಿದೆ. ಸದ್ಯ ನಟನ ಹಂಚಿಕೊಂಡಿರುವ ಪೋಸ್ಟ್​ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ. ಈ ಬಗ್ಗೆ ಸೋಷಿಯಲ್​ ಮೀಡಿಯಾಗಳಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: 'ಯುಐ' ಜೊತೆಗೆ "ರಕ್ತ ಕಾಶ್ಮೀರ" ಅಂತಿದ್ದಾರೆ ಉಪೇಂದ್ರ: 16 ವರ್ಷಗಳ ಹಿಂದೆಯೇ ಶೂಟಿಂಗ್ ಮುಗಿಸಿರುವ ಸಿನಿಮಾ

ಹುಳ ಬಿಡಬೇಡಿ ಗುರು: ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, 'ಹುಳ ಬಿಡಬೇಡಿ ಗುರು ಮುಂಜಾನೆನೇ' ಎಂದು ತಿಳಿಸಿದ್ದಾರೆ. ಅಭಿಮಾನಿಯೋರ್ವರು ರಿಯಾಕ್ಟ್​ ಮಾಡಿ, 'ಅಯ್ಯೋ ಬೆಳಗ್ಗೆ ಬೆಳಗ್ಗೆನೇ ತಲೆಗೆ ಹುಳ ಬಿಡೋದಾ ಬಾಸ್' ಎಂದು ಕೇಳಿದ್ದಾರೆ. ಮತ್ತೋರ್ವ ನೆಟ್ಟಿಗ ಮತ್ತಷ್ಟು ವಿಭಿನ್ನವಾಗಿ ರಿಯಾಕ್ಷನ್​ ಕೊಟ್ಟಿದ್ದಾರೆ. ನಮ್ಮ ಜನಕ್ಕೆ ಕನಿಷ್ಠ ಒಂದು 25 ವರ್ಷ ಆದ್ರೂ ಬೇಕು ಡೀಕೋಡ್ ಮಾಡೋಕೆ. ಯಾಕೆಂದ್ರೆ A & ಉಪೇಂದ್ರ ಸಿನಿಮಾಗಳೇ ಇನ್ನೂ ಡಿಕೋಡ್ ಮಾಡೋಕೆ ಆಗಿಲ್ಲ'' ಎಂದು ತಿಳಿಸಿದ್ದಾರೆ. ಸಿನಿಪ್ರಿಯರೋರ್ವರು 'ಒಂದು 20 ಸಲ ಸಿನಿಮಾ ನೋಡಿ ಆಮೇಲೆ ಒಂದು 20 ವರ್ಷ ಆದಮೇಲೆ ಅರ್ಥ ಆಗುತ್ತೆ ಹಿಂದಿನ ಮೂವಿಗಳು ಕೆಲವರಿಗೆ ಈಗ್ಲೂ ಅರ್ಥ ಆಗಿಲ್ಲ'' ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.